Breaking News

ರಾಜಗೋಪಾಲ್ ಬಲ್ಲಾಳ್ ಪಂಬೆತ್ತಾಡಿ ವಿಧಿವಶ

Advt_Headding_Middle

 

 

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಸಂಗ್ರಹಕ ರಾಜಗೋಪಾಲ್ ಬಲ್ಲಾಳ್ (37 ವ) ಸೆ.5 ರಂದು ಮುಂಜಾನೆ
ನಿಧನರಾಗಿದ್ದಾರೆ. ಅವರು ಮೂರು ತಿಂಗಳ ಹಿಂದೆ ಜ್ವರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಆದರೆ ಅಲ್ಲಿ ಗುಣಮುಖರಾಗದಿದ್ದುದರಿಂದ , ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಡಿಮೆಯಾದರೂ ಕರುಳಿನಲ್ಲಿ ಸಮಸ್ಯೆ ಆರಂಭಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು , ಚಿಕಿತ್ಸೆ ಫಲಿಸದೆ ಇದ್ದುದರಿಂದ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಹಿಂದೆಯಷ್ಟೇ ಅವರನ್ನು ಅವರ ಸಂಬಂಧಿಗಳ ಮನೆ ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ಕೆದಂಬಾಡಿ ಬೀಡುಗೆ ಕರೆತರಲಾಗಿತ್ತು. ಆದರೆ ಸೆ.೫ ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ ಪೂರ್ವಾಧ್ಯಕ್ಷರಾಗಿ , ಪಂಬೆತ್ತಾಡಿ ಎಸ್ ಡಿ ಎಂ ಸಿ ಸದಸ್ಯರಾಗಿ, ಪಂಜ ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಖಜಾಂಜಿಯಾಗಿ ಹಾಗೂ ಅನೇಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಪಂಬೆತ್ತಾಡಿ ಗ್ರಾಮದ ಪಂಜ ಬೀಡುನವರು.

ಮೃತರು ಪತ್ನಿ ಶ್ರೀಮತಿ ವಾಣಿಲತಾ, ಪುತ್ರರಾದ ಯಶ್ವಿತ್ ರಾಜ್, ಜೇಷ್ಠ ರಾಜ್ , ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸೆ.5 ರಂದು ಮಧ್ಯಾಹ್ನದ ವೇಳೆಗೆ ಪುತ್ತೂರು ತಾಲೂಕಿನ ಕೆದಂಬಾಡಿ ಬೀಡುನಲ್ಲಿ ಮೃತರ ಅಂತ್ಯಸಂಸ್ಕಾರ ಜರುಗಲಿದೆ ಎಂದು ತಿಳಿದುಬಂದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.