ಕೆ. ವಿ. ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾರ್‍ಯಾಗಾರ

Advt_Headding_Middle

 

 

ಕೆ. ವಿ. ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳಲ್ಲಿ ಇಂಟರ್ನ್‌ಶಿಪ್ ಅನುಭವವನ್ನು ಇಂಡಸ್ಟ್ರಿ ಮತ್ತು ಸಂಶೋಧನ ವಿಭಾಗಗಳಲ್ಲಿ ಪಡೆಯುವುದಕ್ಕಾಗಿಕಾಲೇಜಿನಲ್ಲಿ “ಶೀಟ್ ಮೆಟಲ್ ಪ್ರಾಡಕ್ಟ್‌ಡಿಸೈನ್” ಎಂಬ ವಿಷಯದಲ್ಲಿಐದು ದಿನಗಳ ಕಾರ್‍ಯಾಗಾರವನ್ನು ವಿಭಾಗದ’ CAED Centre’ನಲ್ಲಿ, ದಿನಾಂಕ ೧೭-೮-೨೦೨೧ ರಿಂದ ೨೪-೦೮-೨೦೨೧ರ ತನಕ ನಡೆಸಲಾಯಿತು. ಈ ಕಾರ್‍ಯಾಗಾರವು ಮುಂದಿನ ಒಂದು ತಿಂಗಳ ಕಾಲ ಪ್ರಾಯೋಗಿಕ ತರಗತಿಗಳೊಂದಿಗೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರಸ್ತುತ””work from home””ನಂತಹ ಅನುಭವವನ್ನು ನೀಡುವುದರಜೊತೆಗೆ ಕ್ರಿಯಾಶೀಲತೆ ಮತ್ತು ಆವಿಷ್ಕಾರಗಳನ್ನು ಹುಟ್ಟು ಹಾಕಲಿದೆಎಂದು ವಿಭಾಗದ ಮುಖ್ಯಸ್ಥರಾದಡಾ| ಉಮಾಶಂಕರ್ ಕೆ. ಎಸ್.,ರವರುಕಾರ್‍ಯಾಗಾರದಉದ್ಘಾಟನಾ ಸಮಾರಂಭದಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ಕಾರ್‍ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪ್ರೋ. ಭರತ್. ಪಿ. ಯವರು ನಡೆಸಿಕೊಟ್ಟರು. ಇಂಡಸ್ಟ್ರಿಯಲ್ಲಿ ೦೮ ವರ್ಷಗಳ ಅನುಭವದೊಂದಿಗೆ ಮುಂದಿನ ದಿನಗಳಲ್ಲಿ ಮೆಕ್ಯಾನಿಕಲ್ ವಿಧ್ಯಾರ್ಥಿಗಳು ಯಾವರೀತಿತಯಾರಾಗಬೇಕೆಂಬುವುದನ್ನು ಬೌದ್ಧಿಕ ಮತ್ತು ಪ್ರಯೋಗಿಕವಾಗಿ ವಿವರಿಸಿದರು.ಇತ್ತೀಚಿನ ದಿನಗಳಲ್ಲಿ ಶೀಟ್ ಮೆಟಲ್‌ಎಂಬುವುದುಎಲ್ಲಾ ಪ್ರೋಡಕ್ಟಗಳ ಅವಿಭಾಜ್ಯಅಂಗವಾಗಿರುವುದರಿಂದ,ಅದರಡಿಸೈನ್ ಮತ್ತು ಮಾರ್ಪಡಿಸುವಿಕೆಯಲ್ಲಿಅನುಸರಿಸಬೇಕಾದ ವಿಧಾನಗಳು ಮತ್ತು ಪ್ರಾಯೋಗಿಕವಾಗಿ ನಡೆದಾಗ ಆಗಬಹುದಾದ ಬದಲಾವಣೆ ಮತ್ತು ಗುಣವಿಶೇಷತೆಗಳನ್ನು,ಕಂಪ್ಯೂಟರ್ ಸಿಮ್ಯುಲೇಷನ್ ಮೂಲಕ ಹೇಗೆ ಕಂಡುಕೊಳ್ಳಬಹುದು ಮತ್ತುಯಾವರೀತಿಯ ಗುಣವಿಶೇಷತೆಗಳನ್ನು ಡಿಸೈನ್ ಮತ್ತು ಮಾರ್ಪಡಿಸುವವಿಧಾನಗಳಲ್ಲಿ ಅಳವಡಿಸಬಹುದುಎಂಬುವುದುಕಾರ್ಯಕ್ರಮದಉದ್ದೇಶವಾಗಿದ್ದು, ಭಾಗವಹಿಸಿದ ವಿಧ್ಯಾರ್ಥಿಗಳಲ್ಲಿ ಈ ಅನುಭವವುದೊರಕಿತು. ಅಟೊಮೊಬೈಲ್, ಮೊಬೈಲ್‌ಫೋನ್, ಕಂಪ್ಯೂಟರ್ ಮುಂತಾದ ಹಲವು ವಸ್ತುಗಳು ಶೀಟ್ ಮೆಟಲ್‌ನಿಂದ ಮಾಡಲ್ಪಟ್ಟಿದ್ದು ವಿದ್ಯಾರ್ಥಿಗಳಲ್ಲಿ  Industry Ready ಎಂಬ ವಿಶೇಷತೆಯುದೊರಕಲಿದೆ. ಕಾರ್‍ಯಗಾರವನ್ನು ವಿದ್ಯಾರ್ಥಿಗಳ ಅಸೋಷಿಯೆಷನ್‌ಆದ “ಮೆಕ್ಯಾನಿಕಲ್‌ಇಂಜಿನಿಯರಿಂಗ್‌ಅಸೋಷಿಯೆಷನ್(ಒಇಂ) ಆಯೋಜಿಸಿತ್ತು. ಈ ಕಾರ್‍ಯಾಗಾರದಲ್ಲಿ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗದ೫೦ ವಿದ್ಯಾರ್ಥಿಗಳು ಭಾಗವಹಿಸಿ ನೈಪುಣ್ಯತೆಯನ್ನು ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.