ನಿವೃತ್ತಿಯಾದ ಶಿಕ್ಷಕರಿಗೆ ಸುಳ್ಯ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ- ಬೀಳ್ಕೊಡುಗೆ ಸಮಾರಂಭ

Advt_Headding_Middle

 

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರಸ್ತುತ 2021 ರ ವರ್ಷದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಸುಳ್ಯ ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುವ ಸಮಾರಂಭವು ಸೆ .1ರಂದು ಸುಳ್ಯ ನಿವೃತ್ತ ನೌಕರರ ಸಂಘದ ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆ ರವರು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್. ಪಿ, ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್, ಸಂಘದ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ,ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ, ನಿವೃತ್ತ ಶಿಕ್ಷಕ ಗಣಪತಿ ಭಟ್ ರವರು ಉಪಸ್ಥಿತರಿದ್ದರು.ಈ ಸಂದರ್ಭ 2021 ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಯಿಂದ ನಿವೃತ್ತಿಯಾದ ಶ್ರೀಮತಿ ಕಮಲಾಕ್ಷಿ ಗುತ್ತಿಗಾರು, ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಶ್ರೀಮತಿ ರುಕ್ಮಿಣಿ ಬಿ.ಸಿ ಪಡ್ಪಿನಂಗಡಿ, ರಘುನಾಥ ನೆಟ್ಟಾರು, ಲೋಕನಾಥ ಶೇಣಿ, ಶ್ರೀಮತಿ ಶಶಿಕಲಾ ಕಲ್ಮಡ್ಕ, ಶ್ರೀಮತಿ ರಾಜೀವಿ ಕುಕ್ಕುಜಡ್ಕ, ಶ್ರೀಮತಿ ಕೋಮಲ ಬೊಳುಬೈಲು
8 ಮಂದಿ ಶಿಕ್ಷಕರನ್ನು ಶಾಲು ಹೊದಿಸಿ ಹಾರಾರ್ಪಣೆ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್.ಪಿ ಯವರು ಎಲ್ಲರಿಗೂ ಶುಭ ಹಾರೈಸಿದರು.
ನಿವೃತ್ತಿಯಾದ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪದ್ಮನಾಭ ಅತ್ಯಾಡಿ ಸ್ವಾಗತಿಸಿದರು. ಕುಶಾಲಪ್ಪ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೀಲಾವತಿ ಕೆ.ಎನ್ ವಂದಿಸಿದರು. ಶಿವರಾಮ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.