ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ತಿಂಗಳ ಆನ್ ಲೈನ್ ಹಿಂದಿ ಕಲಿಕಾ ಕಾರ್ಯಕ್ರಮ

Advt_Headding_Middle

ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ IQAC ಅಡಿಯಲ್ಲಿ 2021 ರ ಹಿಂದಿ ದಿನಾಚರರಣೆಯನ್ನು ಆಚರಿಸುವ ಉದ್ದೇಶದಿಂದ ಸೆ. ೦1 ರಿಂದ ಸೆ. 30 ರವರೆಗೆ ಒಂದು ತಿಂಗಳ ಆನ್ ಲೈನ್ ಹಿಂದಿ ಕಲಿಕಾ ಕಾರ್ಯಕ್ರಮವನ್ನು ಸೆ. ೦1 ರಂದು ಆರಂಭಿಸಲಾಯಿತು. ಹಿಂದಿ ಕಲಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಯುತ ಪೂಜಾರಿ ಕೆ. ನೆರವೇರಿಸಿ ಮಾತನಾಡುತ್ತಾ, ಹಿಂದಿ ದೇಶದ ಏಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಲ್ಲದೇ, ಉದ್ಯೋಗ ದ ಭರವಸೆಯನ್ನು ನೀಡುವ ಭಾಷೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರು ಆಗಿರುವ ರಾಮಕೃಷ್ಣ ಕೆ. ಎಸ್. ರವರು ಹಿಂದಿ ದಿನದ ಮಹತ್ವವನ್ನು ತಿಳಿಸುತ್ತಾ, ಆನ್‌ಲೈನ್ ಮುಖಾಂತರ ಹಿಂದಿ ತರಗತಿ ನಡೆಯುವ ವಿಧಿ ವಿಧಾನಗಳ ಬಗ್ಗೆ, ಗೂಗಲ್ ಮೀಟ್‌ನಲ್ಲಿ ತರಗತಿ ನಡೆಸುವ ರೀತಿಯ ಬಗ್ಗೆ, ಮೌಲ್ಯಮಾಪನ ಹಾಗೂ ಪ್ರಮಾಣ ಪತ್ರ ನೀಡುವ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಶುಭಾಶಯ ಕೋರುತ್ತಾ ಮಾತನಾಡಿದ ಕಾಲೇಜಿನ IQAC ಸಂಚಾಲಕಿ ಡಾ. ಜಯಶ್ರೀ ಕೆ. ರವರು ಹಿಂದಿ ವಿಭಾಗದ ವತಿಯಿಂದ ಪ್ರಾರಂಭಿಸಿರುವ ಹಿಂದಿ ಕಲಿಕಾ ಕಾರ್ಯಕ್ರಮವಿದ್ಯಾರ್ಥಿಗಳ ಭಾಷಾ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಮೂವತ್ತು ಗಂಟೆಗಳ ತರಗತಿಗಳು ನಡೆಯುವುದರಿಂದ ಇದೊಂದು Certificate Courseಆಗಿದೆ ಎಂದರು. ರಾಮಕೃಷ್ಣ ಕೆ. ಎಸ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಹಿಂದಿ ಕಲಿಕಾ ಕಾರ್ಯಕ್ರಮಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪದವಿಯ ಕನ್ನಡ ಹಾಗೂ ಹಿಂದಿಕಲಿಯುತ್ತಿರುವ 7೦ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.