Breaking News

ನಿಂತಿಕಲ್ಲು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ನೇರ ಸಂದರ್ಶನ

Advt_Headding_Middle

 

ನಿಂತಿಕಲ್ಲು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ನೇರ ಸಂದರ್ಶನ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಕೋಲಾರದ ಹೋಂಡಾ ಕಂಪೆನಿಯ ದ್ವಿಚಕ್ರವಾಹನ ಉತ್ಪಾದನಾ ಕೇಂದ್ರದಲ್ಲಿ, ನೂತನ ಘಟಕ ಪ್ರಾರಂಭಗೊಂಡಿದ್ದು ಅದಕ್ಕಾಗಿ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನೇರ ಉದ್ಯೋಗ ನೇಮಕಾತಿ ಸಂದರ್ಶನ ನಡೆಯಿತು.

ಬೆಳಗ್ಗೆ ೧೦ರಿಂದ ಸಂಜೆಯ ವರೆಗೆ ನೇಮಕಾತಿ ಪ್ರಕ್ರಿಯೆಯು ನಡೆದಿದ್ದು ಶ್ರೀ ಮಹಾಲಿಂಗೇಶ್ವರ ಐಟಿಐ ಪುತ್ತೂರು, ಕೆವಿಜಿ ಐಟಿಐ ಸುಳ್ಯ, ವಿಟ್ಲ ಸುಪ್ರಜಿತ್ ಐಟಿಐ ಹಾಗೂ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶೇ. ೯೦ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಭರವಸೆ ಇದೆ. ಕ್ರಿಯೇಟಿವ್ ಇಂಜಿನಿಯರ್ಸ್ ಸಂಸ್ಥೆಯ ಶ್ರೀ ಶ್ರೀನಿವಾಸ್ ಮತ್ತು ಅವರ ತಂಡ ನೇಮಕಾತಿ ಪ್ರಕ್ರಿಯೆ ನಡೆಸಿದ್ದು ಒಂದು ವಾರದ ಒಳಗೆ ಫಲಿತಾಂಶ ನೀಡಲಾಗುವುದು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಇಂಜಿನಿಯರ್ಸ್‌ನ ಶ್ರೀನಿವಾಸ, ಅನಿಲ್ ಹಾಗೂ ಮಹೇಶ್, ಸಂಸ್ಥೆಯ ಪ್ರಾಚಾರ್ಯರಾದ ಗುರುಪ್ರಸಾದ್ ತೋಟ, ನೇಮಕಾತಿ ಅಧಿಕಾರಿ ಶೇಖರ್ ಗೌಡ ಕೆ.ಜಿ ಹಾಗೂ ಸಂಸ್ಥೆಯ ತರಬೇತಿ ಅಧಿಕಾರಿ ಗೋವಿಂದ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ್ ಅವರು ಹೋಂಡಾ ಕಂಪನಿಯು ಉದ್ಯೋಗಿಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಪೂರ್ಣ ವಿವರಗಳನ್ನು ನೀಡಿದರು.


ಸಂಸ್ಥೆಯಲ್ಲಿ ಈಗಾಗಲೇ ೨೦೨೧ ನೇ ಸಾಲಿನ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು ಇನ್ನು ಕೆಲವೇ ಸೀಟುಗಳು ಬಾಕಿ ಇರುತ್ತವೆ. ಆಡಳಿತ ಮಂಡಳಿಯ ವತಿಯಿಂದ ತೀರಾ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಕೆಲವೋಂದು ವಿಶೇಷ ಅನುಕಂಪದ ಮೂಲಕ ಆಯ್ದ ವೃತ್ತಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.