ಸುಳ್ಯ ಮಂಡಲ ಬಿಜೆಪಿ : ಪಂಚಾಯತ್ ರಾಜ್ ಪ್ರಕೋಷ್ಠದ ಪದಗ್ರಹಣ

Advt_Headding_Middle

 

ಬಿಜೆಪಿ ಪಕ್ಷದ ಹಿರಿಯರ ಸೂಚನೆ ಮೇರೆಗೆ ಗ್ರಾಮಗಳ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿಯ ದೃಷ್ಟಿಯಿಂದ ಸುಳ್ಯ ಮಂಡಲದಲ್ಲಿ 27 ಪ್ರಕೋಷ್ಟಗಳನ್ನು ರಚಿಸಲಾಗಿದ್ದು, ಇದರ ಅಂಗವಾಗಿ ಇಂದು ಸುಳ್ಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಈಗಾಗಲೇ ರಚಿಸಲಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಪಂಚಾಯತ್ ರಾಜ್ ಪ್ರಕೋಷ್ಠದ ನಾಯಕರ ಪದಗ್ರಹಣ ಸಭೆ ನಡೆಯಿತು.

 

ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ವೆಂಕಟ್ ದಂಬೆಕೋಡಿ, ಜಿಲ್ಲಾ ಸಂಚಾಲಕ ಚನಿಯ ಕಲ್ತಡ್ಕ,ಪಂಚಾಯತ್ ರಾಜ್ ಪ್ರಕೋಷ್ಠದ ಸಂಚಾಲಕರಾಗಿ ಆಯ್ಕೆಗೊಂಡಿರುವ ಹರೀಶ್ ರೈ ಉಬರಡ್ಕ, ಸಹಸಂಚಾಲಕ ಮುರಳಿಧರ ಬಿಳಿನೆಲೆ, ಸದಸ್ಯರುಗಳಾದ ಬಾಲಚಂದ್ರ ಡಿ ಸಿ, ಸತೀಶ್ ಬಲ್ಯಾಯ, ಕಾರ್ಯಪ್ಪ ಗೌಡ ಚಿದ್ಗಲ್, ಬಾಲಕೃಷ್ಣ ಬೇಗಂದ ಪಡ್ಪು, ಪಾರ್ವತಿ ಸಿ ಡಿ ಪಕ್ಷದ ಮುಖಂಡರುಗಳಾದ ಮಹೇಶ್ ರೈ ಮೇನಾಲ, ಜಿನ್ನಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಪಂಚಾಯತ್ ರಾಜ್ ಪ್ರಕೋಷ್ಠದ ಕುರಿತು ಮಂಡಲ ಪ್ರಭಾವಿ ಬಾಲಚಂದ್ರ ಕಟ್ಟೆ ಮಾತನಾಡಿದರು.ಮಂಡಲ ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪಕ್ಷದ ಮುಖಂಡರುಗಳ ಆದೇಶದ ಮೇರೆಗೆ ಸುಳ್ಯ ಮಂಡಲ ಸಮಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಮತ್ತು ಪಕ್ಷದ ಅಭಿವೃದ್ಧಿಗಾಗಿ 27 ಪ್ರಕೋಷ್ಟ ಗಳನ್ನು ರಚಿಸಲಾಗಿದ್ದು ಪಂಚಾಯತ್ ಅಭಿವೃದ್ಧಿಯ ಜೊತೆಜೊತೆಗೆ ಪಕ್ಷದ ಬೆಳವಣಿಗೆ ಆಗಬೇಕಾಗಿದೆ.

ಆದ್ದರಿಂದ ಎಲ್ಲರೂ ಒಟ್ಟು ಸೇರಿ ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಪಂಚಾಯತುಗಳ ಸದಸ್ಯರುಗಳನ್ನು ಸೇರಿಸಿಕೊಂಡು ಸಮಿತಿಗಳನ್ನು ರಚಿಸಿ ಒಗ್ಗೂಡಿಸಿ ಮಹಾಶಕ್ತಿ ಕೇಂದ್ರಗಳಲ್ಲಿ ಅವರಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.