ಸುಳ್ಯ ಬಿಜೆಪಿಯೊಳಗಿನ ಭಿನ್ನಮತ ಅಂತ್ಯ

Advt_Headding_Middle

ನಿಶ್ಶರ್ತವಾಗಿ ಒಟ್ಟಿಗೆ ಸಾಗಲು ನಿರ್ಧಾರ : ಜಿಲ್ಲಾಧ್ಯಕ್ಷ ಸುದರ್ಶನ್
” ಸುಳ್ಯ ಬಿಜೆಪಿ ಒಳಗಿದ್ದ ಭಿನ್ನಮತ ಮತ್ತು ಅಪಸ್ವರಗಳು ಇತ್ಯರ್ಥಗೊಂಡಿದ್ದು ಒಟ್ಟಾಗಿ ಪಕ್ಷ ಸಂಘಟನೆಗೆ ದುಡಿಯಲು ಎಲ್ಲರೂ ನಿರ್ಧರಿಸಿದ್ದಾರೆ ” ಎಂದು ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಹೇಳಿದ್ದಾರೆ.
ಪಕ್ಷದೊಳಗಿನ ಭಿನ್ನಮತ ನಿವಾರಣೆ ಗಾಗಿ ಇಂದು ಸುಳ್ಯದಲ್ಲಿ ಸಭೆ ನಡೆಸಿ ಒಗ್ಗಟ್ಟು ಮೂಡಿಸಿದ ಬಳಿಕ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
” ಸುಳ್ಯದಲ್ಲಿ 2 ವರ್ಷಗಳಿಂದ ಸಣ್ಣಪುಟ್ಟ ಕಾರಣಕ್ಕಾಗಿ ಅಪಸ್ವರ ಭಿನ್ನಮತ ಇತ್ತಂಡಗಳು ಇತ್ತು ಎಂದು ಪ್ರಚಾರವಾಗಿತ್ತು. ಆದರೆ ಎಲ್ಲ ವ್ಯತ್ಯಾಸಗಳನ್ನು ಕೂಡ ಸರಿಪಡಿಸಿಕೊಂಡು ಒಟ್ಟಾಗಿ ಸಾಗುವ ನಿರ್ಧಾರವನ್ನು ಇಂದು ಮಾಡಲಾಗಿದೆ. ಇನ್ನು ಇಲ್ಲಿ ಯಾವುದೇ ಬಣಗಳಿರುವುದಿಲ್ಲ. ಗ್ರೂಪ್ ಗಳಿರುವುದಿಲ್ಲ. ವ್ಯತ್ಯಾಸಗಳಿರುವುದಿಲ್ಲ. ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಎಲ್ಲ ಪ್ರಮುಖರನ್ನು ಕರೆದು ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಗೊಂದಲಗಳನ್ನು ನಿವಾರಿಸಿದ್ದೇವೆ. ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಿರ್ಧರಿಸಲಾಗಿದೆ” ಎಂದು ಸುದರ್ಶನ್ ಹೇಳಿದರು.
” ಪಕ್ಷದ ಎಲ್ಲ ನಾಯಕರು ಜತೆಯಾಗಿ ಪ್ರತಿ ಗ್ರಾಮಪಂಚಾಯತ್ ಮಟ್ಟಕ್ಕೂ ಭೇಟಿಕೊಟ್ಟು ಬೂತ್ ಮಟ್ಟದಲ್ಲಿ ಇರಬಹುದಾದ ಗೊಂದಲಗಳನ್ನು ನಿವಾರಣೆ ಮಾಡಿ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಒಗ್ಗಟ್ಟಾಗಿ ಸ್ಪರ್ಧಿಸಿ ಗೆಲ್ಲಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.


ಅಮಾನತು ಹಿಂತೆಗೆತ
ಪಕ್ಷದಲ್ಲಿ ಗೊಂದಲಗಳಿದ್ದ ಸಂದರ್ಭದಲ್ಲಿ ಕೆಲವು ನಾಯಕರನ್ನು ಅಮಾನತುಗೊಳಿಸಲಾಗಿತ್ತು. ಕೆಲವರನ್ನು ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿತ್ತು. ಇನ್ನೂ ಕೆಲವರು ಅಮಾನತಿಗೆ ಮಂಡಲ ಸಮಿತಿಯು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಿತ್ತು. ಈಗ ಅದೆಲ್ಲವನ್ನು ಕೂಡ ಹಿಂತೆಗೆದುಕೊಳ್ಳಲಾಗಿದೆ. ಎಲ್ಲರೂ ಒಗ್ಗಟ್ಟಾಗಿರುವಂತೆ ಮಾಡಲಾಗಿದೆ ” ಎಂದವರು ಹೇಳಿದರು.
ಇದರಿಂದ ಯಾರ ಗೌರವವೂ ಕಡಿಮೆಯಾಗಿಲ್ಲ ಮತ್ತು ಹೆಚ್ಚಾಗಿಲ್ಲ. ಬಿಜೆಪಿಯ ಗೌರವ ಹೆಚ್ಚಾಗಿದೆ. ಸಮನ್ವಯ ಸಮಿತಿ ರಚಿಸಬೇಕೆಂಬ ಸಲಹೆಯನ್ನು ಕೆಲವು ಹಿರಿಯರು ನೀಡಿದ್ದಾರೆ. ಆ ಬಗ್ಗೆ ನಾವು ಮಂಡಲ ಸಮಿತಿಗೆ ಸೂಚನೆ ನೀಡಿದ್ದೇವೆ ” ಎಂದು ಸುದರ್ಶನ್ ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್ ಎನ್ ಮನ್ಮಥರು ಮಾತನಾಡಿ ಕೇಂದ್ರ ಸಹಕಾರಿ ಬ್ಯಾಂಕಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯ ಸಂದರ್ಭದಲ್ಲಿ ಆದ ಮತದಾನದ ವಿಚಾರ ಕಾನತ್ತೂರಿಗೆ ಹೋದ ನಂತರ ನಾವು ಕೆಲವು ಕಠಿಣ ನಿಲುವುಗಳನ್ನು ತೆಗೆದುಕೊಂಡಿದ್ದೆವು. ಆ ಬಗ್ಗೆ ನಾವು ವಿಷಾದ ವ್ಯಕ್ತಪಡಿಸಿದ್ದೇವೆ. ಇವತ್ತು ಜಿಲ್ಲಾಧ್ಯಕ್ಷರು ಬಂದು ಮಾತನಾಡಿ ನಿಶ್ಶರ್ಥವಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಇನ್ನು ಮುಂದೆ ನಾವು ಪಕ್ಷದ ಎಲ್ಲಾ ಗ್ರಾಮ ಗಳಿಗೆ ಕೂಡ ಭೇಟಿ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಸೊಸೈಟಿ ಸ್ಥಾನಮಾನಗಳಿಗೆ ರಾಜೀನಾಮೆ ಕೊಡುವ ವಿಚಾರವಾಗಿ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ” ಎಂದು ಹೇಳಿದರು. ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯರಾದ ಎನ್. ಎ. ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ಕೃಪಾಶಂಕರ ತುದಿಯಡ್ಕ, ಬಾಲಕೃಷ್ಣ ಕೀಲಾಡಿ, ಪ್ರಸನ್ನ ಎಣ್ಮೂರು, ಗಂಗಾಧರ ರೈ ಪುಡ್ಕಜೆ, ಚಿತ್ತರಂಜನ್ ಕೋಡಿ, ವಿಷ್ಣುಭಟ್ ಮೂಲೆತೋಟ, ಮಾಧವ ಭಟ್ ಶೃಂಗೇರಿ, ಶಾಂತಾರಾಮ ಕಣಿಲೆಗುಂಡಿ, ಶೇಖರ ಮಡ್ತಿಲ, ಶೈಲೇಶ್ ಅಂಬೆಕಲ್ಲು, ಕುಶಾಲಪ್ಪ ಗೌಡ ಪೆರುವಾಜೆ, ಸಂತೋಷ್ ಜಾಕೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮಹೇಶ್ ಮೇನಾಲ ಮತ್ತಿತರರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.