ಪೆರುವಾಜೆ ಗ್ರಾಮ ಪಂಚಾಯತ್ : ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ – ಪೂರ್ವಭಾವಿ ಸಭೆ

Advt_Headding_Middle

 

ಸಾರ್ವಜನಿಕರಿಗೆ ಗಾಂಧಿವೇಷ ಸ್ಪರ್ಧೆ

ಗ್ರಾಮದವರಿಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ

ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ ಬಗ್ಗೆ ವಿವಿಧ ಸಂಘಸಂಸ್ಥೆಗಳ ಪೂರ್ವಭಾವಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರುರವರ ಅಧ್ಯಕ್ಷತೆಯಲ್ಲಿ ಜು.27 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಆಗಸ್ಟ್ 15 ರಂದು 75 ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ವಿವಿಧ ಸ್ಪರ್ಧೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯೋತ್ಸವ ನಡಿಗೆ, ಗಾಂಧಿ ವೇಷ ಸ್ಪರ್ಧೆ ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ವಿಜೃಂಭಣೆಯಿಂದ ಆಚರಿಸುವಂತೆ ನಿರ್ಣಯಿಸಲಾಯಿತು.
ಸಭೆಯಲ್ಲಿ ಸೇರಿದವರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಇಟ್ರಾಡಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿದರು, ವಂದಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಸಚಿನ್ ರಾಜ್ ಶೆಟ್ಟಿ, ಮಾಧವ ಮುಂಡಾಜೆ, ರೇವತಿ ಮಠತ್ತಡ್ಕ, ಗುಲಾಬಿ ಮುಕ್ಕೂರು, ಶಹಿನಾಜ್ ಪೆಲತ್ತಡ್ಕ ಉಪಸ್ಥಿತರಿದ್ದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ವ, ಪೆರುವಾಜೆ ಡ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಘವ ಎನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಅನುಸೂಯ ಪೆರುವಾಜೆ,ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಮಾಜಿ ಸದಸ್ಯ ಉಮೇಶ್ ಕೆ.ಎಂ.ಬಿ, ಮಂಜಪ್ಪ ರೈ, ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ವಾಸುದೇವ ಆಚಾರ್ಯ, ಪೆರುವಾಜೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಉದಯಗಣೇಶ್ ಅರ್ನಾಡಿ, ಮುಕ್ಕೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ವೆಂಕಪ್ಪ ಗೌಡ ಪೆರ್ಜಿ ನಾರ್ಕೋಡು, ಜಮಾತ್ ಅಧ್ಯಕ್ಷ ಜಮಾಲ್ ಕೆ.ಎಸ್. , ಸರಿತಾ ಮುಕ್ಕೂರು, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರಾಗಿಣಿ, ಶ್ರೀಮತಿ ದೇವಕಿ, ಅಂಗನವಾಡಿ ಸಹಾಯಕಿ ಅಶ್ವಿನಿ , ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ ಕುವೆತ್ತಡ್ಕ, ಸ್ರ್ರಿ ಶಕ್ತಿ ಸಂಘದ ಜಾನಕಿ, ಕುಶಾಲಪ್ಪ ಬೊಣ್ಯಕುಕ್ಕು,ಶೇಷಪ್ಪ ನಾಯ್ಕ ಮಠತ್ತಡ್ಕ, ಸಿರಾಜ್ ಚೆನ್ನಾವರ,ಶರೀಫ್ ಕುಂಡಡ್ಕ, ಮಹೇಶ ಕೆ, ಜೇಸಿ ಕಾರ್ಯದರ್ಶಿ ಜಗದೀಶ ರೈ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಪ್ಪ, ಪೆರುವಾಜೆ ಮರಾಠಿ ಸಂಘದ ಅಧ್ಯಕ್ಷ ಕೃಷ್ಣಪ್ಪ ನಾಯ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತ ಕುಮಾರಿ, ಶೇಷಪ್ಪ ನಾಯ್ಕ ಮಠತ್ತಡ್ಕ, ಸಂಜೀವಿನಿ ಯೋಜನೆಯ ಶ್ರೀಮತಿ ಜಯಲಕ್ಷ್ಮೀ, ಕರುಣಾಕರ ದುರ್ಗಾನಗರ, ಮತ್ತಿತರರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.