Breaking News

ಬಜಪ್ಪಿಲ ಉಳ್ಳಾಕುಲು ಕ್ಷೇತ್ರ ಜೀರ್ಣೋದ್ಧಾರ ಸೆ.11ರಂದು ಸಮಿತಿ ರಚನೆಗೆ ಸರ್ವರ ಸಭೆ

Advt_Headding_Middle

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆಲ್ ಉಲ್ಳಾಕುಲು ಧರ್ಮದೈವ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಸಮಿತಿಯನ್ನು ರಚಿಸಲು ಸರ್ವರ ಸಭೆ ಕರೆಯಲಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಬಜಪ್ಪಿಲ ಕ್ಷೇತ್ರವು ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿದ್ದು ಸುಳ್ಯ ಸೀಮೆಯ ಹಾಗೂ ಹಲವಾರು ಭಕ್ತಾಭಿಮಾನಿಗಳ ನಂಬಿಕೆಯ ಹಾಗೂ ಅವರ ಇಷ್ಟಾರ್ಥಗಳನ್ನು ನೆರವೇರಿಸುವ ಪ್ರಸಿದ್ಧ ದೈವಸ್ಥಾನವಾಗಿದೆ. ಹಾಗೂ ಇದೀಗ ಈ ಕ್ಷೇತ್ರವು ಸಂಪೂರ್ಣವಾಗಿ ಜೀರ್ಣೋದ್ಧಾರಗೊಳ್ಳಬೇಕಾಗಿದೆ. ಆದ್ದರಿಂದ ಕ್ಷೇತ್ರದ ಮರು ನಿರ್ಮಾಣ ಕಾರ್ಯವನ್ನು ನಡೆಸಲು ಶ್ರೀ ಕ್ಷೇತ್ರಕ್ಕೆ ಒಳಪಟ್ಟ ಎಲ್ಲಾ ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿಯನ್ನು ಮತ್ತು ಆಡಳಿತ ಸಮಿತಿಯನ್ನು ರಚಿಸಲು ಸೆ.೧೧ರಂದು ಶ್ರೀ ಕ್ಷೇತ್ರ ಬಜಪ್ಪಿಲದಲ್ಲಿ ಪೂರ್ವಾಹ್ನ 10.45ಕ್ಕೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರಮನೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.