ವರ್ತಕರ ಪ್ರತಿಭಟನೆ ಹೇಳಿಕೆಯ ಹಿನ್ನೆಲೆ

Advt_Headding_Middle

 

 

ಈ ವಾರದ ವೀಕೆಂಡ್ ಕರ್ಫ್ಯೂ ಬಿಗಿ

2 ಹೋಟೆಲುಗಳಿಗೆ, 1 ಬಟ್ಟೆ ಅಂಗಡಿಗೆ ನಗರ ಪಂಚಾಯತಿನಿಂದ ದಂಡ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರ್ತಕ ಸಮೂಹ ವೀಕೆಂಡ್ ಕರ್ಫ್ಯೂ ವಿರುದ್ಧದ ನಿಲುವನ್ನು ತಾಳಿದ್ದು ಕರ್ಫ್ಯೂ ರದ್ದುಗೊಳಿಸಬೇಕೆಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ವೀಕೆಂಡ್ ಕರ್ಫ್ಯೂ ರದ್ದುಗೊಳ್ಳದಿದ್ದರೂ ತಾವು ಅಂಗಡಿಗಳನ್ನು ತೆರೆದಿಟ್ಟು ವ್ಯಾಪಾರ ನಡೆಸುವುದಾಗಿಯೂ ವರ್ತಕರು ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ ದ. ಕ. ಜಿಲ್ಲಾಧಿಕಾರಿಯವರ ಸೂಚನೆಯಂತೆ ಅಧಿಕಾರಿಗಳು ಈ ವಾರ ಬಿಗು ಕ್ರಮಗಳನ್ನು ಕೈಗೊಂಡರು. ಪುತ್ತೂರಿನಲ್ಲಿ ಎ.ಸಿ.ಯವರು ವರ್ತಕರ ಸಭೆ ಕರೆದು ವೀಕೆಂಡ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದೂ, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು. ಈ ವಾರದ ಮಟ್ಟಿಗೆ ಕರ್ಫ್ಯೂ ನಿಯಮವನ್ನು ಪಾಲಿಸಬೇಕೆಂದು ಮುಂದಿನ ವಾರ ಕರ್ಫ್ಯೂ ತೆರವು ಗೊಳ್ಳುವ ಸಾಧ್ಯತೆ ಇರುವುದಾಗಿಯೂ ಎ.ಸಿ.ಯವರು ತಿಳಿಸಿದ್ದರು. ಸುಳ್ಯದಲ್ಲಿ ತಹಶೀಲ್ದಾರರು ಅಧಿಕಾರಿಗಳ ಸಭೆ ನಡೆಸಿ ವೀಕೆಂಡ್ ಕರ್ಫ್ಯೂ ಯಶಸ್ವಿಗೊಳಿಸಲು ಅಧಿಕಾರಿಗಳನ್ನು ಸಜ್ಜುಗೊಳಿಸಿದ್ದರು.
ಅಧಿಕಾರಿಗಳ ಭರವಸೆಯ ಮಾತನ್ನು ಒಪ್ಪಿ ಅಂಗಡಿ ತೆರೆದು ಪ್ರತಿಭಟನೆ ನಡೆಸದಿರಲು ವರ್ತಕರು ನಿರ್ಧರಿಸಿದ್ದರು. ಆದರೂ ಕೆಲವು ಅಂಗಡಿಗಳು ತೆರೆದು ಕೊಳ್ಳಬಹುದೆಂಬ ಸಂಶಯ ಆಡಳಿತಕ್ಕೆ ಇದ್ದುದರಿಂದ ಅಧಿಕಾರಿಗಳ ಗಸ್ತು ಈ ವಾರ ಹಿಂದಿನ ವಾರಗಳಿಗಿಂತ ಹೆಚ್ಚಾಗಿತ್ತು.
ಸುಳ್ಯದಲ್ಲಿ ಜಿಲ್ಲಾಡಳಿತ ಸೂಚಿಸಿದ ಅಗತ್ಯವಸ್ತುಗಳ ಅಂಗಡಿಗಳಲ್ಲದೆ ಇನ್ನೂ ಕೆಲವು ಅಂಗಡಿಗಳು ಅರ್ದಂಬರ್ಧ ತೆರೆದಿದ್ದುದನ್ನು ಗಮನಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಅವರು ಅವುಗಳನ್ನು ಬಂದ್ ಮಾಡಿಸಿದರು. ಹಳೆಗೇಟಿನಲ್ಲಿ 2 ಹೋಟೆಲ್ ಗಳಿಗೆ ಹೋಗಿ ಅಲ್ಲಿ ಪಾರ್ಸೆಲ್ ಕೊಡುವ ಬದಲು ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಮಾಡಿದ್ದರು ಎಂಬ ಕಾರಣಕ್ಕೆ 2 ಹೋಟೆಲ್ ಗೆ ತಲಾ 1ಸಾವಿರ ದಂಡ ವಿಧಿಸಿದರು. ಸುಳ್ಯ ನಗರ ಪಂಚಾಯತ್ ಕಚೇರಿ ಸಮೀಪದ ಬಟ್ಟೆ ಅಂಗಡಿಯೊಂದಕ್ಕೆ ರೂ. 500 ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
ವೀಕೆಂಡ್ ಸಂದರ್ಭದಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸುವ ಮತ್ತು ಅದರಲ್ಲಿ ಭಾಗವಹಿಸುವ ಅಧಿಕಾರಸ್ಥರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದೆ, ಅಂಗಡಿ ತೆರೆದಿರುವವರಿಗೆ ದಂಡ ವಿಧಿಸಿದ ಕ್ರಮ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.