Breaking News

ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಟೆಸ್ಟ್ ಪಂದ್ಯಾಟ

Advt_Headding_Middle

 

ಪ್ರಗತಿ ಚೊಕ್ಕಾಡಿಗೆ ‘ಸ್ಟೇಡಿಯಂ ಟೆಸ್ಟ್ ಟ್ರೋಫಿ’

ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಸುಳ್ಯದ ಶಾಂತಿನಗರ ಕ್ರೀಡಾಂಗಣದಲ್ಲಿ 5 ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯಾಟ ‘ಸ್ಟೇಡಿಯಂ ಟೆಸ್ಟ್ ಟ್ರೋಫಿ’ ಯು ಆ.28 ರಿಂದ ಸೆ.1ರವರೆಗೆ ನಡೆಯಿತು.

ಪಂದ್ಯಾಟವನ್ನು ಸುಳ್ಯದ ಜೆಓಸಿ ಸಂಘಟನೆಯು ಸಂಘಟಿಸಿತು. ಪ್ರಗತಿ ಚೊಕ್ಕಾಡಿ ಹಾಗೂ ಜೆಓಸಿ ತಂಡ ಗಳ ನಡುವೆ ನಡೆದ ಈ ಪಂದ್ಯಾಟದಲ್ಲಿ ಪ್ರಗತಿ ಚೊಕ್ಕಾಡಿ ತಂಡ ಗೆದ್ದು ‘ಸ್ಟೇಡಿಯಂ ಟೆಸ್ಟ್ ಟ್ರೋಫಿ’ ಯನ್ನು ತನ್ನ ಬಗಲಿಗೆ ಹಾಕಿಕೊಂಡಿತು.

5 ದಿನಗಳ ಈ ಪಂದ್ಯಾಟವು ಕೇವಲ ಎರಡು ದಿನದಲ್ಲಿ ಮುಕ್ತಾಯಗೊಂಡಿತು.

ಟಾಸ್ ಗೆದ್ದ ಜೆಓಸಿ ತಂಡವು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡು ಪ್ರಗತಿ ಚೊಕ್ಕಾಡಿ ತಂಡವನ್ನು ಬ್ಯಾಟಿಂಗಿಗಿಳಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಪ್ರಗತಿ ಚೊಕ್ಕಾಡಿ 178 ರನ್ ಗಳಿಗೆ ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಜೆಓಸಿ ತಂಡ 57 ರನ್‌ ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ನ ಲೀಡ್ ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪ್ರಗತಿ ಚೊಕ್ಕಾಡಿ ತಂಡ 69 ರನ್ ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು, ಜೆಓಸಿ ತಂಡಕ್ಕೆ 191 ರನ್ ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಜೆಓಸಿ ತಂಡ ಕೇವಲ 83 ರನ್ ಮಾಡಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ದಿನವೊಂದಕ್ಕೆ 90 ಓವರ್ ಎಸೆಯಲಾಗಿತ್ತು. ಪಂದ್ಯಾಟದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಬಾರಿಸಿದ ಪ್ರಗತಿ ತಂಡದ ಸಫ್ವಾನ್ ಗೂನಡ್ಕ ಸರಣಿ ಶ್ರೇಷ್ಠ ಬಹುಮಾನ ಹಾಗೂ ಉತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿ ಪಡೆದರು. ಉತ್ತಮ ಬೌಲರ್ ಆಗಿ ಜೆಓಸಿ ತಂಡದ ಜಾಕೀರ್ ಸುಳ್ಯ ಪಡೆದುಕೊಂಡರು.

ಆ ಮೂಲಕ ಸುಳ್ಯಕ್ಕೂ 90 ಓವರ್ ನ ಟೆಸ್ಟ್ ಪಂದ್ಯಾಟ ಕಾಲಿಡುವ ಮೂಲಕ ಗ್ರಾಮೀಣ ಭಾಗದಲ್ಲಿಯೂ ಟೆಸ್ಟ್ ಪಂದ್ಯಾಟಕ್ಕೆ ಮಾನ್ಯತೆ ಸಿಕ್ಕಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.