ದುಗಲಡ್ಕದಲ್ಲಿ ವ್ಯಾಕ್ಸಿನ್ ಡಬ್ಬಲ್ ಡೋಸ್ ಪ್ರಕರಣ -ಆರೋಗ್ಯದಿಂದಿರುವ ಯುವಕ, ಮನೆಯವರ ಆತಂಕ ದೂರ

Advt_Headding_Middle

 

ದುಗಲಡ್ಕದಲ್ಲಿ ನಡೆದ ಕೊರೋನ ವ್ಯಾಕ್ಸಿನ್ ಅಭಿಯಾನದಲ್ಲಿ ಅಚಾತುರ್ಯದಿಂದ ಎರಡು ಡೋಸ್ ಲಸಿಕೆ ಪಡೆದ ಯುವಕನ ಆರೋಗ್ಯ ಬಗ್ಗೆ ಜನತೆ ಆತಂಕಗೊಂಡಿದ್ದು, ಯುವಕ ಆರೋಗ್ಯದಿಂದಿದ್ದು,ಮನೆಯವರೂ ನಿರಾಳರಾಗಿದ್ದಾರೆ.
ದುಗಲಡ್ಕ ಪ್ರೌಢಶಾಲೆಯಲ್ಲಿ ನಡೆದ ಕೊರೋನ ಲಸಿಕಾ ಶಿಬಿರ ಆಯೋಜಿಸಲಾಗಿತ್ತು. ಆಗ ಲಸಿಕೆಗೆ ಬಂದ ಕೂಟೇಲು ಸಿ.ಆರ್.ಸಿ ಯ ಬಾಲಸುಬ್ರಹ್ಮಣ್ಯಂ ರವರ ಪುತ್ರ ಕೆ.ಬಿ.ಅರುಣ್ ರವರು ಮೊದಲ ಡೋಸ್ ಪಡೆದು ಮಾತ್ರೆ ಪಡೆಯಲು ಕುಳಿತಲ್ಲಿಗೆ ಆರೋಗ್ಯ ಸಹಾಯಕಿ ಮತ್ತೊಮ್ಮೆ ಚುಚ್ಚಿದರು. ಇದರಿಂದ ಆತಂಕಗೊಂಡ ಮನೆಯವರು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಸಹಾಯಕಿಯ ಬೇಜವಾಬ್ದಾರಿ ಮತ್ತು ಯುವಕ ಇನ್ನೊಂದು ಡೋಸ್ ಕೊಡಲು ಬಿಟ್ಟದ್ದು ಯಾಕೆ ಎನ್ನುವ ಬಗ್ಗೆ ಜನರು ಮಾತನಾಡಿ ಕೊಂಡರು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಧೈರ್ಯ ಹೇಳಿದ ಮೇಲೆ ಮನೆಯವರು ಸಮಾಧಾನಗೊಂಡರು. ಆದರೆ ತೀರಾ ಅಪರೂಪದ ಪ್ರಕರಣ ಇದಾಗಿದುದರಿಂದ ಎರಡು ಡೋಸ್ ತೆಗೆದುಕೊಂಡರೆ ಏನಾಗಬಹುದೆಂದು ಜನರು ಆತಂಕಪಟ್ಟರು. ಸ್ವತಃ ಕರೆಮಾಡಿ ವಿಚಾರಿಸತೊಡಗಿದರು. ಯುವಕನಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗದೇ ಇರುವುದರಿಂದ ಎಲ್ಲರೂ ಸಮಾಧಾನಗೊಂಡಿದ್ದಾರೆ.ಯುವಕನೇ ಸುದ್ದಿ ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.