ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಪ್ರಸಿದ್ಧ ಚಿತ್ರ ಕಲಾವಿದ, ರಂಗ ನಿರ್ದೇಶಕ ಮೋಹನ್ ಸೋನರ ಸಾಕ್ಷ್ಯಚಿತ್ರ ಬಿಡುಗಡೆ

Advt_Headding_Middle

 

 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಸಿದ್ಧ ಚಿತ್ರಕಲಾವಿದ , ರಂಗ ನಿರ್ದೇಶಕ ಮೋಹನ್ ಸೋನರ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಡಿಟೋರಿಯಂನಲ್ಲಿ ಜು.31ರಂದು ಸಂಜೆ ಜರುಗಿತು.
ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅವರು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ “ನನ್ನ ಕ್ಲಾಸ್ ಮೇಟ್ ಆಗಿದ್ದ ಮೋಹನ ಸೋನ ಅವರು ಅದ್ಬುತ ಚಿತ್ರ ಕಲಾವಿದ. ಅವರು ತಮ್ಮ ಚಿತ್ರಗಳ ಮೂಲಕವೇ ತಮ್ಮ ವಿದ್ಯಾರ್ಥಿಗಳ ಮನಸ್ಸಿಗೆ ಹುರುಪು ತಂದವರು. ಮೋಹನ್ ಸೋನ ಎಂಬ ಅದ್ಭುತ ಚಿತ್ರ ಕಲಾವಿದ ಇದ್ದರು ಎಂಬುದು ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಇವರ ಸಾಕ್ಷ್ಯಚಿತ್ರಗಳು ನಮ್ಮ ಶಾಲಾ-ಕಾಲೇಜುಗಳ ಗ್ರಂಥಾಲಯದಲ್ಲಿ ಇಡಬೇಕು. ನಮ್ಮ ಹಳೆಯ ಸಂಸ್ಕೃತಿ ಹೇಗಿತ್ತು ಎಂಬುದನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಡಿಕೊಟ್ಟಿದೆ” ಎಂದು ಹೇಳಿದರು.

ಸಾಕ್ಷ್ಯಚಿತ್ರದ ಬಗ್ಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡರು ಮಾತನಾಡಿ ಮೋಹನ್ ಸೋನ ಏನು ಎಂಬುದನ್ನು ಸಾಕ್ಷ್ಯಚಿತ್ರ ಚಿತ್ರ ಸಾರಿ ಹೇಳುತ್ತದೆ. ಅವರ ಸೃಜನಶೀಲ ಮನಸ್ಸು, ಮಾಂತ್ರಕ ಶಕ್ತಿಯುಳ್ಳ ಬೆರಳುಗಳೇ ಕಲೆಯ ಮೇಲಿರುವ ಮೋಹನ ಸೋನರ ಪ್ರೀತಿಯನ್ನು ತೋರಿಸುತ್ತದೆ. ಸುಮಾರು 850 ಪುಸ್ತಕಗಳಿಗೆ ಬಣ್ಣಗಳ ಮೂಲಕ ರೂಪ ನೀಡಿದ ಅವರ ಶ್ರಮವೇ ಸಾಕ್ಷಿ. ಸೋನರಿಂದ ಸಮಾಜಕ್ಕೆ ನೀಡಲು ಇನ್ನಷ್ಟು ಶಕ್ತಿ ಇತ್ತು.
ಸೋನರ ಬದುಕು ಮತ್ತು ಸಾಧನೆಯನ್ನು ರಂಗ ನಿರ್ದೇಶಕ ಜೀವನ್ ರಾಂ ಅವರು ಅದ್ಬುತವಾಗಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಸಮಾಜಕ್ಕೆ ಅತ್ಯದ್ಭುತ ಕೊಡುಗೆ ನೀಡಿದ ವ್ಯಕ್ತಿಗಳ ಇನ್ನಷ್ಟು ಸಾಕ್ಷ್ಯಚಿತ್ರಗಳು ಮೂಡಿಬರಲಿ ಎಂದು ಶುಭಹಾರೈಸಿದರು.
ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ ಒಬ್ಬ ಕಲಾವಿದನ ಬದುಕಿನ ನೆನಪು ಹೇಗಿದೆ ಎಂಬುದನ್ನು ಸಾಕ್ಷ್ಯಚಿತ್ರ ಚಿತ್ರದಲ್ಲಿ ಬಿಂಬಿಸಲಾಗಿದೆ. ಕಲೆಯಲ್ಲಿರುವ ಸೋನರ ಅನೇಕ ಮುಖಗಳನ್ನು ಸಾಕ್ಷ್ಯಚಿತ್ರದಲ್ಲಿ ಕಾಣಲು ಸಾಧ್ಯ.
ಸೋನರವರು ಬಣ್ಣ ಮತ್ತು ರೇಖೆಯಲ್ಲಿ ಜೀವನ ಶೈಲಿಯ ಕನಸು ಕಂಡಂತಹ ಅದ್ಬುತ ಕಲಾವಿದರಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಕ್ಷ್ಯಚಿತ್ರದ ನಿರ್ದೇಶಕ ಜೀವನ್ ರಾಂ ಸುಳ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಯ ಸದಸ್ಯರುಗಳಾದ ಎ.ಟಿ.ಕುಸುಮಾಧರ, ಪುರುಷೋತ್ತಮ ಕಿರ್ಲಾಯ, ಡಾ. ವಿಶ್ವನಾಥ ಬದಿಕಾನ, ಎಂ.ಎಸ್. ಜಯಪ್ರಕಾಶ್, ಡಾ. ಪುರುಷೋತ್ತಮ ಕರಂಗಲ್ಲು, ಸ್ಮಿತಾ ಅಮೃತರಾಜ್, ಕಿರಣ್ ಕುಂಬಳಚೇರಿ, ಭರತೇಶ ಅಳಸಂಡೆಮಜಲು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.