ಸಂಪಾಜೆ ಗ್ರಾಮದ ಪ್ಲಾಟಿಂಗ್ ಸಮಸ್ಯೆ ನಿವಾರಿಸಬೇಕೆಂದು ಊರವರಿಂದ ಸಚಿವರಿಗೆ ಮನವಿ

Advt_Headding_Middle

ಸಂಪಾಜೆ ಗ್ರಾಮದ ಸಂಪಾಜೆ ಕಲ್ಲುಗುಂಡಿ ಗೂನಡ್ಕ ಪ್ರದೇಶಗಳಲ್ಲಿರುವ ಸರ್ವೆ ನಂಬರ್ 120 ರಲ್ಲಿ ಬರುವ ಜಾಗದ ಪ್ಲಾಟಿಂಗ್ ಆಗದೇ ಇರುವುದರಿಂದ ಇಲ್ಲಿಯ ನಿವಾಸಿಗಳಿಗೆ ಭಾರೀ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಿ ಪ್ಲಾಟಿಂಗ್ ಆಗುವಂತೆ ವ್ಯವಸ್ಥೆ ರೂಪಿಸಬೇಕೆಂದು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ಸುಳ್ಯ ಶಾಸಕ ಎಸ್. ಅಂಗಾರರಿಗೆ ಊರವರು ಮನವಿ ನೀಡಿದ್ದಾರೆ.
ಸಂಪಾಜೆ ಗ್ರಾಮದ ಸರ್ವೆ ನಂಬರ್ 120 ರಲ್ಲಿ ನೂರಾರು ಮನೆಗಳಿವೆ. ಆದರೆ ಈ ಜಾಗದ ಪ್ಲಾಟಿಂಗ್ ಆಗದೇ ಇರುವುದರಿಂದ ಜನರಿಗೆ ತಮ್ಮ ಮನೆ ಸ್ಥಳವನ್ನು ಕನ್ವರ್ಶನ್ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸರಕಾರದ ಅಥವಾ ಪಂಚಾಯತ್ ನ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ಜನರು ವಂಚಿತರಾಗಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆಯಲಾಗಲೀ, ಹೊಸ ಕಟ್ಟಡ ಕಟ್ಟುವುದಕ್ಕಾಗಲೀ ವಿದ್ಯುತ್ ಸಂಪರ್ಕ ಪಡೆಯಲಾಗಲೀ ಸಾಧ್ಯವಾಗುತ್ತಿಲ್ಲ.
ಸಚಿವರಾಗಿರುವ ತಾವು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆಯನ್ನು ಪರಿಹರಿಸಿಕೊಟ್ಟು ಪಂಚಾಯತಿನಿಂದ ಪಡೆಯಬಹುದಾದ ಸೌಲಭ್ಯ ಪಡೆಯಲು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ, ಶಾಜಿ ಮಾಧವನ್, ನಾಗೇಶ್ ಕಲ್ಲುಗುಂಡಿ, ಚಂದ್ರಶೇಖರ ಕೈಪಡ್ಕ, ಜಯರಾಮ ಅನ್ಯಾಳ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.