ಜಾಲ್ಸೂರು: ಕಾಡುಕೋಣ ದಾಳಿ, ಯುವಕನಿಗೆ ಗಂಭೀರ ಗಾಯ

Advt_Headding_Middle

ಬೈಕ್ ನಲ್ಲಿ ತೆರಳುತ್ತಿದ್ದ ಯುವಕನೋರ್ವನ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮವಾಗಿ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಕೆಮನಬಳ್ಳಿಯಲ್ಲಿ ಜು.27ರಂದು ರಾತ್ರಿ ಸಂಭವಿಸಿದೆ.
ಕೆಮನಬಳ್ಳಿಯ ಗೋಪಾಲಕೃಷ್ಣ ಗೌಡರ ಪುತ್ರ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಸಂದೇಶ್ ಎಂಬ ಯುವಕ ರಾತ್ರಿ 7 ಗಂಟೆಯ ಸುಮಾರಿಗೆ ತನ್ನ ಬೈಕ್ ನಲ್ಲಿ ಕೆಮನಬಳ್ಳಿಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೆಮನಬಳ್ಳಿ ರಬ್ಬರ್ ತೋಟದ ಬಳಿ ರಸ್ತೆಗೆ ಅಡ್ಡಬಂದ ಕಾಡುಕೋಣವೊಂದು ಸಂದೇಶ್ ಅವರ ಬೈಕ್ ಗೆ ಢಿಕ್ಕಿ ಹೊಡಿಯಿತೆನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಸಂದೇಶ್ ಅವರು ರಸ್ತೆಗೆ ಎಸೆಯಲ್ಪಟ್ಟು, ಸೊಂಟ, ಕೈ ಕಾಲು ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಪಘಾತ ಸಂಭವಿಸಿ ಸುಮಾರು ಅರ್ಧ ಗಂಟೆ ಕಳೆದ ಬಳಿಕ ಸಂದೇಶ್ ಅವರಿಗೆ ಎಚ್ಚರವಾಗಿ ನೋಡಿದಾಗ ಬೈಕ್ ನಿಂದ ಬಿದ್ದು, ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಈ ವಿಷಯವನ್ನು ಮನೆಯವರಿಗೆ ತಿಳಿಸೋಣ ಎಂದರೆ ಆ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ. ಬಳಿಕ ಅಡ್ಡಬಿದ್ದಿದ್ದ ಬೈಕನ್ನು ಮೇಲೆತ್ತಿ, ತಮ್ಮ ಮನೆಗೆ ತೆರಳಿ ವಿಷಯ ತಿಳಿಸಿದರೆನ್ನಲಾಗಿದೆ.
ತಕ್ಷಣ ಮನೆಯವರು ಸೇರಿ ಸಂದೇಶ್ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಸಂದೇಶ್ ಅವರ ತುಟಿಗೆ ಗಂಭೀರ ಗಾಯವಾಗಿದ್ದು, ಮೂರು ಹಲ್ಲು ಹೋಗಿದ್ದು, ಹಣೆ, ಕಣ್ಣಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈಗ ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.