ಬೊಳುಬೈಲು : ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕೋಮಲರವರಿಗೆ ಸನ್ಮಾನ ಸಮಾರಂಭ

Advt_Headding_Middle

 

ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಮೇ. 31 ರಂದು ಸೇವೆಯಿಂದ ವಯೋ ನಿವೃತ್ತಿಗೊಂಡ ಶ್ರೀಮತಿ ಕೋಮಲರವರಿಗೆ ಸನ್ಮಾನ ಸಮಾರಂಭ ಅ. 26 ರಂದು ಶಾಲೆಯಲ್ಲಿ ನಡೆಯಿತು.

ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ. ಹಾಗೂ ಊರಿನ ಸಂಘ ಸಂಸ್ಥೆಗಳ, ಊರಿನ ವಿದ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾದ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಎಸ್.ಪಿ. ರವರು ಶಾಲು ಹೊದಿಸಿ ಸನ್ಮಾನಿಸಿದರು.
ಶಿಕ್ಷಕರು, ಎಸ್.ಡಿ.ಎಂ.ಸಿ., ಪೋಷಕರು, ಊರಿನ ಸಂಘ ಸಂಸ್ಥೆಗಳು, ವಿದ್ಯಾಭಿಮಾನಿಗಳ ವತಿಯಿಂದ ಉಂಗುರ ನೀಡಿ ಗೌರವಿಸಲಾಯಿತು .

ವೇದಿಕೆಯಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ.ಬಾಬು, ಪಂಚಾಯತ್ ಸದಸ್ಯರುಗಳಾದ ಮುಜೀಬ್ , ಗೀತಾ ಗೋಪಿನಾಥ್, ಗೀತಾ ಚಂದ್ರಹಾಸ್ ಸೋಣಂಗೇರಿ, ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಾಣಿ, ಬೊಳುಬೈಲು ನವಚೇತನ ಯುವಕ ಮಂಡಲದ ಅಧ್ಯಕ್ಷ ಸುಧೀರ್ ನೆಕ್ರಾಜೆ, ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕರುಣಾಕರ ರೈ, ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕಿ ಲತಾ ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬೇಬಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಮ್ಮ ಪ್ರಾಸ್ತಾವಿಕ ಮತ್ತು ಸನ್ಮಾನ ಪತ್ರ ವಾಚಿಸಿದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಜಯಂತ ವಂದಿಸಿ, ನವಚೇತನ ಯುವಕ ಮಂಡಲದ ಪ್ರಸಾದ್ ಕಾಟೂರು ನಿರೂಪಿಸಿದರು. ಇದೇ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕೋಮಲ ರವರು ಶಾಲೆಗೆ ಗೋದ್ರೆಜ್‌ನ್ನು ಕೊಡುಗೆಯಾಗಿ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.