ಬೆಳ್ಳಾರೆ: ವರ್ತಕರ ಸಂಘದಿಂದ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಸಚಿವರಿಗೆ ಮನವಿ

Advt_Headding_Middle

ಬೆಳ್ಳಾರೆ ವರ್ತಕರ ಸಂಘದ ಸಂಘದ ವತಿಯಿಂದ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂವನ್ನು ಮುಂದಿನ ವಾರದಿಂದ ತೆರವುಗೊಳಿಸಬೇಕೆಂದು‌ ಬೆಳ್ಳಾರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಲಾಯಿತು.
ಸೆ. 3ರಂದು ಸಂಜೆ ಬೆಳ್ಳಾರೆ ನಮ್ರತಾ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನುರವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿಯವರು ಮಾತನಾಡಿ ಸರಕಾರ ಕೇವಲ ಒಂದು ವರ್ಗದ ಜನರಿಗೆ ಮಾತ್ರ ಕರ್ಫ್ಯೂ ವಿಧಿಸಿದೆ. ಬಟ್ಡೆ ಅಂಗಡಿ, ಫ್ಯಾನ್ಸಿ ಅಂಗಡಿ, ಚಪ್ಪಲಿ ಅಂಗಡಿ, ಹಾರ್ಡ್ ವೇರ್, ಸ್ಟುಡಿಯೋ ಅಡಿಕೆ ಅಂಗಡಿಗಳನ್ನು ಮಾತ್ರ ಬಂದ್ ಮಾಡಿ ಮೊದಲೇ ವ್ಯಾಪಾರ ಇಲ್ಲದ ನಮಗೆ ಗಾಯದ ಮೇಲೆ ಬರೆ ಎಳೆದಿದೆ. ಸರಕಾರದ ಈ ನಿರ್ಧಾರ ಸರಿಯಲ್ಲ. ನಮ್ಮಲ್ಲಿ ಮಾತ್ರ ಕೊರೊನಾ ಹರಡೋದಾ? ನಾವೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಳಿಕ ಈ ಬಗ್ಗೆ ನಿರ್ಣಯವನ್ನು ಕೈಗೊಂಡು ಸೆ‌. 4ರಂದು ಪಂಚಾಯತಿಗೆ ಮತ್ತು ಸಚಿವರಿಗೆ ಮನವಿಯನ್ನು ನೀಡಲಾಯಿತು. ವರ್ತಕರ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನು, ಕಾರ್ಯದರ್ಶಿ ಈಶ್ವರ ಭಟ್ ಲಹರಿ, ಸದಸ್ಯರಾದ ಪ್ರಮೋದ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ ಜೋಶಿ, ಮೆಹಮ್ಮೂದ್, ಪ್ರಮೋದ್ ಕೆ. ಕೆ,
ಹಸೈನಾರ್, ಪ್ರೇಮಚಂದ್ರ, ಅನ್ಸಾರ್, ಪಂಚಾಯತ್ ಸದಸ್ಯ ಅನಿಲ್ ರೈ, ಚಂದ್ರಶೇಖರ್ ಕಾಮತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಂದು ಸಂಜೆ ಸಚಿವ ಎಸ್. ಅಂಗಾರರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ನೀಡಲಾಗುವುದೆಂದು ಸಂಘದ ಕಾರ್ಯದರ್ಶಿ ಈಶ್ವರ ಭಟ್ ಲಹರಿ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.