Breaking News

ಸೆ.8ರಂದು “ಮೊಂತಿ ಫೆಸ್ತ್ ತೆನೆಹಬ್ಬ” ರೇಷ್ಮಾ ವೀರ ಕ್ರಾಸ್ತ ತಡಗಜೆ, ಬೆಳ್ಳಾರೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿವಿಧತೆಯಲ್ಲಿ ಏಕತೆಯನ್ನು ಕಂಡ ಪುಣ್ಯ ಭೂಮಿ ನಮ್ಮ ಭರತ ಭುವಿ ವೈವಿಧ್ಯಮಯವಾದ ಧಾರ್ಮಿಕ ,ಸಾಂಸ್ಕೃತಿಕ, ಭಾಷಿಕ ಮಿಲನವನ್ನು ನಾವಿಲ್ಲಿ ಕಾಣಬಹುದು ಈ ಮಣ್ಣಿನ ಸೊಗಡಿನಲ್ಲಿ ಏಕತೆಯ ಭಾವ ಅಡಗಿದೆ. ಸಾಂಸ್ಕೃತಿಕ ಮಿಲನ ಈ ನೆಲದ ಚೇತನಾ ಭಾವದಲ್ಲಿದೆ. ಭೂಮಿತಾಯಿ ಎಲ್ಲರಿಗೂ ಕೂಡ ಒಂದೇ ಇಲ್ಲಿ ಭೇದಭಾವ, ತಾರತಮ್ಯ ವೆಂಬುದು ಭೂತಾಂಬೆಗಿಲ್ಲ ಭೂ ತಾಯಿಯನ್ನು ನಂಬಿದರೆ ಕೈಬಿಡಲ್ಲ ಎಂಬ ನಾಣ್ಣುಡಿಯಂತೆ ಸಮಸ್ತ ವಿಶ್ವ ಕುಲಕ್ಕೆ ಅದೇ ಭೂಮಿ, ಅದೇ ನೀರು, ಅದೇ ಮಣ್ಣು, ಈ ಸಂಗತಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಸಾಂಸ್ಕೃತಿಕ ಬೆರೆಯುವಿಕೆ ಭೂ ತಾಯಿಯಲ್ಲಿ ಕಾಣಬಹುದು ಯಾವುದೇ ಭೇದಭಾವ ಗಳಿಲ್ಲದೆ ಇಡೀ ಜಗದ ಕುಲಕ್ಕೆ ನೀಡಿದ್ದಾಳೆ ಹಾಗಾಗಿ ಆಚರಣೆಗಳಲ್ಲಿ ಸಂಪ್ರದಾಯ ವಿಭಿನ್ನವಾಗಿದ್ದರೂ ನಾವು ಕೊಡುವ ಗೌರವ ಕಾಳಜಿ ಪ್ರೀತಿ ಎಲ್ಲವೂ ಈ ನೆಲಕ್ಕೆ ಭೂಮಿಗೆ ಒಂದೇ ತೆರನಾಗಿರುತ್ತದೆ.
ಹೌದು ಪುರ್ದ್ವಾ, ಕುರಾಲ್ದ ಪರ್ಬ, ಹೊಸ್ತು ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಕರಾವಳಿಯ ಕ್ರೈಸ್ತ ಬಾಂಧವರು ‘ಮೊಂತಿ ಫೆಸ್ತ’ ಎಂದು ಆಚರಿಸುತ್ತಾರೆ. ಹೊಸ ತೆನೆಯ ಹಬ್ಬ ಎಂದೂ ಕರೆಯಲ್ಪಡುತ್ತದೆ. ವಿಶೇಷವಾಗಿ ಕರಾವಳಿಯ ಕ್ರೈಸ್ತ ಬಾಂಧವರು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಯೇಸುವಿನ ತಾಯಿಯಾದ ಮೇರಿಮಾತೆಯಜನ್ಮ ದಿನಾಚರಣೆಯನ್ನಾಗಿ ಕೂಡ ಆಚರಿಸುತ್ತಾರೆ. ಮಾತೆ ಮೇರಿ ಕುಟುಂಬದ ತಾಯಿಯಾಗಿ ಆಕೆ ನಮ್ಮ ಕುಟುಂಬವನ್ನು ಸದಾ ಕಾಪಾಡುತ್ತಾಳೆ ,ಸಂರಕ್ಷಿಸುತ್ತಾಳೆ ಎಂಬ ನಂಬಿಕೆ ಹಾಗಾಗಿ ಈ ದಿನವನ್ನು ಹೆಣ್ಣು ಮಕ್ಕಳ ದಿನವನ್ನಾಗಿ ಕೂಡ ಆಚರಿಸಲ್ಪಡುತ್ತದೆ. ಈ ಹಬ್ಬ ಕುಟುಂಬದ ಮಹತ್ವವನ್ನು ಸಾರಿ ಹೇಳುತ್ತದೆ.
ಪ್ರತಿವರ್ಷ ಸೆಪ್ಟೆಂಬರ್ 8 ರಂದು ಆಚರಿಸುವ ಈ ಹಬ್ಬದ ತಯಾರಿಯಾಗಿ ನವ ದಿನಗಳ ‘ನೋವೆನಾ’ವಿರುತ್ತದೆ ನೊವೆನಾ ಎಂದರೆ ಒಂಬತ್ತು ದಿನದ ವಿಶೇಷವಾದ ಪ್ರಾರ್ಥನೆ ಹಾಗೂ ಪೂಜೆ ಈ ದಿನಗಳಲ್ಲಿ ಮೇರಿ ಮಾತೆಯ ಪ್ರತಿಮೆಗೆ ಪುಷ್ಪವನ್ನು ಸಮರ್ಪಿಸುತ್ತಾರೆ ಅದರಲ್ಲೂ ವಿಶೇಷವಾಗಿ ಮಕ್ಕಳು ಬಟ್ಟಲುಗಳಲ್ಲಿ ವಿವಿಧ ಬಗೆಯ ಹೂವನ್ನು ತಂದು ಮಾತೆಗೆ ಅರ್ಪಿಸುತ್ತಾರೆ ಈ ದಿನಗಳಲ್ಲಿ ವಿಶೇಷವಾದ ಪ್ರಾರ್ಥನೆ ಹಾಗೂ ಪೂಜೆಯನ್ನು ಮಾತೆಗೆ ಸಮರ್ಪಿಸಲಾಗುತ್ತದೆ.
ಈ ಹಬ್ಬದ ದಿನದಂದು ಎಲ್ಲಾ ಕ್ರೈಸ್ತ ಬಾಂಧವರು ಕುಟುಂಬ ಸಮೇತರಾಗಿ ಚರ್ಚುಗಳಿಗೆ ಬಂದು ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸುತ್ತಾರೆ. ವಿವಿಧ ಬಗೆಯ ಹೂಗಳಿಂದ ಹಿರಿಯರು, ಯುವತಿಯರು, ಯುವಕರು, ಮಕ್ಕಳು ಮೆರವಣಿಗೆಯಲ್ಲಿ ಸಾಗುತ್ತಾ ಮೇರಿಮಾತೆಯ ಪ್ರತಿಮೆಗೆ ಹೂವುಗಳನ್ನು ಅರ್ಪಿಸುತ್ತಾರೆ. ಜೊತೆಗೆ ಹೊಸ ಭತ್ತದ ತೆನೆಯು ಮೆರವಣಿಗೆಯಲ್ಲಿ ಸಾಗುತ್ತದೆ ಚರ್ಚಿನಲ್ಲಿ ಭತ್ತದ ತೆನೆಯನ್ನು ಆಶೀರ್ವದಿಸಿ ಕುಟುಂಬಕ್ಕೆ ಒಂದರಂತೆ ನೀಡಲಾಗುತ್ತದೆ ಮನೆಗೆ ತಂದ ಭತ್ತದ ತೆನೆಯನ್ನು ಗೌರವದೊಂದಿಗೆ ಮನೆಯೊಳಗೆ ತಂದು ಕ್ಯಾಂಡಲ್ ಉರಿಸಿ ಪ್ರಾರ್ಥಿಸಿ ಶಿಲುಬೆಗೆ ಕಟ್ಟಲಾಗುತ್ತದೆ. ತದನಂತರ ಬೆಸ ಸಂಖ್ಯೆಯ ಆಧಾರದಲ್ಲಿ ಮನೆಯಲ್ಲಿರುವ ಭತ್ತವನ್ನು ವಿಂಗಡಿಸಿ ಅಕ್ಕಿಯನ್ನು ಪುಡಿಮಾಡಿ ಹಾಲು ಅಥವಾ ಪಾಯಸದ ಬೆರೆಸಿ ಮನೆಯ ಎ ಸದಸ್ಯರಿಗೆ ನೀಡಲಾಗುತ್ತದೆ ಅಂದು ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಅಂದು ಮಾಡುವ ಸಾಂಬಾರು ಪದಾರ್ಥಗಳು ಬೆಸಸಂಖ್ಯೆಯ ಆಧಾರದಲ್ಲಿಯೇ ಇರುತ್ತದೆ. ನವದಂಪತಿಗಳಿಗೆ ಹಾಗೂ ಒಂದು ವರ್ಷದೊಳಗಿನ ಮಗುವಿಗೆ ಹೊಸ ಅಕ್ಕಿ ಊಟ ತುಂಬಾ ವಿಶೇಷವಾದುದು. ಕುಟುಂಬದ ಎ ಸದಸ್ಯರು ಜೊತೆಗೆ ಸೇರಿ ಆಚರಿಸುವ ಹಬ್ಬ ಇದಾಗಿದೆ.ಈ ಹಬ್ಬ ಕೌಟುಂಬಿಕ ಸಾಮರಸ್ಯವನ್ನು ಮಹತ್ವವನ್ನು ಒಗ್ಗಟ್ಟನ್ನು ಸಾರಿ ಹೇಳುತ್ತದೆ. ಹಾಗಾಗಿ ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೂ ಲಭ್ಯವಿರುವ ಸಾಧನಗಳ ಮೂಲಕ ಹೊಸ ತೆನೆಯ ಭತ್ತವನ್ನು ಕಳುಹಿಸಿಕೊಡಲಾಗುತ್ತದೆ ಹೀಗೆ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಮಾತೆ ಮೇರಿಯ ಜನ್ಮದಿನದಂದು ಆಚರಿಸುವ ಈ ಹಬ್ಬವು ಮಾತೆಯು ತಾಯಿಯಾಗಿ ಸದಾ ನಮ್ಮನ್ನು ಸಂರಕ್ಷಿಸುತ್ತಾಳೆ. ಹಾಗಾಗಿ ವಿಶೇಷವಾದ ಸ್ಥಾನವನ್ನು ಅಲಂಕರಿಸಿದ್ದಾಳೆ. ಮೊಂತಿ ಫೆಸ್ತ ಹೊಸ ತೆನೆಯ ಹಬ್ಬ ಇದು ಪೂರ್ವಿಕರಿಂದ ನಡೆದುಕೊಂಡು ಬಂದ ಸಂಪ್ರದಾಯ ಅದನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ಬರಲಾಗಿದೆ ಈ ಮೂಲಕ ಸಂಸ್ಕೃತಿಯನ್ನು ಜೀವಂತವಿರಿಸಲಾಗಿದೆ.

♦ರೇಷ್ಮಾ ವೀರ ಕ್ರಾಸ್ತ ತಡಗಜೆ, ಬೆಳ್ಳಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.