Breaking News

ಎಸ್.ಎಂ.ಎ ಸುಳ್ಯ ವತಿಯಿಂದ ಚಿಕಿತ್ಸಾ ಧನ ಸಹಾಯ ಹಸ್ತಾಂತರ ಅನುಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ

Advt_Headding_Middle

ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಎಸ್.ಎಂ.ಎ ಸುಳ್ಯ ರೀಜನಲ್ ಇದರ ಪ್ರಸಕ್ತ ಸಾಲಿನ ಪ್ರಥಮ ಮಾಸಿಕ ಸಭೆ ಶನಿವಾರದಂದು ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಯವರ ಅಧ್ಯಕ್ಷತೆಯಲ್ಲಿ ಗಾಂಧಿನಗರದಲ್ಲಿ ನಡೆಯಿತು.
ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷರಾದ ಮುಹಮ್ಮದ್ ಸಖಾಫಿ ಮೊಗರ್ಪಣೆ ಉದ್ಘಾಟಿಸಿದರು. ಎಸ್ ಎಂ ಎ ಬೆಳ್ಳಾರೆ ಝೋನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಅಹ್ಸನಿ ಮಾಡನ್ನೂರು ಶುಭ ಹಾರೈಸಿದರು. ಈ ಸಂದರ್ಭ ಸಮಿತಿ ಹಿರಿಯ ಸದಸ್ಯರಾಗಿ ನಮ್ಮನ್ನಗಲಿದ ಮೊಯಿದು ಹಾಜಿ ಶಾಂತಿನಗರ ಅವರನ್ನು ಸ್ಮರಿಸಿ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು.ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿರುವ ಎಲಿಮಲೆ ಮುದರ್ರ್‍ಇಸ್ ತೌಸೀಫ್ ಸಅದಿ ಯವರ ಚಿಕಿತ್ಸೆಗೆ ಧನ ಸಹಾಯ ಹಸ್ತಾಂತರಿಸಲಾಯಿತು.

ಸುಳ್ಯ ರೇಂಜ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಸಖಾಫಿ ಮೊಗರ್ಪಣೆ ಯವರನ್ನು ಸನ್ಮಾನಿಸಿ,ಕಳೆದ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಗ್ರೇಡ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಾರಣಕರ್ತ ಅಧ್ಯಾಪಕರುಗಳಾದ ನಿಝಾರ್ ಸಖಾಫಿ ಮುರೂರು, ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಅವರನ್ನು ಗೌರವಿಸಲಾಯಿತು. ಪ್ರಸಕ್ತ ಸನ್ನಿವೇಶದ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಸಮಾಲೋಚನೆ ನಡೆಸಲಾಯಿತು.ಎಸ್ ಎಂ ಎ ಸಮಿತಿಯ ಪ್ರಮುಖರಾದ ಹಾಜಿ ಆದಂ ಹಾಜಿ ಕಮ್ಮಾಡಿ, ಹಾಜಿ ಮುಸ್ತಫ ಕೆ ಎಂ,ಲತೀಫ್ ಹರ್ಲಡ್ಕ, ಪಿ ಎನ್ ಅಬೂಬಕ್ಕರ್ ನಂಬರ್ ಮೂಲೆ, ಅಬ್ದುಲ್ ಖಾದರ್ ಹಾಜಿ ಪಾರೆ, ಹಸೈನಾರ್ ಸುದ್ದಿ ಜಯನಗರ,ಶರೀಫ್ ಸುದ್ದಿ ಜಟ್ಟಿಪ್ಪಳ್ಳ, ಹಸೈನಾರ್ ಗುತ್ತಿಗಾರು,ಎಸ್ ಪಿ ಅಬೂಬಕ್ಕರ್ ಮುಂತಾದವರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ,ವಂದಿಸಿದರು.ಕಾರ್ಯದರ್ಶಿ ಝುಭೈರ್ ಹಿಮಮಿ ಅನ್ಸಾರಿಯಾ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.