ನಾಳೆಯಿಂದ ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಗೆ ಉಚಿತ ತರಬೇತಿಯ ಪೂರ್ವಭಾವಿ ಸಭೆ

Advt_Headding_Middle

 

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಡಬ ತಾಲೂಕು ಕ್ರೀಡಾ ಭಾರತಿ ವತಿಯಿಂದ ಪೊಲೀಸ್ ಕಾನ್ಸ್ ಟೆಬಲ್ ಪರೀಕ್ಷೆಗೆ ಒಂದು ವಾರದ ಉಚಿತ ತರಭೇತಿ ಕಾರ್ಯಗಾರ ಜು.24ರಿಂದ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ನಡೆಯಿತು.


ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಾಮಾನ್ಯ ಜ್ಞಾನ, ಭೂಗೋಳ, ವಿಜ್ಞಾನ, ನೀತಿ ಶಿಕ್ಷಣ, ಇತಿಹಾಸ, ಮಾನಸಿಕ ಸಾಮಾರ್ಥ್ಯ, ಭಾರತೀಯ ಸಂವಿಧಾನ, ಕಂಪ್ಯೂಟರ್ ಶಿಕ್ಷಣ, ರಾಜ್ಯ ಶಾಸ್ತ್ರ ಅರ್ಥಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ತರಭೇತಿ ಕಾರ್ಯಗಾರ ನಡೆಯಲಿದೆ. ಸೋಮಶೇಖರ, ಗಿರೀಶ್, ಕೃಷ್ಣಲಮಾಣಿ, ಡಾ.ಪ್ರಸಾದ್, ಜಯಪ್ರಕಾಶ್, ಆರತಿ, ಶ್ರೀಧರ್, ಸತೀಶ್ ಭಟ್, ಕುಮಾರ್, ಶ್ರೀಲತಾ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ತರಭೇತಿ ನೀಡಲಿದ್ದಾರೆ. ಉಚಿತ ತರಭೇತಿಯಾಗಿದ್ದು, ತರಭೇತಿಗೆ ಆಗಮಿಸುವ ಅಭ್ಯರ್ಥಿಗಳು ಕೊರೊನಾ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು. ಆಸಕ್ತ ಅಭ್ಯರ್ಥಿಗಳು ನೇರವಾಗಿ ಎಸ್‌ಎಸ್‌ಪಿಯು ಕಾಲೇಜಿಗೆ ಬೇಟಿ ನೀಡಬಹುದು ಎಂದು ಸಂಘಟಕರು ಮಾಹಿತಿ ನೀಡಿದರು.

ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ ಸೋಮಶೇಖರ್, ಶಿವರಾಮ್ ಯೇನೆಕಲ್ಲು, ಗಿರೀಶ್ ಕುಮಾರ್, ಜಯಪ್ರಕಾಶ್, ಪ್ರಸಾದ್, ಶ್ರೀಲತಾ, ದಿನೇಶ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.