ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರಲಿ..

Advt_Headding_Middle

ಮುಂಗಾರಿನ ನೀಲ ಖಾನ ಮೇಘಗಳ ಕೆಳಗೆ ಮೇಲಿಂದ ಬೀಳುವ ಮಳೆ ಹನಿ ಕುಡಿಯಲು ಗಂಟೆಗಟ್ಟಲೆ ಕೂರುವ ಜಾತಕ ಪಕ್ಷಿ. ಮಳೆಗಾಲದಲ್ಲಿ ಕೇವಲ ನಾಲ್ಕು ಹನಿ ನೀರಿಗಾಗಿ ಎಷ್ಟೊಗಂಟೆ, ಎಷ್ಟೊದಿನ, ವಾರಗಟ್ಟಲೆ ಕಾದು ಕುಳಿತಿರುವ ಜಾತಕಪಕ್ಷಿಯಂತೆ ಮಕ್ಕಳ ಧ್ವನಿಗಾಗಿ ಶಾಲೆಯ ಗೋಡೆಗಳು , ಕಪ್ಪು ಹಲಗೆ ಬೆಂಚುಗಳು ಕಾದು ಕುಳಿತಿದೆ.
ಪ್ರಭು ಶ್ರೀ ರಾಮನಿಗಾಗಿ ಕಾದ ಶಬರಿಯಂತೆ ಈ ಪುಟ್ಟ ಶ್ರೀರಾಮ ರಿಗಾಗಿ ಕಾದು ಕುಳಿತ ಶಬರಿ ಯಂತಹ ಶಿಕ್ಷಕರು ಹೌದು ಇದು ಈಗಿನ ವಸ್ತುಸ್ಥಿತಿ. Sound mind in a a sound body ಆ sound mind and body ಪಡೆಯಲು ಒಳ್ಳೆಯ ಆಟದ ಮೈದಾನವೇ ಶಾಲೆ. ಮಕ್ಕಳೇ ಈ ಮಹಾಮಾರಿ ಪೆಡಂಬೂತ ಕೋರೋನ ಇಡೀ ಪ್ರಪಂಚವನ್ನೇ ಅಲ್ಲೋಲಕಲ್ಲೋಲ ಗೊಳಿಸಿದೆ ನಕ್ಷತ್ರಗಳಂತಿದ ಈ ಖಗಗಳ ವಿದ್ಯೆಗೆ ಕೆಂಡ ಬಿದ್ದಂತಾಗಿದೆ ಮಕ್ಕಳಿಂದಾಗಿ ಸಂತೋಷ ಅನುಭವಿಸುವ ಶಿಕ್ಷಕರಿಗೆ ಆತ್ಮಕ್ಕೆಅಶಾಂತಿ ಬಂದಂತಾಗಿದೆ. ಮಕ್ಕಳಿಗೂ ಶಾಲೆಯಲ್ಲಿ ಕಲಿಯುವ ಶಿಕ್ಷಣ, ದೇವರ ಸ್ಮರಣೆ ಯಂತಹ ಶ್ಲೋಕ, ಸಂಸ್ಕೃತಿ, ಆಚಾರ-ವಿಚಾರ, ದಯೆಯೇ ಧರ್ಮದ ಮೂಲ. ಜೀವನ ರೀತಿಯೇ ಧರ್ಮ. ನಾವು ಪುಟ್ಟ ಮಕ್ಕಳ ಜೊತೆ ಕಳೆದುಕೊಂಡ ಕ್ಷಣಗಳು ನೆನಪು ನೂರೊಂದು. ಶಾಲೆಗೆ ಬಂದಾಕ್ಷಣ ದೇವರಿಗೆ ಸಮಾನರಾದ ಮಕ್ಕಳ ನಗುವಿನ ಕೈಮುಗಿದು ಜೈಶ್ರೀರಾಮ್ ಧ್ವನಿ ನಮಗೆ ಆತ್ಮತೃಪ್ತಿ ನೀಡುತ್ತಿತ್ತು. ಮಕ್ಕಳ ಜೊತೆ ಪ್ರೀತಿ, ವಾತ್ಸಲ್ಯ , ಮೋಜಿನ ಗಣಿತ, ವಿಜ್ಞಾನದ, ಮಕ್ಕಳ ಸೃಜನಾತ್ಮಕ ಕಲೆಗಳೊಂದಿಗೆ ಪ್ರದರ್ಶಿಸುತ್ತಿದ್ದ ವಿಜ್ಞಾನ, ಗಣಿತ ವಸ್ತುಗಳು ನಮ್ಮ ಮನಕ್ಕೆ ಆಹಾ/ಎಷ್ಟೊಂದು ಸಂತಸದಾಯಕ ಸಂದರ್ಭ ಮಕ್ಕಳೇ ಇದಕ್ಕೆ ನಾ ನಾನು ಚಿರಋಣಿ. ಮಹಾತ್ಮ ಗಾಂಧೀಜಿಯವರು ನಮ್ಮ ಯುವಜನಾಂಗ ಹಳ್ಳಿಗಳಲ್ಲಿ ವಾಸಿಸುತ್ತಿದೆ ಎಂದರಂತೆಈ ಕೋರೋನ ಕಾಯಿಲೆಯು ಹಿರಿಯರು ಕಿರಿಯರು ಎಲ್ಲರಿಗೂ ಬಂದು ಅವರನ್ನು ಮೂಲೆಗುಂಪು ಮಾಡಿಸಿದೆ ಮತ್ತು ಯುವ ಜನಾಂಗದವರು ಪ್ರಜೆಗಳಾಗಿ ಸಾಮಾಜಿಕ ಪ್ರಗತಿ ಹೊಂದುವಲ್ಲಿ ಶಾಲೆಗೆ ಹೋಗಿ ಮಕ್ಕಳ ಜೊತೆ ಸಹಕಾರದಿಂದ ಸಹಬಾಳ್ವೆಯ ಶಿಕ್ಷಣ ಪಡೆಯುವಲ್ಲಿ ತಡೆಯನ್ನು ಉಂಟು ಮಾಡಿದೆ. ಕ್ರಿಯಾಶೀಲ ಯುವಕರಾಗಿ ಬದುಕುವಂತಹ ನಮ್ಮ ಮುಂದಿನ ಪ್ರಜೆಗಳಿಗೆ ತಾಂತ್ರಿಕ ಸಾಧನಗಳ ಶಿಕ್ಷಣಕ್ಕೆ ಬದಲಾಗಿ ನೇರ ಬೋಧನೆ, ಪರಸ್ಪರ ಸಂವಾದ, ಚರ್ಚೆ ಶಿಕ್ಷಣ ಹೆಚ್ಚು ಪರಿಣಾಮಕಾರಿ ಮತ್ತು ಮನಸ್ಸಿಗೂ ನೆಮ್ಮದಿ ಅನಿಸುತ್ತಿದೆ. ಶಾಲಾ ಪ್ರವೇಶೋತ್ಸವ ದಿಂದ ಹಿಡಿದು ಆರತಿ ಬೆಳಗಿ ಶಾಲೆಗೆ ಬರಮಾಡಿಕೊಂಡರೆ ಹಲವಾರು ಚಟುವಟಿಕೆಗಳೊಂದಿಗೆ ಗುರುಪೂರ್ಣಿಮೆ, ರಕ್ಷಾಬಂಧನ, ಪ್ರವಾಸ, ಪಿಕ್ನಿಕ್, ನಿಮ್ಮ ಜೊತೆ ನಾವು ಅನುಭವಿಸಿದ ಸಂತಸದ ಕ್ಷಣಗಳು ಶಾಲಾ ಕೊನೆಹಂತದಲ್ಲಿ ದೀಪ ಪ್ರಧಾನ ಕಾರ್ಯಕ್ರಮಗಳು ಈ ಕೋರೋನ ಮಹಾಮಾರಿ ಯಿಂದಾಗಿ ಮನದಲ್ಲಿ ನೆನಪು ಮಾತ್ರ ಎಂದಾಗಿದೆ. ಆದಷ್ಟು ಬೇಗ ಮಹಾಮಾರಿಯ ನಾಶಪಡಿಸಿ ಗುರು-ಶಿಷ್ಯ ಸಂಬಂಧ, ಅಳುತ್ತಿರುವ ಶಾಲಾ ಗೋಡೆ ಸಮಾಧಾನಪಡಿಸಲು ನಾವೆಲ್ಲರೂ ನಮ್ಮ ಶಾಲೆಯಲ್ಲಿ ಸೇರೋಣ. ಇನ್ನು ಮುಂದೆ ವಿದ್ಯಾರ್ಥಿಗಳು ಬೂದಿ ಮುಚ್ಚಿದ ಕೆಂಡ ದಿಂದ ಮೇಲೆದ್ದು ಬರುವ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರಬೇಕಾದ ಅನಿವಾರ್ಯತೆ ಇದೆ. ವೇಗವಾಗಿ ಓಡುವ ಜಗತ್ತಿನೊಂದಿಗೆ ತಮ್ಮ ಕಲಿಕಾ ವೇಗ ಹೊಂದಿಸಿ ಕೊಳ್ಳದಿದ್ದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪದ್ಧತಿ ಆಧುನೀಕರಿಸಿ ದಿದ್ದಲ್ಲಿ ಶಿಕ್ಷಣ ವ್ಯವಸ್ಥೆಯು ಗತಕಾಲದ ಆಗಬಹುದು.


-ಪೂರ್ಣಿಮಾ ಜಯಪ್ರಸಾದ್
ಸಹ ಶಿಕ್ಷಕಿ, ವಿ.ಅ.ಹಿ. ಪ್ರಾ. ಶಾಲೆ ವಿನೋಬನಗರ

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.