Breaking News

ಬಾಳುಗೋಡು ಕಾಂಗ್ರೆಸ್ ಗ್ರಾಮ ಸಮಿತಿ ಸಭೆ

Advt_Headding_Middle

 

ಬಾಳುಗೋಡು ಗ್ರಾಮದ ಕಾಂಗ್ರೆಸ್ ನ ಗ್ರಾಮ ಸಮಿತಿ ಸಭೆ ಇತ್ತೀಚೆಗೆ ಬಾಳುಗೋಡಿನ ಕುಕ್ಕಪ್ಪ ಮುಂಡೋಕಜೆ ಅವರ ಮನೆಯಲ್ಲಿ ನಡೆಯಿತು. ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ರವಿಕುಮಾರ್ ಕಿರಿಭಾಗ ಸಭಾಧ್ಯಕ್ಷತೆ ವಹಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ.ಸಿ. ಜಯರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿರುವ ಕ್ರೃಷ್ಣಪ್ಪ. ಜಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಇದರ ಉಪಾಧ್ಯಕ್ಷ, ದೇವಚಳ್ಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಉಸ್ತುವಾರಿಗಳಾದ ದಿನೇಶ್ ಅಂಬೆಕಲ್ಲು ಉಪಸ್ಥಿತರಿದ್ದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ದಯಾನಂದ ಕಟ್ಟೆಮನೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಇದರ ಕಾರ್ಯದರ್ಶಿ ಶೈಲೇಶ್ ಕಟ್ಟೆಮನೆ, ಬ್ಲಾಕ್ ಕಾಂಗ್ರೆಸ್ ಸದಸ್ಯ ಆನಂದ ಬೆದ್ರುಪಣೆ, ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ನಿತಿನ್ ಬಾಳುಗೋಡು, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಗುಡ್ಡೆಮನೆ, ಅನಂತರಾಮ ಆಲ್ಕಬೆ, ಪ್ರಕಾಶ್ ಮಿತ್ತಡ್ಕ, ಸುಂದರ ಬೆಟ್ಟುಮುಖಿ, ಜಯರಾಮ ಮುಂಡೋಕಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಸದಸ್ಯರಾಗಿ ಜಯಕುಮಾರ್ ಬಾಬ್ಲುಬೆಟ್ಟು ಅವರನ್ನು ಎಲ್ಲರ ಸಮ್ಮುಖದಲ್ಲಿ ಅಧಿಕ್ರೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಚೇತನ್ ಕಜೆಗದ್ದೆ ಸ್ವಾಗತಿಸಿ ರವಿಕುಮಾರ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.