Breaking News

 65 ನೇ ವಿಮಾ ಸಪ್ತಾಹಕ್ಕೆ ಚಾಲನೆ

Advt_Headding_Middle

ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಎಲ್ಲೈಸಿ ಕೊಡುಗೆ ಅನನ್ಯ : ಜಿ.ಶಶಿಧರ ಹೆಗ್ಡೆ
ರಾಷ್ಟ್ರನಿರ್ಮಾಣದ ಧೃಡ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಪಾರದರ್ಶಕವಾದ ಆಡಳಿತ ನಡೆಸುತ್ತಿರುವ ಭಾರತೀಯಜೀವ ವಿಮಾ ನಿಗಮವು ಗ್ರಾಹಕರ ಹಿತರಕ್ಷಣೆಗೆಕಟಿಬದ್ಧವಾಗಿದೆ. ಉದಾರೀಕರಣದ ಬದಲಾದ ಕಾಲಘಟ್ಟದಲ್ಲಿಯೂ ಕೂಡಾ ನಿಗಮವು ಜೀವವಿಮಾ ವಲಯದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಯಲು ಗ್ರಾಹಕರ ಹಾಗೂ ಸಮಸ್ತ ಜನತೆ ಸಂಸ್ಧೆಯ ಮೇಲಿಟ್ಟಿರುವ ಅಚಲ ನಂಬಿಕೆಯೇ ಕಾರಣ ಎಂದು ನಿಗಮದ ಶಾಖಾಧಿಕಾರಿ ಜಿ.ಶಶಿಧರ ಹೆಗ್ಡೆ ತಿಳಿಸಿದರು.
ಅವರು ಸೆ. ೧ರಂದು ಭಾರತೀಯಜೀವವಿಮಾ ನಿಗಮದ ಸುಳ್ಯ ಸೆಟಲೈಟ್ ಶಾಖೆಯಲ್ಲಿ೬೫ನೇ ವಿಮಾ ಸಪ್ತಾಹ ಸಮಾರಂಭದಅಧ್ಯಕ್ಷತೆ ವಹಿಸಿ ನಿಗಮದ ಪ್ರಗತಿಯನ್ನು ವಿವರಿಸಿದರು.
ವ್ಯವಹಾರಕ್ಕಾಗಿ ಶಾಖೆಗೆ ಇಂದು ಬಂದ ಮೊದಲ ಗ್ರಾಹಕ ಹೇಮಂತ್ ಮರ್ಕಂಜ ದೀಪ ಬೆಳಗಿಸಿ ಶುಭ ಹಾರೈಸಿದರು. ನಿಗಮದಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ನಾಯಕ್, ಗಣೇಶ್ ಎಂ.ಹೆಗಡೆ, ಆಡಳಿತಾಧಿಕಾರಿ ಬಾಬು ಎಸ್., ಉಪ ಆಡಳಿತಾಧಿಕಾರಿ ಲಿಂಗಪ್ಪಗೌಡ, ಉದ್ಯೋಗಿಗಳಾದ ರೋಶನ್, ಸಂದೀಪ್ ಹಾಗೂ ನಿಗಮದ ಪ್ರತಿನಿಧಿಗಳಾದ ಪೆರುಮಾಳ್ ಟಿ., ಅಣ್ಣಾ ಜಿ. ಗೌಡ, ಮಾಧವ ಬಿ.ಟಿ., ಸೋಮನಾಥ ಕೇರ್ಪಳ, ರಾಕೇಶ್ ಕುಂಟಿಕಾನ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.