ದೊಡ್ಡ ತೋಟ: ಅರಣ್ಯೀಕರಣ ಕಾರ್ಯಕ್ರಮ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸುಳ್ಯ ದೊಡ್ಡತೋಟ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ದೊಡ್ಡತೋಟ ವಲಯ ಜನಜಾಗೃತಿ ವೇದಿಕೆ ದೊಡ್ಡತೋಟ ,ಅರಣ್ಯ ಇಲಾಖೆ ಮರ್ಕಂಜ ಮತ್ತು ಗ್ರಾಮ ಅರಣ್ಯ ಸಮಿತಿ, ಹಾಗೂ ಸ. ಹಿ .ಪ್ರಾ ಶಾಲೆ ಮಿತ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆ. ೨ ರಂದು ಅರಣ್ಯೀಕರಣ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ ಉದ್ಘಾಟನೆ ನೆರವೇರಿಸಿದರು. ಅರಣ್ಯ ವಲಯಾಧಿಕಾರಿಯಾದ ಚಂದ್ರುರವರು ಪರಿಸರ ಮತ್ತು ಅರಣ್ಯ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿದರು .
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿಯವರು ಗಿಡವನ್ನು ನೆಡುವುದರ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ನಂತರ ೧೫೦ ಗಿಡಗಳನ್ನು ಮಿತ್ತಡ್ಕ ಶಾಲೆ, ಅಜ್ಜನಗದ್ದೆ ಶಾಲೆ ಮತ್ತು ಕುಕ್ಕುಜಡ್ಕ ಶಾಲೆಗಳಲ್ಲಿ ವಿಪತ್ತು ನಿರ್ವಹಣೆಯ ಸ್ವಯಂಸೇವಕರ ಮೂಲಕ ಗಿಡವನ್ನು ನಾಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪವಿತ್ರ ಗುಂಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಹರೀಶ್, ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ, ದೊಡ್ಡತೋಟ ವಲಯದ ಮೇಲ್ವಿಚಾರಕರಾದ ನವೀನ್ ,ವಿಪತ್ತು ನಿರ್ವಹಣೆಯ ಸಂಯೋಜಕರಾದ ವೆಂಕಟೇಶ್ ಸುಂದರ ಹಾಗೂ ನಿರ್ವಹಣೆಯ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಶಾಲಾ ಮಕ್ಕಳು ಒಕ್ಕೂಟ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳಾದ ರೋಹಿತಾ ,ಹರ್ಷಿತಾ ,ಗಾಯತ್ರಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.