ಲೇಖನ

Advt_Headding_Middle

ಸ್ನೇಹ-ಸಂಬಂಧಗಳ ನಡುವಿನ ಬಂಧ

“ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸ” ಹೇಳಲು ಇದೊಂದು ಚಿಕ್ಕ ಪದ. ಆದರೆ ಈ ಜಗತ್ತಿನಲ್ಲಿ ಈ ಪ್ರೀತಿ, ಸ್ನೇಹ, ನಂಬಿಕೆ ಹಾಗೂ ವಿಶ್ವಾಸಗಳಿಗಿರುವಷ್ಟು ಬೆಲೆ ಯಾವುದಕ್ಕೂ ಇಲ್ಲ. ಏಕೆಂದರೆ ಈ ಸಂಬಂಧ ಅನ್ನುವುದು ಪ್ರೀತಿ, ಸ್ನೇಹ, ನಂಬಿಕೆ ಹಾಗೂ ವಿಶ್ವಾಸಗಳೆನ್ನುವ ಭದ್ರ ಬುನಾದಿಯ ಮೇಲೆ ನಿಂತಿದೆ.

ಒಂದು ಕಟ್ಟಡ ಕಟ್ಟಬೇಕಾದರೂ ಅಲ್ಲಿ ಕಟ್ಟಡ ಕಟ್ಟುವ ಮೊದಲು ಅಡಿಪಾಯ ಹಾಕಿ ನಂತರ ಕಟ್ಟಡ ಕಟ್ಟುತ್ತಾರೆ. ಏಕೆಂದರೆ ಅಡಿಪಾಯ ಅನ್ನುವುದು ಗಟ್ಟಿಯಾಗಿದ್ದರೆ ಮಾತ್ರ ಆ ಕಟ್ಟಡ ಹತ್ತಾರು ವರ್ಷ ಅಥವಾ ನೂರಾರು ವರ್ಷ ಬಾಳ್ವಿಕೆ ಬರಲು ಸಾಧ್ಯ. ಒಂದು ವೇಳೆ ಅಡಿಪಾಯ ಗಟ್ಟಿಯಾಗಿ ಇಲ್ಲದೇ ಇದ್ದರೆ ಆ ಕಟ್ಟಡ ಯಾವ ಸಮಯದಲ್ಲಾದರೂ ಕುಸಿದು ಬೀಳಬಹುದು.
ಅದೇ ರೀತಿ ನಾವು ಸಂಬಂಧ ಎಂಬ ಕಟ್ಟಡ ಕಟ್ಟಬೇಕಾದರೆ ಅಲ್ಲಿ ಪ್ರೀತಿ, ಸ್ನೇಹ, ನಂಬಿಕೆ ಹಾಗೂ ವಿಶ್ವಾಸಗಳೆನ್ನುವ ಅಡಿಪಾಯ ಹಾಕಬೇಕು. ಅಡಿಪಾಯ ಗಟ್ಟಿಯಾಗಿದ್ದರೆ ಸಂಬಂಧಗಳು ಎಂದಿಗೂ ಹಾಳಾಗಲು ಸಾಧ್ಯವಿಲ್ಲ.

ಮುಖ್ಯವಾಗಿ ಹೇಳುವುದಾದರೆ “ಗೆಳೆತನ”. ಗೆಳೆತನ ಎಂದರೆ ಅಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಇದ್ದೇ ಇರುತ್ತವೆ. ಆದರೆ ನಾವು ಇರುವ ಆ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡರೆ ಆ ಗೆಳೆತನ ಶಾಶ್ವತವಾಗಿರುತ್ತದೆ.
ಈ ಜಗತ್ತಿನಲ್ಲಿ ಇಬ್ಬರು ಸ್ನೇಹಿತರು ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಂದ ಸಂತೋಷವಾಗಿ ಇದ್ದರೆ ಹಲವರಿಗೆ ಆ ಸ್ನೇಹವು ಹೊಟ್ಟೆ ಕಿಚ್ಚು ತರಬಹುದು ಹಾಗೂ ಅವರು ಆ ಸ್ನೇಹಿತರ ನಡುವಿನ ವಿಶ್ವಾಸ ಮತ್ತು ನಂಬಿಕೆಯನ್ನು ಹಾಳುಮಾಡಿ ಅವರಿಬ್ಬರನ್ನು ದೂರ ಮಾಡಬೇಕೆಂದು ಹೊಂಚು ಹಾಕಿ ಹವಣಿಸುತ್ತಿರಬಹುದು. ಆದರೆ ಆ ಸ್ನೇಹಿತರ ನಡುವಿನ ಸ್ನೇಹ ಗಟ್ಟಿಯಾಗಿದ್ದರೆ ಯಾರು ಏನೇ ಮಾಡಿದರೂ ಆ ಸ್ನೇಹವನ್ನು ಮುರಿಯಲು ಸಾಧ್ಯವಿಲ್ಲ.

ನಿಜವಾದ ಸಂಬಂಧದಲ್ಲಿ “ನಾನು-ನನ್ನದು-ನನಗಾಗಿ” ಎನ್ನುವ ಸ್ವಾರ್ಥದ ಭಾವನೆ ಇರಬಾರದು, ಬದಲಾಗಿ “ನಾವು-ನಮ್ಮವರು-ನಮ್ಮೆಲ್ಲರಿಗಾಗಿ” ಎನ್ನುವ ನಿಸ್ವಾರ್ಥದ ಭಾವನೆ ಇರಬೇಕು. ಏಕೆಂದರೆ ಸ್ವಾರ್ಥದ ಭಾವನೆಯು ಎಂದಿಗೂ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವುದಿಲ್ಲ ಬದಲಾಗಿ ಅವನತಿಯತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಸ್ವಾರ್ಥದ ಭಾವನೆಯನ್ನು ಬಿಟ್ಟು “ನಾವು-ನಮ್ಮವರು-ನಮ್ಮೆಲ್ಲರಿಗಾಗಿ” ಎನ್ನುವ ನಿಸ್ವಾರ್ಥ ಭಾವನೆಯಿಂದ ಬದುಕಬೇಕು.

ಜೀವನ ಅಂದ ಮೇಲೆ ಅಲ್ಲಿ ಸೋಲು-ಗೆಲುವು, ಸುಖ-ದುಃಖ ಎಲ್ಲವೂ ಸಾಮಾನ್ಯವಾಗಿರುತ್ತದೆ. ಈ ಎಲ್ಲಾ ಸಂಧರ್ಭಗಳಲ್ಲೂ ಸಾಥ್ ಕೊಡುವವರು ಸಂಬಂಧಿಕರು. ಆದ್ದರಿಂದ ಯಾರೇ ಆದರೂ ಜೀವನದಲ್ಲಿ ಸ್ವಾರ್ಥ ಇಲ್ಲದ ಸಂಬಂಧವನ್ನು ಹಾಗೂ ನಿಸ್ವಾರ್ಥಿಗಳಾದ ಸಂಬಂಧಿಕರನ್ನು ಎಂದಿಗೂ ದೂರ ಮಾಡಿಕೊಳ್ಳಬಾರದು. ಸಂಬಂಧಿಕರು ಎಂದರೆ ನಮ್ಮ ಬಂಧು-ಬಳಗ ನೆಂಟರಿಷ್ಟರು ಮಾತ್ರವಲ್ಲ, ಸ್ನೇಹ ಕೂಡ ಒಂದು ಸಂಬಂಧವೇ ಹಾಗೂ ಸ್ನೇಹಿತರೂ ಕೂಡ ಸಂಬಂಧಿಕರೇ ಆಗಿರುತ್ತಾರೆ. ಆದ್ದರಿಂದ “ಸ್ನೇಹ ಹಾಗೂ ಸಂಬಂಧಕ್ಕೆ ಬೆಲೆ ಕೊಡಬೇಕು, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಪ್ರೀತಿ ನೀಡಬೇಕು…”

✍ಉಲ್ಲಾಸ್ ಕಜ್ಜೋಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.