ನಿವೃತ್ತ ಶಿಕ್ಷಕಿ ಶ್ರೀಮತಿ ಎ. ಲೀಲಾವತಿಯವರಿಗೆ ವಿಶ್ವಕರ್ಮ ಭಜನಾ ಮಂಡಳಿಯಿಂದ ಗೌರವಾರ್ಪಣೆ

Advt_Headding_Middle

 

ನಿಡ್ಮಾರು ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ಎ. ಲೀಲಾವತಿಯವರನ್ನು ಸೆ. 5ರಂದು ಸನ್ಮಾನಿಸಿ ಗೌರವಿಸಲಾಯಿತು.
ಭಜನಾ ಮಂಡಳಿಯವರು ಪ್ರತೀ ವರ್ಷ ಒಬ್ಬರು ಶಿಕ್ಷಕರು ಅಥವಾ ನಿವೃತ್ತ ಶಿಕ್ಷಕರನ್ನು ಗೌರವಿಸುತ್ತಾ ಬರಿತ್ತಿದ್ದು, ಪ್ರಸ್ತುತ 6 ನೇ ವರ್ಷದಲ್ಲಿ ಎ. ಲೀಲಾವತಿಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಕೆ.ಎಚ್. ಮಧುಚಂದ್ರ ವಹಿಸಿ ಶುಭ ಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಶುಭ ಹಾರೈಸಿದರು. ಎ. ಲೀಲಾವತಿಯವರ ಪತಿ ನಿವೃತ್ತ ಕೆ.ಎಫ್.ಡಿ.ಸಿ. ಉದ್ಯೋಗಿ ಚಂದ್ರಹಾಸ ಮತ್ತು ಪುತ್ರ ಅಜಿತ್ ಐವರ್ನಾಡು ಸಂಘಟಕರಿಗೆ ಕೃತಜ್ಞತೆ ಅರ್ಪಿಸಿದರು. ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವಂದಿಸಿದರು. ಶೇಷಪ್ಪ ಆಚಾರ್ಯ ನಿಡ್ಮಾರು ಪ್ರಾರ್ಥಿಸಿದರು. ಹರಿನಾರಾಯಣ, ದಿನೇಶ್ ಬಾಚೋಡಿ, ರಮೇಶ್ ಕೊಳೆಂಜಿಕೋಡಿ, ಪ್ರವೀಣ್ ಕಾಣಿಯೂರು, ರಕ್ಷಿತ್ ನಿಡ್ಮಾರು, ವಿಶ್ವನಾಥ ಮುಂಡುಗಾರು, ರಾಜೇಶ್ ದರ್ಖಾಸ್ತು, ದಯಾನಂದ ಕಳಂಜ, ಶ್ರೀಮತಿ ಹರಿಣಾಕ್ಷಿ ಶೇಷಪ್ಪ ಆಚಾರ್ಯ ನಿಡ್ಮಾರು, ಭವಾನಿಶಂಕರ ಮಂಡೆಕೋಲು ಮತ್ತು ಲೀಲಾವತಿ ದಂಪತಿಯ ಕುಟುಂಬಸ್ಥರು, ಬಂಧು‌ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.