ಗುತ್ತಿಗಾರು ಮುಖ್ಯ ರಸ್ತೆಯಲ್ಲಿ ದಿನಕ್ಕೊಂದು ಅಪಘಾತ : ಎಚ್ಚೆತ್ತುಕೊಳ್ಳದ ಇಲಾಖೆ

Advt_Headding_Middle

 ಯಾರ ಬಲಿಗಾಗಿ ಕಾಯಲಾಗುತ್ತಿದೆ

ಗುತ್ತಿಗಾರು ಕೆಳಗಿನ ಪೇಟೆಯಲ್ಲಿ ಮುಖ್ಯರಸ್ತೆಯಲ್ಲಿ
ಪಿ ಡಬ್ಲ್ಯೂ ಡಿ ಇಲಾಖೆ ವತಿಯಿಂದ ಮೋರಿಯೊಂದನ್ನು ನಿರ್ಮಾಣ ಮಾಡಿದ್ದು ಕೆಲಸ ಪೂರ್ತಿ ಗೊಳಿಸದೆ ಹಾಗೇ ಬಿಟ್ಟಿರುವುದರಿ೦ದ ವಾಹನ ಸವಾರರಿಗೆ ಆತ೦ಕಕಾರಿಯಾಗಿ ಪರಿಣಮಿಸಿರುವ ಘಟನೆ ವರದಿಯಾಗಿದೆ.
ಈ ಹಿ೦ದೆ ಸುದ್ದಿ ವೆಬ್ಸೈಟ್ ನ್ಯೂಸ್ ಮಾಡಿ ಈ ಬಗ್ಗೆ ಎಚ್ವರಿಸಿತ್ತು. ಇದನ್ನು ಮರುದಿನವೇ ಬಂದು ದುರಸ್ತಿ ಮಾಡಿ ತೆರಳಿದ್ದರು. ಆದರೆ ಡಾಮರಿಗಿಂತ ಎತ್ತರಕ್ಕೆ ಕಾಂಕ್ರೀಟ್ ಇರುವ ಕಾರಣ ಅಲ್ಲಿ ಹೊ೦ಡಗಳಾಗಿ ರಾತ್ರಿ ಸಂಚರಿಸುವವರಿಗೆ ಗೊತ್ತಾಗದೆ ದ್ವಿಚಕ್ರ ಸವಾರರು ಬೀಳುತ್ತಿದ್ದಾರೆ. ಜು.17 ರಾತ್ರಿ ಸ್ಕೂಟರ್ ಸವಾರರು ಹಾಗೂ ಜು.21 ರಾತ್ರಿ ಸುಳ್ಯ ತಾ.ಆರೋಗ್ಯ ಕೇಂದ್ರದ ಸಿಬ್ಬಂದಿ ಯೊಬ್ಬರು ಬೈಕಿನಲ್ಲಿ ಬಿದ್ದು ಅವರನ್ನು ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆ ಗೆ ದಾಖಲಿಸಿದ ಘಟನೆ ನಡೆದಿದೆ. ‌ಅದೃಷ್ಟವಶಾತ್ ಹೆಚ್ಚಿನ ಸಮಸ್ಯೆಯಾಗದೆ ಪಾರಾಗಿದ್ದಾರೆ. ಮುದೊಂದು ದಿನ ದುರಂತ ಸಂಭವಿಸದಿರ ಬೇಕಾದರೆ ಸಂಬಂಧಿಸಿದವರು ತಕ್ಷಣವೇ ಇದರ ಬಗ್ಗೆ ಗಮನ ಹರಿಸಬೇಕಾಗಿದೆ.

ನಮಗೆ ಯಾವಗಲೂ ರಾತ್ರಿ ಬೈಕ್ ನಲ್ಲಿ ಬಿದ್ದವರನ್ನು ಎಬ್ಬಿಸಿ ಆಸ್ಪತ್ರೆಗೆ ಕಳಿಸಿಕೊಡುವುದೇ ಕೆಲಸವಾಗಿದೆ. ಸರಿ ಮಾಡದಿದ್ದರೇ ಮುಂದೊಂದು ದಿನ ಸಾವು ಸಂಭವಿಸಿದರೆ ಸಂಬಂಧಪಟ್ಟವರೇ ಹೊಣೆಯಾಗಬೇಕಾಗುತ್ತದೆ.

– ಶರತ್ ಗುತ್ತಿಗಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.