ಸುಬ್ರಹ್ಮಣ್ಯದ ಕೇಸರಿ ಬಳಗದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

Advt_Headding_Middle

 

ಸುಬ್ರಹ್ಮಣ್ಯದ ಕೇಸರಿ ಬಳಗದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಬಳಗದ ಅಧ್ಯಕ್ಷ ಮೋಹನ ಅಗರಿಕಜೆ ಸ್ವಚ್ಚತಾ ಕಾರ್ಯಾಗಾರಕ್ಕೆ ಶ್ರೀ ದೇವಳದ ರಥಬೀದಿಯಲ್ಲಿ ಚಾಲನೆ ನೀಡಿದರು.

ಸ್ವಚ್ಚತೆಯ ಕಡೆಗೆ ಒಂದು ಹೆಜ್ಜೆ ಧ್ಯೇಯ ವ್ಯಾಖ್ಯೆಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಕೇಸರಿ ಬಳಗದ ಸದಸ್ಯರಿಂದ ಸ್ವಚ್ಚತಾ ಕಾರ್ಯಾಗಾರವು ನೆರವೇರಿತು. ಬಳಗದ ಗೌರವಾಧ್ಯಕ್ಷರಾದ ರಾಜೇಶ್ ಎನ್.ಎಸ್, ದಿನೇಶ್ ಬಿ.ಎನ್., ಸವಿತಾ ಭಟ್ ರ ನೇತೃತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಿಂದ ಕುಮಾರಧಾರದ ತನಕ ಸದಸ್ಯರು ಶುಚಿತ್ವ ಕಾರ್ಯ ಮಾಡಿದರು.
ರಥಬೀದಿ, ಕಾಶಿಕಟ್ಟೆ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬಿಲದ್ವಾರ, ಕುಮಾರಧಾರ ಸ್ನಾನಘಟ್ಟ ಮೊದಲಾದ ಪ್ರದೇಶಗಳಲ್ಲಿ ಇದ್ದ ತ್ಯಾಜ್ಯಗಳನ್ನು, ಪ್ಲಾಸ್ಟಿಕ್ ಬಾಟ್ಲಿ ಇತ್ಯಾದಿಗಳನ್ನು ಹೆಕ್ಕಿದರು.ಅಲ್ಲದೆ ರಥಬೀದಿಯಿಂದ ಕುಮಾರಧಾರದ ತನಕ ರಸ್ತೆಯ ಇಕ್ಕೆಲದಲ್ಲಿ ಇದ್ದ ಗಿಡಗಂಟಿ, ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳನ್ನು ಶೇಖರಿಸಲಾಯಿತು. ಬಳಿಕ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತ್ಯಾಜ್ಯದ ಗೋಣಿಗಳನ್ನು ತುಂಬಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಯಿತು. ಬಳಗದ ಪದಾಧಿಕಾರಿಗಳಾದ ಶಿಶರ್ ಅಂಙಣ, ದಿಲೀಪ್ ಕುದ್ವ, ಸುರೇಂದ್ರ ಎ.ಕೆ, ಅರುಣ್ ಕುಮಾರ್, ಪ್ರದೀಪ್, ಗೋಪಾಲ ಗೌಡ, ಸತೀಶ್ ಅಂಙಣ, ನಾಗರಾಜ, ಲಕ್ಷ್ಮೀ ನಾರಾಯಣ ಭಟ್, ಮಹಿಳಾ ಪದಾಧಿಕಾರಿಗಳಾದ ವಾರಿಜಾ ಅಗರಿಕಜೆ, ಲಿಖಿತಾ.ಎಂ, ಶ್ವೇತಾ.ಜಿ.ಪೈ, ಲೀಲಾವತಿ, ಮಲ್ಲಿಕಾ, ನಿರ್ಮಲಾ, ಪವಿತ್ರಾ, ನೀತಾ.ಎ, ರೂಪಾ, ಪುಷ್ಪಾ ಸೇರಿದಂತೆ ಸದಸ್ಯರು ಸ್ವಚ್ಚತಾ ಕಾರ್ಯ ನೆರವೇರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.