ಅಮರವೀರ ಕೆದಂಬಾಡಿ ರಾಮಯ್ಯಗೌಡ ಬಂಟಮಲೆ ಪ್ರಶಸ್ತಿಗೆ ಹೆಸರು ಸೂಚಿಸಲು ಕರೆ

Advt_Headding_Middle

 

 

ಭಾರತದ ಸ್ವಾತಂತ್ರ್ಯಕ್ಕೆ ಅಮೃತ ವರ್ಷ ಪ್ರಯುಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನ ಗೈದಿರುವ ದೇಶದ 6 ಕೋಟ್ಯಾಂತರ ದೇಶವಾಸಿಗಳ ಪೈಕಿ ಆರಂಭಿಕ ಹೋರಾಟಗಾರರ ಸಾಲಿನಲ್ಲಿ ಸುಳ್ಯದ ಸಮರ ವೀರರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ . ಅಂತಹ ಹೋರಾಟಗಾರರ ಸಾಲಿನಲ್ಲಿ ಸುಳ್ಯದವರೇ ಆದ ಕೆದಂಬಾಡಿ ರಾಮಯ್ಯಗೌಡರು ಮೊದಲಿಗರು. ಕ್ರಿ. ಶ.1837 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸೂತ್ರಧಾರಿ, ಕೆಚ್ಚೆದೆಯ ವೀರ ಯೋಧ ಅಮರ ಸೇನೆಯ ಮಹಾ ದಂಡನಾಯಕ, ಆದರೂ ಅವರಿಗೆ ನ್ಯಾಯವಾಗಿ ಸಲ್ಲತಕ್ಕ ಮರ್ಯಾದೆ ಗೌರವ ಸಂದಾಯವಾಗಲೇ ಇಲ್ಲ ಎಂಬ ಕೊರತೆ ಎದ್ದು ಕಾಣಿಸುತ್ತದೆ.

ಇಂತಹ ಮಹಾನ್ ದಂಡನಾಯಕನ ಹೆಸರನ್ನು ಚಿರಸ್ಥಾಯಿಗೊಳಿಸುವ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶಕನಾಗಬಲ್ಲ ದೇಶ ಪ್ರೇಮಿಯೊಬ್ಬನನ್ನು ನೆನಪಿಸುವ ಉದ್ದೇಶದಿಂದ ಬಂಟಮಲೆ ಅಕಾಡೆಮಿಯು ಪ್ರಶಸ್ತಿಯೊಂದನ್ನು ನೀಡಲು ತೀರ್ಮಾನಿಸಿದೆ. ಸಮಾಜದ ಹಿತಕ್ಕಾಗಿ ಸಮರ್ಪಣಾ ಭಾವ ಹೊಂದಿದ್ದು ರಾಜಕೀಯ ಹೋರಾಟದಿಂದ ತೊಡಗಿ ದಲಿತರು, ರೈತರು, ಕಾರ್ಮಿಕರು, ಸಂಶೋಧಕರು, ಸಾಹಿತಿ ಕಲಾವಿದರು ಹೀಗೆ ಸಮಾಜದ ನಾನಾ ಸ್ಥರಗಳಲ್ಲಿ ಕಾಣಿಸುವ ಅಪರೂಪದ ವ್ಯಕ್ತಿ ಗಳನ್ನು ಆಯ್ದು ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂತಹ ವ್ಯಕ್ತಿಗಳ ಕುರಿತಾಗಿ ಪರಿಚಯ, ಪ್ರಸ್ತಾವನೆಯನ್ನು ಬಂಟಮಲೆ ಅಕಾಡೆಮಿಗೆ ತಿಳಿಸುವಂತೆ ಕೋರಲಾಗಿದೆ. ಈ ಬಾರಿಯ ತೀರ್ಪುಗಾರರಾಗಿ ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ವಿಜಯ ಪೂಣಚ್ಚ, ಇತಿಹಾಸ ಸಂಶೋಧಕ ನ್ಯಾಯವಾದಿ ಕೆ ಆರ್ ವಿದ್ಯಾಧರ ಕುಡೆಕಲ್ಲು, ಸರಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಪ್ರಾಂಶುಪಾಲ ಡಾ. ಟಿ ಪಿ ಆ್ಯಂಟನಿ ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ. ಸನ್ಮಾನ ಸಮಾರಂಭದ ಯೋಜನಾ ನಿರ್ದೇಶಕರಾಗಿ ಯತೀಂದ್ರ ಕೆದಂಬಾಡಿ ಇರಲಿದ್ದಾರೆ. ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳ ಹೆಸರುಗಳನ್ನು ಸೂಚಿಸಿ ಆ.20 ರ ಒಳಗಾಗಿ ಬಂಟಮಲೆ ಅಕಾಡೆಮಿ, ಗುತ್ತಿಗಾರು ಅಂಚೆ ಇಲ್ಲಿಗೆ ಕಳುಹಿಸಿ ಕೊಡುವಂತೆ ಬಂಟಮಲೆ ಅಕಾಡೆಮಿಯ ಎ ಕೆ ಹಿಮಕರ (9481267121) ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.