Breaking News

ನಡುಗಲ್ಲು : ಜವಾಹರ್ ಯುವಕ ಮಂಡಲ ನೈತೃತ್ವದಲ್ಲಿ ಮಾಹಿತಿ ಕಾರ್ಯಕ್ರಮ

Advt_Headding_Middle

 

ಜವಾಹರ್ ಯುವಕ ಮಂಡಲ ನಡುಗಲ್ಲು ಇದರ ವತಿಯಿಂದ ಎಸ್ ಡಿ ಸಿ ಸಿ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ಬ್ಯಾಂಕ್ ಗ್ರಾಹಕರಿಗೆ ಸಿಗುವ ಸೌಲಭ್ಯ ಮತ್ತು ಗುತ್ತಿಗಾರು ಗ್ರಾ.ಪಂ ವತಿಯಿಂದ ತೆರಿಗೆ ಸಂಗ್ರಹ ಅಭಿಯಾನ ಮತ್ತು ಮಾಹಿತಿ ಕಾರ್ಯಕ್ರಮ ಆ.30 ರಂದು ನಡಗಲ್ಲು ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗುತ್ತಿಗಾರು ಗ್ರಾ.ಪಂ ಸದಸ್ಯ ಹರೀಶ್ ಕೊಯಿಲ ಉದ್ಘಾಟಿಸಿದರು. ಜವಾಹರ್ ಯುವಕ ಮಂಡಲದ ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳುಗೋಡು ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಗ್ರಾಹಕರಿಗೆ ಸಿಗುವ ಸೌಲಭ್ಯದ ಬಗ್ಗೆ ಸುಬ್ರಹ್ಮಣ್ಯ ಎಸ್ ಡಿ ಸಿ ಸಿ ಬ್ಯಾಂಕ್ ನ ಮೆನೇಜರ್ ಚಂದ್ರಪ್ರಕಾಶ್ ಮತ್ತು ಮಾರಾಟ ವಿಭಾಗದ ಸಂತೋಷ್ ಕುಮಾರ್ ಮಾಹಿತಿ ನೀಡಿದರು. ತೆರಿಗೆ ಸಂಗ್ರಹ, ಪಂಚಾಯತ್ ನಿಂದ ಸಿಗುವ ಸೌಕರ್ಯದ ಬಗ್ಗೆ ಪಂಚಾಯತ್ ಪಿ ಡಿ ಒ ಧನಪತಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗುತ್ತಿಗಾರು ಗ್ರಾ.ಪಂ ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ, ಜವಾಹರ್ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಅಂಬೆಕಲ್ಲು ಉಪಸ್ಥಿತರಿದ್ದರು. ಯುವಕ ಮಂಡಲದ ಕಾರ್ಯದರ್ಶಿ ದಿನೇಶ್ ನಳಿಯಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಧರ್ಮಸ್ಥಳ ಗ್ರಾ.ಯೋ. ಸೇವಾನಿರತ ಹರಿಶ್ಚಂದ್ರ ವಂದಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಲ್ಲಿ ಅದೃಷ್ಟವಂತ 5 ಗ್ರಾಹಕರನ್ನು ಆಯ್ಕೆ ಮಾಡಿದ್ದು ಚೇತನ್ ಪುರ್ಲುಮಕ್ಕಿ, ಯಮುನಾ ಚಾರ್ಮತ, ಭಾವಾನಿ ಎ, ಜಯಪ್ರಕಾಶ್ ಅಂಜೇರಿ, ಕುಶಾಲಪ್ಪ ಗೌಡ ಅಂಬೆಕಲ್ಲು ಆಯ್ಕೆಯಾಗಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.