ಎನ್. ಎಸ್. ದೇವಿಪ್ರಸಾದ್ ಸಂಪಾಜೆ ಯವರಿಗೆ ಬಂಟಮಲೆ ಅಕಾಡೆಮಿಯ ಅಮರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಪ್ರಶಸ್ತಿ ಪ್ರದಾನ

Advt_Headding_Middle

1837 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಕೆದಂಬಾಡಿ ರಾಮಯ್ಯಗೌಡರ ಹೆಸರಿನಲ್ಲಿ ಬಂಟಮಲೆ ಅಕಾಡೆಮಿಯು ಕೊಡಮಾಡಿದ ಪ್ರಶಸ್ತಿಯನ್ನು ಎನ್ ಎಸ್ ದೇವಿಪ್ರಸಾದ್ ಸಂಪಾಜೆ ಅವರಿಗೆ ಇಂದು ಪ್ರದಾನಿಸಲಾಯಿತು.
ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡರು ಅಮರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಪ್ರಶಸ್ತಿಯನ್ನು ಎನ್.ಎಸ್.ದೇವಿಪ್ರಸಾದರಿಗೆ ನೀಡಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ವೆಂಕಟರಮಣ ಸೊಸೈಟಿಯ ಅಧ್ಯಕ್ಷರಾದ ಪಿ. ಸಿ. ಜಯರಾಮರು ವಹಿಸಿದ್ದರು.
ಸೋಮವಾರಪೇಟೆಯ ಎಂ.ಟಿ. ವಿಜಯೇಂದ್ರ ಮೂಡಗದ್ದೆ, ಕುಶಾಲನಗರದ ವಿ. ಪಿ. ಶಶಿಧರ್, ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧ್ಯಕ್ಷ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಮುಖ್ಯಅತಿಥಿಗಳಾಗಿದ್ದರು. ಬಂಟಮಲೆ ಅಕಾಡೆಮಿಯ ಸಂಚಾಲಕರಾದ ಎ. ಕೆ. ಹಿಮಕರ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದರು.

ಅಕಾಡೆಮಿಯ ಅಧ್ಯಕ್ಷ ಕೆ.ಆರ್ .ತೇಜಕುಮಾರ್ ಬಡ್ಡಡ್ಕ ಅಕಾಡೆಮಿಯ ಕುರಿತು ಮತ್ತು ದೇವಿಪ್ರಸಾದರ ಕುರಿತು ಮಾತನಾಡಿದರು. ಅಭಿನಂದನಾ ಭಾಷಣ ಮಾಡಿದ ನ್ಯಾಯವಾದಿ ಹಾಗೂ ಸಾಹಿತಿ ಕೆ. ಆರ್. ವಿದ್ಯಾಧರರು 1837 ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಮತ್ತು ಎನ್. ಎಸ್. ದೇವಿಪ್ರಸಾದ್ ಸಂಪಾಜೆ ಅವರು ಕೊಡಗಿನಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿದಂಥ ಹೋರಾಟದ ವಿವರಗಳನ್ನು ನೀಡಿದರು.

ಯತೀಶ ಕೆದಂಬಾಡಿ ವಂದಿಸಿದರು. ನಾರಾಯಣ ಶೇಡಿಕಜೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.