ಸುಬ್ರಹ್ಮಣ್ಯದಲ್ಲಿ 17 ಲಕ್ಷದ ಚಿನ್ನಾಭರಣ ಕದ್ದ ವ್ಯಕ್ತಿಗಳಲ್ಲಿ ಒಬ್ಬರ ಬಂಧನ : ಚಿನ್ನಾಭರಣ ವಶ

Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾತ್ರಾರ್ಥಿಗಳಾಗಿ ತುಮಕೂರಿನಿಂದ ಬಂದಿದ್ದ ಕುಟುಂಬವೊಂದರ ಹದಿನೇಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈಯ್ಯಲ್ಪಟ್ಟಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಕಳ್ಳರಿಂದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಗ್ರಾಮದ ಬೈರಲಿಂಗೇನಹಳ್ಳಿಯ ಗಂಗಮ್ಮ ಮತ್ತು ಮನೆಯವರು ಜುಲೈ 20 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು.
ಜುಲೈ 21 ರಂದು ಅವರು ಸುಬ್ರಹ್ಮಣ್ಯದ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಅವರ ಜತೆಗಿದ್ದ ಬ್ಯಾಗನ್ನು ಕಳ್ಳರು ಕದ್ದೊಯ್ದಿದ್ದರು. ಆ ಬ್ಯಾಗಲ್ಲಿ ಹದಿನೇಳು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದವು.
ಕಳೆದ ವಾರ ಬೆಂಗಳೂರು ಯಶವಂತಪುರ ಪೋಲೀಸರು ಮಹಿಳೆಯೊಬ್ಬಾಕೆಯನ್ನು
ಬಂಧಿಸಿದ್ದು ಆಕೆ ಸುಬ್ರಹ್ಮಣ್ಯದಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಕದ್ದ ತಂಡದವಳೆಂದು ಗೊತ್ತಾಗಿದೆ.
ಬೆಂಗಳೂರಿನ ಮಾಗಡಿ ಹುಲಿಯೂರುದುರ್ಗ ಅರಕನಹಳ್ಳಿಯ 38 ವರ್ಷದ ಮಮತಾ ಎಂಬಾಕೆ ಪೊಲೀಸರ ಅತಿಥಿಯಾಗಿದ್ದು ಆಕೆ ಅಡವಿರಿಸಿದ್ದ ಹದಿನೇಳು ಲಕ್ಷ ರೂ. ಮೊತ್ತದ ಚಿನ್ನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಕೆ ನ್ಯಾಯಾಂಗ ಕಸ್ಟಡಿಯಲ್ಲಿ ಇದ್ದಳು.
ಆ ಮಹಿಳೆಯನ್ನು ಸುಳ್ಯ ಪೊಲೀಸರು ಸುಳ್ಯ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಹೋಗಿ ತಮ್ಮ ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
 ಚಿನ್ನಾಭರಣದ ಬ್ಯಾಗನ್ನು ಕಳವು ಮಾಡಿದ್ದ ಪುರುಷ ಸದಸ್ಯರು ಪೋಲೀಸರಿಗೆ ಸಿಕ್ಕಿಲ್ಲವೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.