ಸುಳ್ಯ ಎನ್ನೆಂಸಿ : ಹಿರಿಯ ವಿದ್ಯಾರ್ಥಿ ಸಂಘ ಮಹಾಸಭೆ

Advt_Headding_Middle

ಅಧ್ಯಕ್ಷರಾಗಿ ಚಂದ್ರಕೋಲ್ಚಾರ್ ಕಾರ್ಯದರ್ಶಿಯಾಗಿ ಕೆ.ಟಿ.ವಿಶ್ವನಾಥ್ ಪುನರಾಯ್ಕೆ  

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಆ.27ರಂದು ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಅಧ್ಯಕ್ಷ ತೆಯಲ್ಲಿ ನಡೆಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಆನಂದ ಖಂಡಿಗ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಘ ವತಿಯಿಂದ 7 ಮಂದಿ ವಿದ್ಯಾರ್ಥಿಗಳಿಗೆ ರೂ.3 ಸಾವಿರದಂತೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲೇಜಿನ ಕ್ಷೇಮಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ| ಎಂ. ಬಾಲಚಂದ್ರ ಗೌಡರು ಸಂಘದ ಬೆಳವಣಿಗೆಯ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ. ಶುಭ ಹಾರೈಸಿದರು. ಸಂಘದ ವತಿಯಿಂದ ಕಾಲೇಜಿಗೆ 2 ಪ್ರಾಜೆಕ್ಟರ್‌ಗಳನ್ನು ನೀಡಲು ಸಭೆ ನಿರ್ಧರಿಸಿತು. ಇತ್ತೀಚೆಗೆ ನಿಧನರಾದ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಶಿವಣ್ಣ ನೆಲಮನೆಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುಭಾಶ್ ಡಿ.ಕೆ. ಪ್ರಾರ್ಥಿಸಿದರು. ಭವಾನಿಶಂಕರ ಅಡ್ತಲೆ ಸ್ವಾಗತಿಸಿದರು. ಶ್ರೀಮತಿ ಮಧುರಾ ಎಂ.ಆರ್. ವಂದಿಸಿದರು. ಡಾ. ಅನುರಾಧ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ., ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್, ಉಪಾಧ್ಯಕ್ಷರಾಗಿ ಭವಾನಿ ಶಂಕರ ಅಡ್ತಲೆ, ವಿನುತಾ ಪಾತಿಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ. ವಿಶ್ವನಾಥ, ಕಾರ್ಯದರ್ಶಿಯಾಗಿ ಡಾ. ಅನುರಾಧ ಕುರುಂಜಿ, ಕೋಶಾಧಿಕಾರಿಯಾಗಿ ಆನಂದ ಖಂಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಸುದರ್ಶನ ಸೂರ್ತಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಅತ್ಯಾಡಿ, ಪ್ರಾಧ್ಯಾಪಕ ಸಲಹೆಗಾರರಾಗಿ ಶ್ರೀಮತಿ ಮಧುರಾ ಎಂ.ಆರ್., ಪತ್ರಿಕಾ ಪ್ರತಿನಿಧಿಯಾಗಿ ಶಿವಪ್ರಸಾದ್ ಕೇರ್ಪಳ, ನಿರ್ದೇಶಕರುಗಳಾಗಿ ಎಸ.ಆರ್. ಸೂರಯ್ಯ, ಪಿ.ಎ. ಮಹಮ್ಮದ, ದಿನೇಶ್ ಮಡಪ್ಪಾಡಿ, ಶಿವರಾಮ ಕೇರ್ಪಳ, ದೊಡ್ಡಣ್ಣ ಬರೆಮೇಲು, ಜಯರಾಮ ಶೆಟ್ಟಿ , ಎಂ.ಆರ್. ತೇಜಪ್ರಸಾದ, ಸುನಿಲ್ ರೈ ಬೆಳ್ಳಾರೆ, ಮಹೇಶ್ ಮೇರ್ಕಜೆ, ರಜತ್ ಅಡ್ಕಾರ್, ಕುಲದೀಪ, ಪುರುಷೋತ್ತಮ ಪಿ.ಸಿ., ಮೋನಪ್ಪ ಕೆ., ಎ.ಟಿ. ಕುಸುಮಾಧರ, ಸುಭಾಶ್ ಕೇರ್ಪಳ, ಸಂತೋಷ್ ಕುತ್ತಮೊಟ್ಟೆ, ಸಂತೋಷ್ ನಡುಮುಟ್ಲು, ಕೌಶಲ, ಸಂದೇಶ್ ರೈ ಕೆ.ಎಸ., ಕೀರ್ತನ, ಪಿ.ಎಂ. ಗೀತಾ, ಹರ್ಷ ಕಿರಣ್ ಇವರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.