ಉರುಂಡೆ ತೋಡಿಗೆ ಸೇತುವೆ ಮಾಡಿ : ಊರವರ ಒತ್ತಾಯ

Advt_Headding_Middle

ಮಾಡಿರುವ ಕಾಮಗಾರಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ


ಉಬರಡ್ಕ ಮಿತ್ತೂರು ಗ್ರಾಮದ ಮುಖ್ಯರಸ್ತೆಯಿಂದ ಹುಳಿಯಡ್ಕ – ಬೈತಡ್ಕ – ಉರುಂಡೆಯಾಗಿ ಮಿತ್ತೂರಿಗೆ ಹೋಗುವ ರಸ್ತೆಯಲ್ಲಿ ಉರುಂಡೆ ಎಂಬಲ್ಲಿ ತೋಡೊಂದು ಹರಿಯುತ್ತಿದ್ದು ಈ ತೋಡಿಗೆ ಸಣ್ಣ ಸೇತುವೆ ನಿರ್ಮಿಸಬೇಕೆಂದು ಈ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.


ಹುಳಿಯಡ್ಕ – ಬೈತಡ್ಕ – ಉರುಂಡೆಯಾಗಿ ಮಿತ್ತೂರು ಈ ಭಾಗದಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ನೂರಾರು ಮಂದಿ ಒಡಾಡುತ್ತಾರೆ. ಮಿತ್ತೂರು ಭಾಗದಿಂದ ಹರಿದು ಬರುವ ದಟ್ಟವಾದ ನೀರು ಉರುಂಡೆ ಎಂಬಲ್ಲಿ ಹರಿಯುತ್ತಿದ್ದು, ಆ ತೋಡಿಗೆ ಸೇತುವೆ ಆಗಬೇಕೆಂದು ಈ ಭಾಗದ ನಿವಾಸಿಗಳು ಹಲವು ವರ್ಷಗಳಿಂದ ಶಾಸಕರಾದಿಯಾಗಿ, ಪಂಚಾಯತ್ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ ಇದುವರೆಗೆ ಇವರ ಬೇಡಿಕೆ ಈಡೇರಿಕೆ ಕಂಡಿಲ್ಲ. ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ಬರುವ ಸಂದರ್ಭ ಓಡಾಟವೇ ಸಾಧ್ಯವಾಗುವುದಿಲ್ಲ. ಆ ಸಂದರ್ಭ ನಾವು ಉಬರಡ್ಕ ಮಿತ್ತೂರಿಗೆ ಸುತ್ತು ಬಳಸಿ ಹೋಗಬೇಕಾಗುತ್ತದೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು.

ಅನುದಾನ ವ್ಯರ್ಥ , ಕಾಮಗಾರಿಯೂ ನಷ್ಟ:
ಜನರ ಬೇಡಿಕೆಗನುಗುಣವಾಗಿ 2014 – 15 ರಲ್ಲಿ ಗ್ರಾ.ಪಂ. ಇಲ್ಲಿಗೆ ಕಾಂಕ್ರೀಟ್ ಸ್ಲ್ಯಾಬ್ ಮಾಡಲು ರೂ.2 ಲಕ್ಷ ರೂ ಅನುದಾನ ಇಟ್ಟಿತ್ತು. ಅದರಲ್ಲಿ ಇಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಮಾಡಲಾಗಿದೆಯಾದರೂ ರಸ್ತೆ ಇರುವಲ್ಲಿ ಮಾಡದೇ ಅದನ್ನು ರಸ್ತೆಯಿಂದ ದೂರದಲ್ಲಿ ಮಾಡಲಾಗಿದೆ. ಅದು ಉಪಯೋಗಕ್ಕೆ ಬರುತ್ತಿಲ್ಲ. ಜನರ ತೆರಿಗೆ ಹಣವನ್ನು ಪಂಚಾಯತ್ ವ್ಯರ್ಥ ಮಾಡಿದೆ.

 

ಇದು ಅಗತ್ಯವಾಗಿ ಆಗಬೇಕಾದ ಕಾಮಗಾರಿ. ನಾವು ಹಲವು ವರ್ಷದಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಜನರ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ. ಮಳೆಗಾಲದಲ್ಲಂತೂ ಹೋಗಲಾಗುವುದಿಲ್ಲ. ಇಲ್ಲಿ ಈ ಹಿಂದೆ ಮಾಡಲಾದ ಕಾಮಗಾರಿ ನಮ್ಮ ಪ್ರಯೋಜಕ್ಕೆ ಸಿಗದಂತೆ ಆಗಿದೆ. – ಹವಿನ್ ಉರುಂಡೆ ಸ್ಥಳೀಯರು

ಇಲ್ಲಿ ಸೇತುವೆ ಮಾಡಿದ್ದು ಅವೈಜ್ಞಾನಿಕವಾಗಿ, ಗೂಡಂಗಡಿಯಂತಿದೆ. ರಸ್ತೆ ಇರುವಲ್ಲಿ ಸೇತುವೆ ಮಾಡುವುದು ಬಿಟ್ಟು ಬದಿಯಲ್ಲಿ ಮಾಡಿದ್ದಾರೆ. ಜನರಿಗೆ ಪ್ರಯೋಜಕ್ಕೆ ಸಿಗುತ್ತಿಲ್ಲ. ವಾಹನ ಸಂಚಾರವೂ ಕಷ್ಟವಾಗಿದೆ. ಆದ್ದರಿಂದ ಇಲ್ಲಿ ಸೇತುವೆ ನಿರ್ಮಾಣ ಆಗಬೇಕು. – ಕಮಲೇಶ ಕೆದಂಬಾಡಿ

ಎಷ್ಟೋ ವರ್ಷದ ಹಿಂದಿನ ಕನಸು ಇಲ್ಲಿ ಸೇತುವೆ ಆಗಬೇಕೆಂದು. ಕೆಲಸ ಆರಂಭಿಸಿ ಅವೈಜ್ಞಾನಿಕವಾಗಿದೆ. ಇದನ್ನು ಆದಷ್ಟು ಶೀಘ್ರವಾಗಿ ವ್ಯವಸ್ಥಿತವಾಗಿ ಮಾಡಬೇಕು. -ವಸಂತ ಬೆಳ್ಳಿಪ್ಪಾಡಿ ಸ್ಥಳೀಯರು

7- 8 ವರ್ಷದ ಹಿಂದೆ ಇಲ್ಲಿ ರೂ.2 ಲಕ್ಷದಲ್ಲಿ ಕಾಮಗಾರಿ ಆರಂಭಿಸಿ ಪೂರ್ತಿ ಮಾಡದೇ ಪಂಚಾಯತ್‌ನವರು ಅರ್ಧದಲ್ಲಿ ನಿಲ್ಲಿಸಿದ್ದಾರೆ. ಮತ್ತು ಆಗ ಮಾಡಿರುವುದು ಅವೈಜ್ಞಾನಿಕವಾಗಿದೆ. ಈಗ ಅದನ್ನು ಪಂಚಾಯತ್‌ನಿಂದ ಮಾಡೋಣವೆಂದರೆ ಅಷ್ಟು ಅನುದಾನವೂ ಇಲ್ಲ.
-ಅನಿಲ್ ಬಳ್ಳಡ್ಕ ವಾರ್ಡ್ ಸದಸ್ಯರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.