ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲದಿಂದ ಆಟಿ ಆಚರಣೆ

Advt_Headding_Middle

 

 

ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲ ಇದರ ಆಟಿ ಆಚರಣೆ ಆ.3 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚನ್ನೆಮಣೆ ಆಡುವುದರ ಮೂಲಕ ಧನಲಕ್ಷ್ಮೀ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಜಯಂತಿ ಜನಾರ್ಧನ್ ನೆರವೇರಿಸಿದರು. ಸಭಾಧ್ಯಕ್ಷರಾಗಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ರವರು ವಹಿಸಿದ್ದ ರು.
ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಶ್ವೇತಾ ಪುರುಷೋತ್ತಮ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲೀಲಾ ಮನಮೋಹನ್, ನೆಹರು ಮೆಮೋರಿಯಲ್ ಸುಳ್ಯ ಇದರ ಉಪನ್ಯಾಸಕಿಯಾದ ಶ್ರೀಮತಿ ಅನಂತಲಕ್ಷ್ಮೀ ಭಟ್ ವೇದಿಕೆಯಲ್ಲಿದ್ದರು

 

ಶ್ರೀಮತಿ ಸೀತಾಲಕ್ಷ್ಮಿ ಪ್ರಾರ್ಥಿಸಿದರು. ಶ್ರೀಮತಿ ಕವಿತಾ ಪುರುಷೋತ್ತಮ ಸ್ವಾಗತಿಸಿ, ವಿಶಾಲ ಕರ್ಲಪ್ಪಾಡಿ ಯವರು ವಂದಿಸಿದರು. ಶ್ರೀಮತಿ ವಿಮಲಾರುಣ ಕಾರ್ಯಕ್ರಮ ನಿರೂಪಿಸಿದರು. ಆಟಿ ಆಚರಣೆಯ ಪ್ರಯುಕ್ತ 35 ಬಗೆಯ ವಿಶೇಷ ಖಾದ್ಯಗಳಿದ್ದವು. ಚೆನ್ನಮಣೆ ಆಟ,ನೇಜಿ ಪಾಡ್ದನ, ಕಲ್ಲಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಬಹುಮಾನವನ್ನು ಪ್ರಾಯೋಜಿಸಿದವರು ಶಿವಪ್ರಕಾಶ್ ಅಡ್ಪಂಗಾಯ ಮೊಕ್ತೆಸರರು ಅಯ್ಯಪ್ಪ ಸೇವಾ ಸಮಿತಿ ಅಡ್ಪoಗಾಯ. ಈ ಸಂದರ್ಭದಲ್ಲಿ ಮಹಿಳಾಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.