ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರ ಮಾಡುವ ಕುರಿತು ವರ್ತಕರ ಸಂಘದಿಂದ ನಗರ ಪಂಚಾಯತ್ ಮನವಿ

Advt_Headding_Middle

ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರ ಮಾಡುವ ಕುರಿತು ವರ್ತಕರ ಸಂಘದಿಂದ ನಗರ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು.
ಸುಳ್ಯ ನಗರದಲ್ಲಿ ಇತ್ತೀಚಿನ ಕೆಲವು ಸಮಯಗಳಿಂದ ಸುಳ್ಯ ನಗರದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ರಸ್ತೆ ಬದಿಯಲ್ಲಿ ತರಕಾರಿ ಹಣ್ಣು ಹಂಪಲುಗಳು, ಇತ್ಯಾದಿ ವ್ಯವಹಾರಗಳು ಅಧಿಕವಾಗಿದ್ದು ಇದರಿಂದ ನಗರ ಪಂಚಾಯತ್ ವ್ಯಾಪಾರ ಪರವಾನಿಗೆ ಪಡೆದು ಅಂಗಡಿ ಬಾಡಿಗೆ ಕೊಟ್ಟು ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಬಹಳ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಯವರ ನೇತೃತ್ವದಲ್ಲಿ ಸುಳ್ಯ ತರಕಾರಿ ವರ್ತಕರು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಳ್ಯ ತರಕಾರಿ ವರ್ತಕರರಾದ ಎನ್.ಎ ಅಬ್ದುಲ್ಲಾ, ಹಾಜಿ ಬಿ.ಎ.ಮಹಮ್ಮದ್, ಶಿಹಾಬ್ ಜನಪ್ರಿಯ, ಶಶಿನಾಯರ್, ಇಸಾಕ್, ಶರೀಫ್, ರಫೀಕ್, ಗಫಾರ್, ಸತ್ತಾರ್, ಮೊದಲಾದವರು ಉಪಸ್ಥಿತರಿದ್ದರು.
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತಮಾಡಲು ನೀವು ಕೈ ಜೊಡಿಸಬೇಕು ಎಂದು ನ.ಪಂ ಅಧ್ಯಕ್ಷರು ಮತ್ತು ಅರೋಗ್ಯ ನೀರಿಕ್ಷ ಲಿಂಗರಾಜು ಸಲಹೆ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.