ಗ್ರಾಮಸ್ಥರಿಗೆ ಗ್ರಾಮ ಸಭೆ ಮಾಹಿತಿ ತಲುಪಿಸುವಲ್ಲಿ ಅಜ್ಜಾವರ ಗ್ರಾ.ಪಂ. ವಿಫಲ: ಸತೀಶ್ ಬೂಡುಮಕ್ಕಿ

Advt_Headding_Middle

 

ಗ್ರಾಮಸ್ಥರಿಗೆ ಗ್ರಾಮ ಸಭೆ ಮಾಹಿತಿ ತಲುಪಿಸುವಲ್ಲಿ ಅಜ್ಜಾವರ ಗ್ರಾ.ಪಂ. ವಿಫಲವಾಗಿದೆ ಎಂದು ಅಂಬೇಡ್ಕರ್ ಆದರ್ಶ ಸೇವ ಸಮಿತಿ ಸುಳ್ಯ ತಾಲೂಕು ಮತ್ತು ಜನಾಭಿವೃದ್ಧಿ ವೇದಿಕೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಸತೀಶ್ ಬೂಡುಮಕ್ಕಿ ಹೇಳಿಕೆ ಕಳುಹಿಸಿಕೊಟ್ಟಿದ್ದಾರೆ.
ಜು. ೨೬ರಂದು ಅಜ್ಜಾವರ ಗ್ರಾಮ ಪಂಚಾಯತ್‌ನ ವಿಶೇಷ ಗ್ರಾಮ ಸಭೆಯು ಮಧ್ಯಾಹ್ನ ೨.೩೦ಕ್ಕೆ ಕರೆದಿದ್ದು ಸಮಯ ಸುಮಾರು ೩ಗಂಟೆಯವರೆಗೆ ಸಾಮಾನ್ಯ ಸಭೆಯನ್ನೇ ನಡೆಸಿ ನಂತರ ವಿಶೇಷ ಗ್ರಾಮ ಸಭೆ ಆರಂಭಿಸಿ ಕೇವಲ ೩೦ ನಿಮಿಷಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಸದಸ್ಯರು ಇದ್ದು ಗ್ರಾಮಸ್ಥರಿಲ್ಲದೆ ಗ್ರಾಮಸ್ಥರು ಕುಳಿತು ಕೊಳ್ಳುವ ಕಡೆ ಪಂಚಾಯತ್ ಸದಸ್ಯರು ಕುಳಿತು ಸದ್ದಿಲ್ಲದೆ ವಿಶೇಷ ಗ್ರಾಮ ಸಭೆ ನಡೆದಿದ್ದಾರೆ. ಹಾಗೂ ಈ ಬಗ್ಗೆ ಯಾವೊಬ್ಬ ಗ್ರಾಮ ಪಂಚಾಯತ್ ಸದಸ್ಯರು ಕೂಡ ಧ್ವನಿ ಮಾಡದೇ ಸಭೆಯನ್ನ ನಡೆಸಿ ಕೈ ತೊಳೆದು ಕೊಂಡಿದ್ದು ಬಹಳ ಬೇಸರದ ಸಂಗತಿ. ವಿಶೇಷ ಸಭೆಗಳೇ ಈ ರೀತಿಯಾಗಿ ನಡೆದು ಹೋಗುವುದಾದರೆ ಇನ್ನೂ ಸಾಮಾನ್ಯ ಸಭೆಯ ಪರಿಸ್ಥಿತಿ ನಿಜಕ್ಕೂ ಆಶ್ಚರ್ಯ. ಯಾವುದೇ ಪಕ್ಷದ ಜನಪ್ರತಿನಿಧಿಗಳಾಗಲಿ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಎಷ್ಟು ಬಾರಿ ಬೇಕಾದರೂ ಮತದಾರರ ಮನೆಗೆ ಹೋಗುವವರು ಗೆದ್ದ ನಂತರ ಅದೇ ರೀತಿ ಮನೆ ಮನೆಗೆ ಹೋಗಿ ಜನರಿಗೆ ಸಭೆ ಗಳ ಬಗ್ಗೆ ಮಾಹಿತಿ ನೀಡುವುದಾಗಲಿ, ಜನರ ಅಭಿವೃದ್ಧಿ ಪಡಿಸುವ ಕೆಲಸವಾಗಲಿ ಯಾಕೆ ಮಾಡಲಾಗುತ್ತಿಲ್ಲ.ಯಾವ ಉದ್ದೇಶದಿಂದ ನೀವು ಚುನಾವಣೆಗೆ ಸ್ಪರ್ಧಿಸಿದ್ದೀರಿ ಎಂದು ನಾವು ಕೇಳ ಬೇಕಾಗುತ್ತದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯೇ..
ಜನಪ್ರತಿನಿಧಿಗಳು ಜನರ ಸೇವಕರು ಎಂಬುದನ್ನು ಮತದಾರರು ಒಗ್ಗಟ್ಟಿನ ಮೂಲಕ ಎಚ್ಚರಿಸ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಮತ್ತು
ಗ್ರಾಮ ಪಂಚಾಯತ್ ಗ್ರಾಮಸ್ಥರನ್ನ ವಿಶ್ವಾಸಕ್ಕೆ ತೆಗೆದು ಕೊಳ್ಳುವುದರಲ್ಲಿ ದಿನಕಳೆದಂತೆ ವಿಫಲವಾಗುತ್ತಿದೆ ಎಂದು ನಮಗನ್ನಿಸುತ್ತಿದೆ. ಆದ್ದರಿಂದ ಗ್ರಾಮಸಭೆಯ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.