ಬಾಲ್ಯಜೀವನದ ಶಾಲಾ ಸುಂದರ ಕ್ಷಣಗಳು ಈಗೆಲ್ಲಿ …?

Advt_Headding_Middle

 

 


ಮತ್ತೆ ನೆನಪಾದವು ಬಾಲ್ಯದ ಶಾಲಾದಿನಗಳ ಸುಂದರ ಸವಿ ನೆನಪುಗಳು..
ಬೇಸಿಗೆ ರಜೆ ಕಳೆದು ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗುವ ಸಮಯವದು, ನಾವೆಲ್ಲ ನೆಂಟರ ಮನೆಗೆಂದು ಹೊರಟು ಅಜ್ಜ- ಅಜ್ಜಿ ಮನೆಯ ಗದ್ದೆ,ತೋಟ, ನದಿ, ತೊರೆಗಳಲ್ಲಿಆಟವಾಡಿ ರಜಾದಿನಗಳ ಮಜವನ್ನು ಕಳೆದು ಆ ಸುಂದರ ಕ್ಷಣಗಳನ್ನು ನಮ್ಮ ಸಹಪಾಠಿ ಗೆಳೆಯ- ಗೆಳತಿಯರೊಂದಿಗೆ ಹೇಗೆಲ್ಲ ವರ್ಣಿಸಬೇಕೆಂದು ಮನದಲ್ಲಿಯೇ ನೆನೆದುಕೊಂಡು ಶಾಲಾ ಆರಂಭಕ್ಕಾಗಿ ಕಾಯುತ್ತಿದ್ದ ಸಮಯ.
ಆ ಸಮಯ ಬಂದಾಗ ಟೀಚರ್.. ನಾನು ಟೀಚರ್.. ಸಾರ್.. ನಾನು ಮೊದಲು ಎಂದು ಶಿಕ್ಷಕರೊಂದಿಗೆ ರಜಾದಿನಗಳ ಅನುಭವ ಹಂಚಿಕೊಳ್ಳಲು ನಡೆಸುವ
ಪೈಪೋಟಿ.. ಆಹಾ! ನೆನಪಿಸಿಕೊಂಡಾಗ ಒಮ್ಮೆಗೆ ಮೈ ನವಿರೇಳಿ ರೋಮಾಂಚನವಾಗುತ್ತದೆ.
ಹೌದು ಇದು ನನಗೆ ಮತ್ತೊಮ್ಮೆ ನೆನಪಾಗಲು ಕಾರಣವಾಗಿದ್ದು ನಮ್ಮ ಸಹ ಶೈಕ್ಷಣಿಕ ಸಂಸ್ಥೆಯಲ್ಲಿ ಕೆಲವು ದಿನಗಳ ಅರೆಕಾಲಿಕ ಉದ್ಯೋಗ ಮಾಡುವ ಅವಕಾಶ ಲಭಿಸಿದಾಗ, ಅದು ಕೂಡ ಇಂದಿನ ONLINE CLASSಗಳೆಂಬ ಡಿಜಿಟಲ್ ಯುಗದಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಅಪ್ಲೋಡ್ ಮಾಡಲೆಂದು COMPUTER ಮುಂದೆ ಕೂತಾಗ.
ಶಿಕ್ಷಕರು ತರಗತಿ ಒಳಗಡೆ ಪ್ರವೇಶ ಮಾಡುತ್ತಿದ್ದಂತೆ ನಮಾಸ್ತೆ..ಸಾರ್.. ನಮಸ್ತೆ ಮೇಡಂ ಎಂಬ ಮಕ್ಕಳ ಜೇಂಕಾರ. ಆ ಶಬ್ದ ಕೇಳಿ ಶಿಕ್ಷಕರ ಮೇಲಿನ ಗೌರವದಿಂದ ಎಲ್ಲರಂತೆ ಎದ್ದು ನಿಲ್ಲ ಬೇಕೆಂದಾಗ ಶಿಕ್ಷಕರ ಎದುರಿಗಿದ್ದದ್ದು ನಾನೊಬ್ಬನೇ!!ಯಾಕೆಂದರೆ,ಅದು ಆನ್ಲೈನ್ ಕ್ಲಾಸ್.
ನಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರು ತರಗತಿಗೆ ಬಂದೊಡನೆ ಮಕ್ಕಳಿಗೆ ಮೊದಲು ಕೇಳುತ್ತಿದ್ದ ಪ್ರಶ್ನೆ, ಪ್ರೀತಿಯ ಮಕ್ಕಳೇ ಹೇಗಿದ್ದೀರಾ..? ಚೆನ್ನಾಗಿದ್ದೀರ ಮಕ್ಕಳೇ..? ಎಂದು. ಆದರೆ, ಇಂದು ತರಗತಿಗೆ ಬಂದೊಡನೆ ಮಕ್ಕಳಲ್ಲಿ ಶಿಕ್ಷಕರು ಕೇಳುವ ಪ್ರಶ್ನೆಗಳೇ ವಿಚಿತ್ರ.! Can you Here me?, Can you See me? All Right.. ಯಾಕೆಂದರೆ, ಇದು ಆನ್ಲೈನ್ ಕ್ಲಾಸ್ ಗಳು ಶಿಕ್ಷಕರೆದುರುಗಿರುವುದು ಕಂಪ್ಯೂಟರ್ ಗಳು. ಹಾಗಂತ ಇದು ಶಿಕ್ಷಕರ ತಪ್ಪಲ್ಲ ವಾಸ್ತವದ ಪರಿಸ್ಥಿತಿ
ಹೌದು ಶಿಕ್ಷಕರು ಕೂಡ ತಮ್ಮ ವೈಯಕ್ತಿಕ ಜೀವನದ ದುಃಖ ದುಮ್ಮಾನ ಕಷ್ಟಗಳೇನೇ ಇದ್ದರೂ ಶಾಲೆಯೆಂಬ ಆವರಣದೊಳಗೆ ತಮ್ಮ ಮುದ್ದು ವಿದ್ಯಾರ್ಥಿಗಳನ್ನು ಕಣ್ತುಂಬಿಸಿಕೊಳ್ಳುತಿದ್ದಂತೆ ಎಲ್ಲವನ್ನು ಮರೆತು ತಮ್ಮ ಉತ್ತಮ ವಿಚಾರಧಾರೆಗಳನ್ನುಖುಷಿಯಿಂದ ಮಕ್ಕಳಿಗೆ ಧಾರೆಎರೆಯುತ್ತಿದ್ದರು. ಆದರೆ ಇಂದು COMPUTER ಮುಂದೆ ಬಂದು ಮಕ್ಕಳಿಗೆ ಪಾಠ ಮಾಡುವ ದೌರ್ಭಾಗ್ಯ ಶಿಕ್ಷಕರದು, ಆನ್ಲೈನ್ ಕ್ಲಾಸ್ ಗಳ ಸಿದ್ಧತೆಗಾಗಿ ಅವರು ಪಡುವ ಕಷ್ಟಕಾರ್ಪಣ್ಯಗಳು ಹೇಳತೀರದು ಮಕ್ಕಳು ಸದಾ ಕುಳಿತು ಪಾಠ ಕೇಳುವುದರೊಂದಿಗೆ ಸಾರ್..ರಾಮ ಚಿವುಟು ತಾನೆ.. ಭೀಮ ನಿದ್ದೆ ಮಾಡುತ್ತಾನೆ ಸಾರ್.. ಮೇಡಂ.. ಪ್ರೀತಿ ಪೆನ್ನು ಕೊಡುವುದಿಲ್ಲವೆಂದು, ತಮಾಷೆ ಕೀಟಲೆ ಮಾಡುತ್ತಿದ್ದ ಬೆಂಚು ಡೆಸ್ಕುಗಳ ಕಡೆಗೆ ಕಣ್ಣು ಹಾಯಿಸಿದಾಗ ಎಲ್ಲವೂ ಖಾಲಿ.. ಖಾಲಿ..
ಅತ್ತಕಡೆ ಪಾಠ ಕೇಳಲೆಂದು ಮೊಬೈಲ್ ಎದುರು ಕುಳಿತ ಮಕ್ಕಳಿಗೆ ಒಬ್ಬಂಟಿ ಗಳಾದ ವ್ಯಥೆ. ತರಗತಿಯಲ್ಲಿ ಒಟ್ಟಿಗೆ ಕುಣಿದು ಕುಪ್ಪಳಿಸಿ ಪ್ರೀತಿಯಿಂದ ಜಗಳವಾಡುತ್ತಿದ್ದ ಕುಚುಕು ಗೆಳೆಯ- ಗೆಳತಿಯರಿಲ್ಲ, ಶಿಕ್ಷಕರು ಕೂಡ ಎದುರಿಗಿಲ್ಲ ಇವೆಲ್ಲವುಗಳನ್ನು ಕೊಡಲು ಆನ್ಲೈನ್ ಕ್ಲಾಸ್ ಗಳಿಂದ ಸಾಧ್ಯವೂ ಇಲ್ಲ. ದೂರದಿಂದಲೇ ಸಹಪಾಠಿಗಳ, ಅಧ್ಯಾಪಕರ ಮುಖ ನೋಡಿ ಸ್ವರ ಕೇಳೋಣವೆಂದರೆ ನೆಟ್ವರ್ಕ್ ಇಲ್ಲವೆಂಬ ದೊಡ್ಡ ಭೂತ..!!
ಆನ್ಲೈನ್ ಕ್ಲಾಸಿಗೆ ಮೊಬೈಲ್ ಬೇಕೆಂದಾಗ ತಮ್ಮ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಮೊಬೈಲ್ ತಂದುಕೊಟ್ಟು ನೆಟ್ವರ್ಕ್ ಗಳಿಗಾಗಿ ಮಕ್ಕಳೊಂದಿಗೆ ಗುಡ್ಡಹತ್ತಿ ತಂದೆ-ತಾಯಿ ಪಡುವ ಹರಸಾಹಸ ಹೀಗೆ ನಮ್ಮನ್ನು ಕಾಡುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ಇಲ್ಲ .. ಇಲ್ಲಾ .. ಇಲ್ಲವೆಂದೇ
ಹಾಗೆಯೇ ಈಗಿನ ಪರಿಸ್ಥಿತಿಗೆ ತಕ್ಕಂತೆ ಯೋಚಿಸಿದಾಗ ಆನ್ಲೈನ್ ಕ್ಲಾಸ್ ಗಳು ಅವಶ್ಯಕ ಎಂದು ಕಾಣಿಸುವುದರಲ್ಲಿ ಕೂಡ ತಪ್ಪಿಲ್ಲ. ಆದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ನೆನಪಿಸಿಕೊಂಡಾಗ ಮನಸು ದಿಗಿಲಾಗುತ್ತದೆ, ಎಲ್ಲಿ ನಮ್ಮ ಪಾರಂಪರಿಕ ಸಂಬಂಧಗಳು ಹದಗೆಡುತ್ತವೆಯೋ ಎಂಬ ಭಯ, ಚಿಂತೆ, ಆತಂಕ ಕಾಡುತ್ತದೆ.
ಇದೆಲ್ಲವನ್ನು ನೆನೆದು ನಮ್ಮ ಉಸಿರು ಬಿಗಿಹಿಡಿದು ಮತ್ತೆ ನಾವು ಹೇಳುವುದು ಅದೇ..
*ಈಗ “ONLINE CLASS”ಗಳು* _ಅನಿವಾರ್ಯ..!!_

📝 ಧನಂಜಯ ಕೆ.
ಕೊಡೆಂಕಿರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.