ಪಡ್ಪಿನಂಗಡಿ: ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ರುಕ್ಮಿಣಿ ಬಿ.ಸಿ. ರವರಿಗೆ ಸನ್ಮಾನ ಸಮಾರಂಭ

Advt_Headding_Middle

 

 

ಪಡ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ‘ಅನುಪಮ ಸೇವಾ ಪ್ರಶಸ್ತಿ ಪುರಸ್ಕೃತ’ ಶ್ರೀಮತಿ ರುಕ್ಮಿಣಿ ಬಿ.ಸಿ.ಅವರಿಗೆ ಸನ್ಮಾನ ಸಮಾರಂಭ ಆ.31ರಂದು ಜರುಗಿತು. ” ಶ್ರೀಮತಿ ರುಕ್ಮಿಣಿ ಬಿ.ಸಿ ರವರು ‌ನಮ್ಮ ಶಾಲೆಯಲ್ಲಿ 11 ವರ್ಷ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡಿ ಹಲವಾರು ಶೈಕ್ಷಣಿಕ ಉತ್ತಮ ಚಟುವಟಿಕೆಗಳನ್ನು ಮಾಡಿ. ಶಾಲೆಯ ಮೂಲ ಭೂತ ಸೌಕರ್ಯಗಳನ್ನು ಹೆಚ್ಚಿಸಿ ಪ್ರಾಮಾಣಿಕವಾಗಿ ಪರಿಪೂರ್ಣವಾಗಿ ಸೇವೆ ಸಲ್ಲಿಸಿ ಮಕ್ಕಳ, ಪೋಷಕರ, ಎಸ್ ಡಿ ಎಂ ಸಿ ಹಾಗೂ ಊರಿನ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ಶಾಲೆಯ ಬೆಳ್ಳಿಹಬ್ಬ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದಿದೆ* .”ಎಂದು ನಿವೃತ್ತ ಮುಖ್ಯ ಶಿಕ್ಷಕ ,ಶಾಲಾ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ವಾಸುದೇವ ನಡ್ಕ ಹೇಳಿದರು.
” *ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯೆಂದು ಶಿಕ್ಷಣ ಸಂಸ್ಥೆಯ ಸೇವೆಗೆ ಸೇರಿದೆ. ಅದಕ್ಕೆ ಪೂರಕವಾಗಿ ನಾನು ಹುಟ್ಟಿ ಬೆಳೆದ ಮನೆಯ ವಾತಾವರಣವೇ ಹಾಗಿತ್ತು. ಆಗ ನಮ್ಮ ಮನೆಯಲ್ಲಿ ಶಿಕ್ಷಕರು,ಶಿಕ್ಷಕಿಯರು , ಉತ್ತಮ ಸಂಬಂಧ ಇದ್ದು ಮನೆಯೇ ಪಾಠ ಶಾಲೆಯಾಗಿತ್ತು. ಬೆಳದ ಸಂಸ್ಕೃತಿ ವಾತಾವರಣ ಇಂದು ಎಲ್ಲರಿಂದ ಒಳ್ಳೆಯ ಮಾತುಗಳನ್ನು ಕೇಳಲು ಕಾರಣವಾಗಿದೆ. ನನ್ನ ಸೇವಾ ವೃತ್ತಿಯಲ್ಲಿ‌ ನಿಷ್ಠೆ ಮತ್ತು ಪ್ರಮಾಣಿಕತೆ, ಕರ್ತವ್ಯದಲ್ಲಿ ಶ್ರದ್ಧೆ, ವೃತ್ತಿಯಲ್ಲಿ ಬದ್ಧತೆಯನ್ನು ಬೆಳೆಸಿಕೊಂಡು ಬಂದಿದ್ದೇನೆ* .” ಎಂದು ಸನ್ಮಾನ ಸ್ವೀಕರಿಸಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ರುಕ್ಮಿಣಿ ಬಿ.ಸಿ.ಹೇಳಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಝೂರಾ ಎಸ್ ಸಭಾಧ್ಯಕ್ಷತೆ ವಹಿಸಿದ್ದರು.ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇದರ ಉಪ ನಿರ್ದೇಶಕ ಮಲ್ಲೇಸ್ವಾಮಿ ಬೆಳ್ಳಿಹಬ್ಬ ಸ್ಮರಣ‌ ಸಂಚಿಕೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಸುಳ್ಯ ಜೂನಿಯರ್ ಕಾಲೇಜು ಮುಖ್ಯ ಶಿಕ್ಷಕ ‌ಪ್ರಕಾಶ್ ಮೂಡಿತ್ತಾಯ ಶುಭ ಹಾರೈಸಿದರು.ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಜಿರಾ , ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್,ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲ ನಡ್ಕ,ಸಿ ಆರ್ ಪಿ ಜಯಂತ , ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಂಗಾಧರ ಗೌಡ ಆಕ್ರಿಕಟ್ಟೆ,ಪಡ್ಪಿನಂಗಡಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಯೋಗೀಶ್ವರಿ, ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಫೀಕ್ ಸಿ.ಎಂ, ಸಹ ಶಿಕ್ಷಕಿಯರಾದ
ಶ್ರೀಮತಿ ಹಂಸಾವತಿ, ಶ್ರೀಮತಿ ಸುಗಂಧಿ ಪುತ್ಯ,ಕು.ಲಾವಣ್ಯ, ಸ.ಶಿಕ್ಷಕ ನಾರಾಯಣ ಡಿ , ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಾರ್ಯಪ್ಪ ಗೌಡ,ಪ್ರಗತಿ ಪರ ಕೃಷಿಕರಾದ ಲಕ್ಷ್ಮಣ ಗೌಡ ಆಕ್ರಿಕಟ್ಟೆ, ಕೂಸಪ್ಪ ಗೌಡ ಆಕ್ರಿಕಟ್ಟೆ, ಆನಂದ ಗೌಡ ಆಕ್ರಿಕಟ್ಟೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾವತಿ ,ಟಿ ಎಸ್ ಖಾದರ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ವೇಳೆ ಶ್ರೀಮತಿ ರುಕ್ಮಿಣಿ ಬಿ.ಸಿ.ಶಾಲೆಗೆ ದತ್ತಿ ನಿಧಿ ಸ್ಥಾಪಿಸಿ ಹಸ್ತಾಂತರಿಸಿದರು.
ಶ್ರೀಮತಿ ರುಕ್ಮಿಣಿ ಬಿ ಸಿ
ರವರ ಪುತ್ರ ಕೌಶಿಕ್ ಕುಳ, ಪುತ್ರಿ ಶ್ರೀಮತಿ ಕ್ಷಮಾ ನಿತಿನ್ ಕುಮಾರ್, ಮೊಮ್ಮಗಳು ಐಶಾನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಕು.ಲಾವಣ್ಯ ಪ್ರಾರ್ಥಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಯೋಗೀಶ್ವರಿ ಪ್ರಸ್ತಾವನೆಗೈದರು. ಶಿಕ್ಷಕ ನಾರಾಯಣ ಸ್ವಾಗತಿಸಿದರು ಮತ್ತು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸುಗಂಧಿ ಪುತ್ಯ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.