ಪಂಜ ಆಟೋಚಾಲಕನ ಮೇಲೆ ಜೀಪು ಚಾಲಕನಿಂದ ಹಲ್ಲೆಗೆ ಬಿಎಂಎಸ್ ಸಂಯೋಜಿತ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಖಂಡನೆ

Advt_Headding_Middle

ಪಂಜ ಐವತ್ತೊಕ್ಲು ಗ್ರಾಮದ ರಾಜೇಶ್ ಎಂಬವರು ಆಟೋ ಚಾಲಕರಾಗಿದ್ದು ಆಗಸ್ಟ್ 26ರಂದು ಕೂತ್ಕುಂಜ ಹೆಬ್ಬಾರು ಹಿತ್ತಲು ವಿನಿಂದ ತಮ್ಮ ಆಟೋದಲ್ಲಿ ಪ್ರಯಾಣಿಕರನ್ನು ಕರೆ ತರುವ ಸಂದರ್ಭದಲ್ಲಿ ಕೂತ್ಕುಂಜ ಗ್ರಾಮದ ಜೀಪು ಚಾಲಕ ಕುಶಾಲಪ್ಪ ಗೌಡ ಎಂಬವರು ಹಲ್ಲೆ ನಡೆಸಿದ್ದಾರೆಂದು ತಿಳಿಸಿರುವ ಸುಳ್ಯ ತಾಲೂಕು ಬಿಎಂಎಸ್ ಸಂಯೋಜಿತ ಆಟೋ ಯೂನಿಯನ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ನಮ್ಮ ಸಂಘದ ಸದಸ್ಯರಿಗೆ ಜೀಪು ಚಾಲಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ತೆರಿಗೆಯನ್ನು ಕಟ್ಟಿ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ರಿಕ್ಷಾಚಾಲಕರಿಗೆ ವಿನಾಕಾರಣ ತೊಂದರೆ ನೀಡಿ ಹಲ್ಲೆ ಮಾಡಿರುವ ಬಗ್ಗೆ ಜೀಪು ಚಾಲಕನ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.