ಮದರಸ ಬಗ್ಗೆ ಸಿ.ಟಿ ರವಿ ಹೇಳಿಕೆ ಖಂಡನೀಯ

Advt_Headding_Middle

ಮದರಸ ಇಸ್ಲಾಂ ಧರ್ಮದ  ಚೌಕಟ್ಟಿನೊಳಗೆ ವಿಧಿವಿಧಾನ ಕಲಿಸುವ, ಹಾಗೂ ಸಮಾಜದಲ್ಲಿ ಶಾಂತಿಯಿಂದ ಬಾಳುವ ಜೀವನವನ್ನು ಕಲಿಸುವ ಕೇಂದ್ರ: ಟಿ.ಎಂ. ಶಹೀದ್

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮದರಸದಲ್ಲಿ ತಾಲಿಬಾನಿಗಳನ್ನು, ಭಯೋತ್ಪಾಧಕರನ್ನು ಸೃಷ್ಟಿ ಮಾಡ್ತಾರೆ ಎಂದು ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ ತಕ್ಷಣವೇ ಅವರು ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್‌ರವರು ಆಗ್ರಹಿಸಿದರು.

 

ಇಂದು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಮದರಸಗಳು ಇಸ್ಲಾಂ ಧರ್ಮದ ದೀನಿನ ಚೌಕಟ್ಟಿನ ವಿಧಿವಿಧಾನ ಕಲಿಸುವ ಜೊತೆ ಜೊತೆಯಲ್ಲಿ ಸಮಾಜದಲ್ಲಿ ಶಾಂತಿಯುತ ಬಾಳ್ವೆ ನಡೆಸುವ ಹಾಗೂ ನಮ್ಮ ದೇಶದ ಮಣ್ಣನ್ನು ಎಲ್ಲಾದಕ್ಕೂ ಹೆಚ್ಚಾಗಿ ಪ್ರೀತಿಸುವ, ಗೌರವಿಸುವ, ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಕಲಿಕೆಯನ್ನು ನೀಡುವ ಕೇಂದ್ರವಾಗಿದೆ. ಮದರಸಗಳು ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯ ಇಲ್ಲದ ಸಿ ಟಿ ರವಿ ಅವರಿಂದ ಇಂತಹ ಬಾಲಿಶ ಹೇಳಿಕೆಯನ್ನು ಮಾತ್ರ ಪ್ರದೀಕ್ಷೆ ಮಾಡಬಹುದಷ್ಟೆ. ಅವರ ಆರೋಪವನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಪಕ್ಷದಲ್ಲಿ ಮುಸಲ್ಮಾನರ ಬಗ್ಗೆ ಅವಹೇಳನವಾಗಿ ಮಾತನಾಡಿದರೆ ದೊಡ್ಡ ದೊಡ್ಡ ಸ್ಥಾನಮಾನಗಳು ಸಿಗುತ್ತದೆ ಎಂಬ ವಿಶ್ವಾಸ ಇಟ್ಟು, ಈ ರೀತಿಯ ಸಮಾಜವನ್ನು ಒಡೆಯುವ ಮಾತುಗಳನ್ನು ಆಡುತ್ತಿದ್ದಾರೆ” ಎಂದು ಹೇಳಿದರು.

ಅದು ಅಲ್ಲದೆ ಸಿ ಟಿ ರವಿಯವರಿಗೆ ನಾನು ಸವಾಲನ್ನು ಹಾಕುತ್ತಿದ್ದು, ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇಂತಹ ಸಂದರ್ಭಗಳಲ್ಲಿ ರಾಜ್ಯದಾದ್ಯಂತ ಇರುವ ಮದರಸ ಮತ್ತು ಮಸೀದಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದಂತೆ, ಎಷ್ಟು ದೇವಸ್ಥಾನಗಳಲ್ಲಿ ಭಜನಾ ಮಂದಿರಗಳಲ್ಲಿ ಆರೆಸ್ಸೆಸ್ಸಿನವರು ಹಾಗೂ ಸಂಘಪರಿವಾರದವರು ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಕೋಮು ಭಾವನೆ ಸೃಷ್ಟಿಸುವವರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಇದರಿಂದ ಅವರು ಪ್ರಚೋದಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಅದರದ್ದೇ ಆದ ಸಂವೀಧಾನದ ಮೂಲಕ ನಾವಿಲ್ಲಿ ಜೀವನ ಮಾಡುತ್ತಿದ್ದೇವೆ. ನಮ್ಮ ಮದರಸಗಳಿಗೆ ಸಿ.ಟಿ ರವಿ ಅವರನ್ನು ಕರೆದುಕೊಂಡು ಹೋಗುತ್ತೇವೆ ಎಲ್ಲಾದರೂ ತಾಲಿಬಾನಿಗಳನ್ನು, ಭಯೋತ್ಪಾಧಕರನ್ನು ಸೃಷ್ಟಿ ಮಾಡುತ್ತಿರುವುದು ಅವರು ತೋರಿಸಲಿ ಎಂದು ಹೇಳಿದರು.
ಸಿ.ಟಿ ರವಿಯವರು ಇದೇ ರೀತಿಯ ಬಾಲಿಶ ಹೇಳಿಕೆಯನ್ನು ಇದಕ್ಕೂ ಮುನ್ನ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
ನಿಜವಾಗಿಯೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಕ್ಕಾಗಿ ಮಡಿದವರು ಕಾಂಗ್ರೆಸ್ಸಿನಲ್ಲಿ ಮತ್ತು ಮುಸಲ್ಮಾನರಲ್ಲಿ ಇದ್ದಾರೆ ವಿನಹ, ಸಂಘಪರಿವಾರದವರು ಅಥವಾ ಬಿಜೆಪಿಯವರಲ್ಲಿ ಯಾರು ಇಲ್ಲ ಎಂದು ಹೇಳಿದರು. ಕೇವಲ ಜಾತಿ ಜಾತಿ ಎಂದು ಸಮಾಜವನ್ನು ಒಡೆದು ಬಿಜೆಪಿ ಪಕ್ಷವನ್ನು ಅಭಿವೃದ್ಧಿಗೊಳಿಸುತ್ತಾರೆ ವಿನಹ ದೇಶದ ಅಭಿವೃದ್ಧಿಯ ಬಗ್ಗೆ ಇವರಿಗೆ ಯಾವುದೇ ಚಿಂತೆ ಇಲ್ಲ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಹಾಗೂ ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು ದೇಶದ ಜನತೆ ಪಡುತ್ತಿರುವ ಕಷ್ಟ ಇವರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಸದಾನಂದ ಮಾವಂಜಿ ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಎ ದರ್ಜೆ ಯಲ್ಲಿರುವ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಬಿ ಮತ್ತು ಸಿ ದರ್ಜೆ ಯಲ್ಲಿರುವ ದೇವಸ್ಥಾನಗಳಿಗೆ ಇದನ್ನು ಹೋಲಿಕೆ ಮಾಡಿ ಭಕ್ತರಿಗೆ ಪೂಜೆಗೆ ಅವಕಾಶ ಮಾಡಿಕೊಡದೆ ಇರುವುದು ತಪ್ಪು ನಿರ್ಧಾರವಾಗಿದೆ ಎಂದು ಅವರು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ ಮಾತನಾಡಿ, ಸರ್ಕಾರವು ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳ ರಕ್ಷಣೆಯನ್ನು ಮಾಡಬೇಕಾಗಿದೆ. ಅದಕ್ಕಾಗಿ ವಿಶಿಷ್ಟ ಅನುದಾನಗಳನ್ನು ಇರಿಸಿ ಗೋರಕ್ಷಣೆಗೆ ಮುಂದಾಗಬೇಕಾಗಿದೆ ಹೊರತು ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಶರೀಫ್ ಕಂಠಿ, ಶಾಫಿ ಕುತ್ತಮಟ್ಟೆ, ರಿಯಾಜ್ ಗೂನಡ್ಕ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.