ಜಿಲ್ಲಾಧ್ಯಕ್ಷರ ಸಂಧಾನ ಮಾತುಕತೆ

Advt_Headding_Middle

ಸುಳ್ಯ ಬಿಜೆಪಿಯೊಳಗಿನ ತಳಮಳ ಅಂತ್ಯದ ಸೂಚನೆ

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆ ಬಳಿಕ ಸುಳ್ಯ ಮಂಡಲ ಬಿಜೆಪಿಯೊಳಗೆ ಉಲ್ಬಣಿಸಿದ್ದ ಭಿನ್ನಮತ ಇದೀಗ ಅಂತ್ಯಗೊಳ್ಳುವ ಸೂಚನೆ ಕಂಡುಬಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರವರು ಇಂದು ಸುಳ್ಯಕ್ಕೆ ಬಂದು ಎರಡೂ ತಂಡಗಳ ಮಧ್ಯೆ ಮಾತುಕತೆ ನಡೆಸಿ ಸಂಧಾನ ಸೂತ್ರವೊಂದನ್ನು ರಚಿಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಬಹುಮತವಿದ್ದ ಬಿಜೆಪಿ ಅಭ್ಯರ್ಥಿ ಸೋತು ಕಾಂಗ್ರೆಸ್ ನ ಅಭ್ಯರ್ಥಿ ಗೆದ್ದ ಕಾರಣದಿಂದಾಗಿ ಸುಳ್ಯಮಂಡಲ ಬಿಜೆಪಿಯೊಳಗೆ ಭಿನ್ನಮತ ಆರಂಭವಾಗಿತ್ತು. ಅಡ್ಡಮತದಾನ ಮಾಡಿದವರು ಯಾರೆಂದು ಕಂಡುಹಿಡಿಯಲು ಸಾಧ್ಯವಾಗದೇ ಇದ್ದುದರಿಂದ ಬಿಜೆಪಿಗೆ ಸೇರಿದ ಎಲ್ಲಾ ಹದಿನೇಳು ಮಂದಿ ಮತದಾರರನ್ನು ಕೂಡಾ ರಾಜೀನಾಮೆ ಕೊಡಿಸುವ ಪ್ರಯತ್ನ ನಡೆದಿತ್ತು. ಆದರೆ ಹಲವು ಮಂದಿ ರಾಜೀನಾಮೆ ಕೊಡದೇ ಇದ್ದುದರಿಂದ ಭಿನ್ನಮತ ಸೃಷ್ಟಿಯಾಗಿತ್ತು. ಈ ಭಿನ್ನಮತವನ್ನು ನಿವಾರಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ಮೂಡಿದ್ದರೂ ಮಂಡಲ ಸಮಿತಿಯ ಬಿಗು ಧೋರಣೆಯಿಂದಾಗಿ ಮಾತುಕತೆಯಾಗಲೀ ಸಮಸ್ಯೆ ಇತ್ಯರ್ಥವಾಗಲಿ ಆಗಿರಲಿಲ್ಲ. ಜಿಲ್ಲಾ ಪಂಚಾಯತ್ ಸದಸ್ಯ ಎಸ್ಸೆನ್ ಮನ್ಮಥ , ಸಂತೋಷ್ ಕುತ್ತಮೊಟ್ಟೆ, ಶೈಲೇಶ್ ಅಂಬೆಕಲ್ಲು ಸೇರಿದಂತೆ ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಎಲ್ಲ ಕಾರಣದಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮನ್ಮಥರ ನೇತೃತ್ವದಲ್ಲಿ ಐವರ್ನಾಡಲ್ಲಿ, ಶೈಲೇಶ್ ಅಂಬೆಕಲ್ಲು ನೇತೃತ್ವದಲ್ಲಿ ದೇವಚಳ್ಳದಲ್ಲಿ ಹೀಗೆ ಹಲವು ಕಡೆ ಬಿ.ಜೆ.ಪಿ.ಯ ಸ್ವಾಭಿಮಾನಿ ಬಳಗ ಸ್ಪರ್ಧಿಸಿತ್ತು. ಸ್ವಾಭಿಮಾನಿ ಬಳಗ ಸ್ಪರ್ಧಿಸಿದ ಬಹುತೇಕ ಕಡೆ ಜಯಭೇರಿ ಬಾರಿಸಿತ್ತು. ಇದು ಬಿಜೆಪಿಗೆ ಮುಖಭಂಗ ವೆನಿಸಿತ್ತು.


ಇದೀಗ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ಇನ್ನು ಕೆಲವೇ ಸಮಯದಲ್ಲಿ ಎದುರಾಗುವುದರಿಂದ ಆ ಸಂದರ್ಭ ಭಿನ್ನಮತ ನಿವಾರಣೆಯಾಗದಿದ್ದರೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಬಿಜೆಪಿ ನಾಯಕರು ಮಾತುಕತೆಯಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದರು. ಅದರಂತೆ ಇಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ಸುಳ್ಯಕ್ಕೆ ಬಂದು ಎರಡೂ ತಂಡಗಳ ನಡುವೆ ಪ್ರತ್ಯೇಕ ಪ್ರತ್ಯೇಕವಾಗಿ ಮಾತನಾಡಿ, ಬಳಿಕ ಎರಡೂ ತಂಡಗಳನ್ನು ಪಕ್ಷದ ಕಚೇರಿಗೆ ಕರೆದು ಮಾತನಾಡಿ ಭಿನ್ನಮತವನ್ನು ನಿವಾರಿಸಿದರೆಂದು ತಿಳಿದು ಬಂದಿದೆ.
ಸ್ವಾಭಿಮಾನ ಬಳಗದಲ್ಲಿರುವ ಬಿಜೆಪಿ ನಾಯಕರು ಅವರಿರುವ ಸ್ಥಾನಗಳಿಗೆ ರಾಜೀನಾಮೆ ಕೊಡದೆಯೇ ನಿಶ್ಶರ್ತವಾಗಿ ಪಕ್ಷದೊಳಗಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಅದರಂತೆಯೇ ಮಂಡಲ ಸಮಿತಿಗೆ ಸಲಹೆ ನೀಡಲು ಸಮನ್ವಯ ಸಮಿತಿಯೊಂದನ್ನು ರಚಿಸಲು ಜಿಲ್ಲಾಧ್ಯಕ್ಷರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.