ಡಾ.ಕಾರ್ತಿಕ್ ಕಣಕ್ಕೂರು ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿ

Advt_Headding_Middle

ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದ ಸುಳ್ಯದ ಡಾ.ಕಾರ್ತಿಕ್ ಕಣಕ್ಕೂರುರವರು ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿಗೊಂಡಿದ್ದಾರೆ.
ಸುಳ್ಯದ ಜನಾರ್ಧನ ಕಣಕ್ಕೂರು ಮತ್ತು ಗಿರಿಜಾ ದಂಪತಿಯ ಪುತ್ರನಾದ ಕಾರ್ತಿಕ್‌ರವರು ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಬಳಿಕ ಸುಳ್ಯ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿದರು.


2010 ರಲ್ಲಿ ಭಾರತೀಯ ಸೇನಾ ವೈದ್ಯಕೀಯ ದಳದಲ್ಲಿ ನಿಯೋಜನೆಗೊಂಡು ಗೋವಾ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸಿದರು. 2011 ರಲ್ಲಿ ಲಡಾಕ್ ಸ್ಕೌಟ್ಸ್ ರೆಜಿಮೆಂಟ್‌ಗೆ ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿ ಸಿಯಾಚಿನ್ ಗ್ಲೇಶಿಯರ್‌ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2013 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಉತ್ತರಪ್ರದೇಶದ ಫೀಲ್ಡ್ ಹಾಸ್ಪಿಟಲ್ ಬರೇಲಿಗೆ ವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡರು.

2014 ರಲ್ಲಿ ಮೇಜರ್ ಹುದ್ದೆಗೆ ಪದೋನ್ನತಿ ಹೊಂದಿ ಮಹರಾಷ್ಟ್ರದ ಸೈನ್ಯ ನೇಮಕಾತಿ ಕಚೇರಿಗೆ ವರ್ಗಾವಣೆಗೊಂಡು, ಬಳಿಕ ನೇಮಕಾತಿ ವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡರು. 2019 ರ ಜನವರಿಯಲ್ಲಿ ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿ ನೇಮಕವಾಯಿತು. ಆ ಬಳಿಕ ಪುಣೆಯ ಪ್ರತಿಷ್ಠಿತ ಶಸಸ್ತ್ರ ಸೇನೆಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಆಯ್ಕೆಗೊಂಡು ಅಧ್ಯಯನ ಮಾಡುತ್ತಿದ್ದಾರೆ. ಜುಲೈ 10 ರಂದು ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿ ಹೊಂದಿದ್ದಾರೆ. ಏರ್‌ವೈಸ್ ಮಾರ್ಷಲ್ ಹಾಗೂ ಸಹಷ್ಟ್ರ ಸೇನಾ ವೈದ್ಯಕೀಯ ಮಹಾವಿದ್ಯಾಲಯ ಡೀನ್ ಮತ್ತು ಡೆಫ್ಯೂಟಿ ಕಮಾಡೆಂಟ್ ಆದ ರಾಜೇಂದ್ರ ವೈದ್ಯರವರು ಪದೋನ್ನತಿ ಪ್ರಕ್ರಿಯೆ ನಡೆಸಿಕೊಟ್ಟರು.


ಕಾರ್ತಿಕ್ ಅವರ ಪತ್ನಿ ಶ್ರೀಮತಿ ಅಮೃತಾ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಟೆಕ್ ಪದವೀಧರರಾಗಿದ್ದು, ಸಿಸ್ಟಮ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಮೂರುವರೆ ವರ್ಷದ ಮಾಸ್ಟರ್ ಧ್ರುವ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.