ಪಂಜ:ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಎ ಎಸ್ ಕಮಲ ರವರಿಗೆ ಬೀಳ್ಕೊಡುಗೆ

Advt_Headding_Middle

 

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಎ ಎಸ್ ಕಮಲ ರವರು ಜು.31.ನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಶ್ರೀಮತಿ ಕಮಲರವರು ಆರೋಗ್ಯ ಕೇಂದ್ರದಲ್ಲಿ ವಿಶೇಷ ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಯಾಗುತ್ತಿದ್ದಾರೆ. ಅವರ ಪ್ರಾಮಾಣಿಕ ಸೇವೆಯಿಂದ ಊರಲ್ಲಿ , ಇಲಾಖೆಯಲ್ಲಿ ಜನರ ಬಹಳಷ್ಟು ಪ್ರೀತಿಗಳಿಸಿದ್ದಾರೆ.”ಎಂದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಟಿ. ವಿ , ರಾಹೇಲಮ್ಮ,ಬೆಳ್ಳಾರೆ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ , ನಿವೃತ್ತ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕಮಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಶ್ರೀಮತಿ ಎ ಎಸ್ ಕಮಲರವರು ಮಾತನಾಡಿ “ನಾನು ಆರೋಗ್ಯ ಕೇಂದ್ರದ ಮೇಲೆ ಅತ್ಯಂತ ಪ್ರೀತಿಯಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ.ವೃತ್ತಿಯಿಂದ ನಿವೃತ್ತಿಯಾದರೂ ಇನ್ನು ಮುಂದೆಯೂ ಇಲ್ಲಿನ ಸಂಪರ್ಕದಲ್ಲಿ ಇರುತ್ತೇನೆ”.ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ವಿ ರಾಹೇಲಮ್ಮ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಸತ್ಯವತಿ ಪರಿಚಯಿಸಿದರು.ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರೇಖಾ ನಿರೂಪಿಸಿದರು ಮತ್ತು ವಂದಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲೀಲಾವತಿ ,ನಿವೃತ್ತ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ವಸಂತಿ ಮೊದಲಾದವರು ಶುಭ ಹಾರೈಸಿದರು. ನಿವೃತ್ತ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶ್ರೀಮತಿ ಶಾರದಾ, ಶ್ರೀಮತಿ ರೇವತಿ ಬೊಳ್ಳಾಜೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶ್ರೀಮತಿ ಬಿ.ಟಿ. ಪೂವಮ್ಮ, ಶ್ರೀಮತಿ ರತ್ನಾವತಿ ಎ, ಶ್ರೀಮತಿ ರೇಣುಕಾ ಕೆ, ಶ್ರೀಮತಿ ಪವಿತ್ರ ಜೆ, ಶ್ರೀಮತಿ ಸತ್ಯವತಿ ಬಿ, ಶ್ರೀಮತಿ ರೇಖಾ ಪಿ, ಶ್ರೀಮತಿ ಧರ್ಮವತಿ ಕೆ, ಶ್ರೀಮತಿ ಕೆ ಕೆ ವಿಮಲ, ಶ್ರೀಮತಿ ಸುಜಾತ ಕೆ, ವೈದ್ಯಕೀಯ ಪ್ರಯೋಗಾಲಯದ ಟೆಕ್ನೋಲಜಿಸ್ಟ್ ಭವಾನಿ ಶಂಕರ, ಶುಶ್ರೂಷಕಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಕೆ.ಕೆ.,ಫಾರ್ಮಸಿ ರಶ್ಮಿ ಎಂ ಆರ್ ,ಸಿಬ್ಬಂದಿ ಶ್ರೀಮತಿ ಕಮಲ ಕೆ ಎಸ್, ಜೀವಿತ್ ಬಿ.ಟಿ., ಶ್ರಾವ್ಯ ಬಿ.ಟಿ,ಆಶಾ ಕಾರ್ಯಕರ್ತೆಯರು , ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.