ಸಮುದ್ರದ ನೀರನ್ನು ಫಿಲ್ಟರ್ ಮೂಲಕ ಸಿಹಿ ನೀರಾಗಿ ಪರಿವರ್ತಿಸುವ ಘಟಕದ ಪ್ರಾತ್ಯಕ್ಷಿಕೆ ಆಳ ಸಮುದ್ರದ ಮೀನುಗಾರಿಕೆಗೆ ಪ್ರಯೋಜನವಾಗಲಿರುವ ಹೊಸ ಯೋಜನೆ ಸಚಿವ ಎಸ್. ಅಂಗಾರರಿಂದ ಮೆಚ್ಚುಗೆ

Advt_Headding_Middle

ಆಳಸಮುದ್ರದ ಮೀನುಗಾರಿಕೆಗೆ ತೆರಳುವ ಮೀನುಗಾರರ ಹಿತದೃಷ್ಟಿಯಿಂದ ಸಾಗರದ ನೀರನ್ನು ಫಿಲ್ಟರ್  ಮೂಲಕ ಸಿಹಿನೀರಾಗಿ ಪರಿವರ್ತಿಸುವ ಘಟಕದ ಪ್ರಾತ್ಯಕ್ಷಿಕೆಯು ಅರಬ್ಬಿ ಸಮುದ್ರವನ್ನು ಪ್ರವೇಶಿಸುವ ಮಂಗಳೂರಿನ ಅಳಿವೆಬಾಗಿಲು ಬಳಿ ಬೋಟ್ ವೊಂದರಲ್ಲಿ ಸೆ.3ರಂದು ನಡೆಯಿತು.

ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ನೂತನ ತಂತ್ರಜ್ಞಾನವೊಂದು ಮಂಗಳೂರಿನಲ್ಲಿ ಬಳಕೆಯಾಗಿದೆ. ದೂರದ ಆಸ್ಟ್ರೇಲಿಯಾ ದೇಶದಲ್ಲಿನ ತಂತ್ರಜ್ಞಾನವನ್ನು ಭಾರತದಲ್ಲಿ ಅದರಲ್ಲೂ ಮಂಗಳೂರಿನ ಮೀನುಗಾರಿಕಾ ಬೋಟ್ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಈ ಯಂತ್ರದ ಮೂಲಕ ದಿನವೊಂದಕ್ಕೆ ಎರಡು ಸಾವಿರ ಲೀಟರ್  ಉಪ್ಪು
ನೀರನ್ನು ಸಿಹಿ ನೀರಾಗಿ ಮಾರ್ಪಾಡು ಮಾಡಬಹುದಾಗಿದೆ.

ಆರೋಗ್ಯಕ್ಕೆ ಯಾವುದೇ ಹಾನಿ ಮಾಡದ ಈ ಫಿಲ್ಟರ್  ನೀರನ್ನು, ಸಮುದ್ರದಲ್ಲಿ ಬೋಟ್ ಮೂಲಕ ತೆರಳಿದ ಮೀನುಗಾರಿಕಾ ಸಚಿವ ಎಸ.ಅಂಗಾರ ಕುಡಿಯುವ ಮೂಲಕ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಿದರಲ್ಲದೆ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದಿಂದ ಸಬ್ಸಿಡಿ
ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಶೇ.೫೦ರಷ್ಟು ಸಬ್ಸಿಡಿಯನ್ನು ಇದರ ಪ್ರಾತ್ಯಕ್ಷಿಕೆ ಯಂತ್ರಕ್ಕೆ ಘೋಷಣೆ ಮಾಡಿದೆ. ಈ ತಂತ್ರeನ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಬಹು ಉಪಯೋಗಕಾರಿಯಾಗಿದೆ. ಆಳ ಸಮುದ್ರ ಮೀನುಗಾರಿಕೆ ಎಂಬುವುದು ವಾರಕ್ಕಿಂತ ಹೆಚ್ಚು ದಿನ ಸಮುದ್ರದ ಮಧ್ಯದಲ್ಲಿದ್ದುಕೊಂಡೇ ನಡೆಸುವ ಮೀನುಗಾರಿಕೆ ಆಗಿರುವುದರಿಂದ ಈ ರೀತಿಯ ಮೀನುಗಾರಿಕೆಗೆ ಹೋಗುವಾಗ ಮೀನುಗಾರರು ಕುಡಿಯುವುದಕ್ಕೆ ನಿತ್ಯದ ಬಳಕೆಗೆ ಸಿಹಿನೀರನ್ನು ಬೋಟ್ನಲ್ಲಿ ಸಂಗ್ರಹಿಸಿ ಕೊಂಡೊಯ್ಯಲಾಗುತ್ತದೆ.
ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನು ಬೋಟ್ನಲ್ಲಿಯೇ ಫಿಲ್ಟರ್ ಮಾಡಿ ಸಿಹಿನೀರನ್ನು ಪಡೆಯಬಹುದಾಗಿದೆ.
10ಕ್ಕೂ ಹೆಚ್ಚು ದಿನಗಳ ಕಾಲ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಕುಡಿಯುವ ನೀರನ್ನೂ ದಡದಿಂದಲೇ ತೆಗದುಕೊಂಡು ಹೋಗಬೇಕು. ವಾರಕ್ಕಿಂತ ಹೆಚ್ಚು ದಿನ ಆಳ ಸಮುದ್ರದಲ್ಲಿ ಬೋಟ್ ಲಂಗರು ಹಾಕಿದರೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೀಟರ್  ನೀರು ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ದಡದಿಂದಲೇ ಸಿಹಿ ನೀರನ್ನು ಬೋಟ್ನಲ್ಲಿ ಹೇರಿ ಮೀನುಗಾರರು ಆಳ ಸಮುದ್ರಕ್ಕೆ ತೆರಳುತ್ತಿದ್ದರು.ಆದರೆ ಇನ್ಮುಂದೆ ಅಂತಹ ಯಾವುದೇ ಸಮಸ್ಯೆ ಮೀನುಗಾರರಿಗೆ ಬರಲ್ಲ. ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು.
ಈ ತಂತ್ರಜ್ಞಾನ ಅಮೆರಿಕ, ಯುರೋಪ್ನಲ್ಲಿ ಈಗಾಗಲೇ ಬಳಕೆಯಲ್ಲಿದ್ದು, ಆಸ್ಟ್ರೇಲಿಯಾ ಮೂಲದ ರೆಯಾನ್ಸ ಎಂಬ ಕಂಪೆನಿ ಈ ಕಿಟ್ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಉಪ್ಪು ನೀರನ್ನು ಸಂಗ್ರಹಿಸಿ, ಪೈಪ್ನಿಂದ ಬಂದ ಉಪ್ಪು ನೀರು ಶುದ್ಧೀಕರಿಸುವ ಯಂತ್ರದ ಒಳಗೆ ಪಂಪ್ ಮಾಡಿ, ಬಳಿಕ ಫಿಲ್ಟರ್  ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತದೆ. ಈ ರೀತಿ ಗಂಟೆಗೆ ೧೬೮ ಲೀರ್ಟ ನೀರು ಫಿಲ್ಟರ್  ಆಗಲಿದ್ದು, ದಿನವೊಂದಕ್ಕೆ ೨೦೦೦ ಲೀ. ನೀರು ಫಿಲ್ಟರ್  ಆಗುತ್ತದೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತದೆ ಎಂಬ ಆತಂಕವು ಇರುವುದಿಲ್ಲ.ಈ ಯಂತ್ರಕ್ಕೆ ನಾಲ್ಕುಲಕ್ಷದ ಅರವತ್ತು ಸಾವಿರ ರೂ. ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ 50 ಶೇಕಡಾ ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.