ಸೆ. 06 ರಿಂದ ಸೆ. 15ರವರೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ 4 ರಿಂದ 8 ತಿಂಗಳ ವಯೋಮಾನದ ಎಲ್ಲಾ ಹೆಣ್ಣು ಕರುಗಳಿಗೆ ಬ್ರುಸೆಲ್ಲೋಸಿಸ್ ಲಸಿಕೆ

Advt_Headding_Middle

 

 

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಸು ಮತ್ತು ಎಮ್ಮೆ ಗಳಲ್ಲಿ ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ರೋಗವನ್ನು ನಿಯಂತ್ರಣ ಮಾಡುವುದು ನಿಟ್ಟಿನಲ್ಲಿ 4 ರಿಂದ 8 ತಿಂಗಳ  ವಯಸ್ಸಿನ ಹೆಣ್ಣು ಕರುಗಳಿಗೆ ಮೊದಲನೇ ಸುತ್ತಿನ ಕಂದು ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಸೆ. 06 ರಿಂದ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮವು ಸೆ. 15 ರವರೆಗೆ ನಡೆಯಲಿದೆ.

ಕಂದು ರೋಗ ಒಂದು ಪ್ರಾಣಿಜನ್ಯ ರೋಗವಾಗಿದ್ದು ಇದು ಹಸು, ಎಮ್ಮೆ ಮತ್ತು ಆಡುಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ರೋಗವು ಮಾರಣಾಂತಿಕವಾಗಿದ್ದು ಗರ್ಭಪಾತ ಗರ್ಭಕೋಶ ಸಂಬಂಧಿತ ಕಾಯಿಲೆಗಳು ಸಂತಾನಹೀನತೆ ಮತ್ತು ಪುರುಷರಲ್ಲಿ ಜನನೇಂದ್ರಿಯಕ್ಕೆ ಸಂಬಂಧಿಸಿದ ರೋಗಳನ್ನು ಉಂಟುಮಾಡುತ್ತದೆ. ಜಾನುವಾರುಗಳಲ್ಲಿ ಈ ರೋಗ ಗರ್ಭಪಾತ, ಕಸ ಬೀಳದಿರುವುದು, ಸಂತಾನಹೀನತೆ ಮತ್ತು ಚಿಕಿತ್ಸೆಗೆ ಫಲಕಾರಿಯಾಗದ ಜ್ವರ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಹೈನುಗಾರರ ಆದಾಯವು ದಿನದಿಂದ ದಿನಕ್ಕೆ ಕುಸಿಯುತ್ತ ಹೋಗಿ ನಷ್ಟವನ್ನು ಅನುಭವಿಸಬೇಕಾಗಬಹುದು.

ಆದ್ದರಿಂದ ತಾಲೂಕಿನ ಎಲ್ಲಾ ಹೈನುಗಾರರು ತಮ್ಮ ಮನೆಯ 4 ರಿಂದ 8 ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ತಪ್ಪದೇ ಬ್ರುಸೆಲ್ಲೋಸಿಸ್ ರೋಗನಿರೋಧಕ ಲಸಿಕೆಗಳನ್ನು ಹಾಕಿಸಿಕೊಳ್ಳಲು ಮತ್ತು ಈ ರೀತಿ ಲಸಿಕೆಗೆ ಒಳಪಟ್ಟ ಕರುಗಳನ್ನು ಕಿವಿಯೋಲೆ ತೋಡಿಸುವುದರ ಮೂಲಕ ಗುರುತಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದು ಅಥವಾ ಡಾ|| ನಿತಿನ್ ಪ್ರಭು ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಮೊಬೈಲ್ ದೂರವಾಣಿ ಸಂಖ್ಯೆ 9844995078

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.