ಕುಂಬ್ರ:  ಶ್ರೀ ದೇವಿ ಎಂಟರ್ ಪ್ರೈಸಸ್ ಶುಭಾರಂಭ

Advt_Headding_Middle

 


ಬಾಳಿಲದ ಸುಭಾಶ್ಚಂದ್ರ ರೈ ತೋಟ,ನಿತಿನ್ ರೈ ಕುಕ್ಕುವಳ್ಳಿ ಮತ್ತು ಕೌಶಿಕ್ ರೈ ತೋಟ ಪಾಲುದಾರಿಕೆಯ ರಸಗೊಬ್ಬರ ಮತ್ತು ಕ್ರಿಮಿನಾಶಕ ವಿತರಕ ಕೇಂದ್ರ ಶ್ರೀ ದೇವಿ ಎಂಟರ್‌ಪ್ರೈಸಸ್ ಆ.೨೪ ರಂದು ಕುಂಬ್ರ ಮಂದಾರ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ರಿಬ್ಬನ್ ತುಂಡರಿಸಿ ಕಛೇರಿ ಉದ್ಘಾಟಿಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ ಉದ್ಯಮಿ,ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈಯವರು ಶುಭ ಹಾರೈಸಿದರು. ರಸಗೊಬ್ಬರ ಗೋದಾಮು ಅನ್ನು ರಿಬ್ಬನ್ ತುಂಡರಿಸುವ ಮೂಲಕ ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹೀಮಾನ್ ಹಾಜಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂಚಮಿ ಗ್ರೂಪ್‌ನ ಮಾಲಕರು, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ, ಪದ್ಮಶ್ರೀ ಸೋಲಾರ್ ಸಂಸ್ಥೆಯ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಮಂದಾರ ಸಂಕೀರ್ಣದ ಮಾಲಕ, ನಟ ಸುಂದರ ರೈ ಮಂದಾರ, ಕೃಷಿಕರುಗಳಾದ ನಾರಾಯಣ ರೈ ಬಾರಿಕೆ, ಶ್ಯಾಮ್ ಸುಂದರ್ ರೈ ಕೊಪ್ಪಳ, ಪ್ರೇಮ್‌ರಾಜ್ ರೈ ಪರ್ಪುಂಜ, ಅರುಣ್ ರೈ ಬಿಜಳ, ನಿವೃತ್ತ ಶಿಕ್ಷಕ, ನಿತಿನ್ ರೈ ಕುಕ್ಕುವಳ್ಳಿಯವರ ತಂದೆ ನಾರಾಯಣ ರೈ ಕುಕ್ಕುವಳ್ಳಿ ಇನ್ನಿತರ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಶ್ರೀ ದೇವಿ ಎಂಟರ್‌ಪ್ರೈಸಸ್‌ನ ಮಾಲಕ ನಿತಿನ್ ರೈ ಕುಕ್ಕುವಳ್ಳಿ, ಕೆ.ಕೌಶಿಕ್ ರೈ ತೋಟ ಬಾಳಿಲ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.