ಬೊಳ್ಳಾಜೆ ಶಾಲೆಯ ಕುರಿತು ಊರವರ ಸಭೆ – ಆಡಳಿತ ಮಂಡಳಿ ಉಪಸ್ಥಿತಿ ಶೈಕ್ಷಣಿಕ ಸಮನ್ವಯ ಸಮಿತಿ ರಚಿಸಿದ ಆಡಳಿತ ಮಂಡಳಿ

Advt_Headding_Middle

 


 

ಕೋವಿಡ್ 19 ಕಾರಣಗಳಿಂದ ತೆರೆಯದ ಶಾಲೆಗಳು, ಇದೀಗ ಶಾಲೆಗಳನ್ನು ತೆರೆಯುವ ಬಗ್ಗೆ ಸರಕಾರದಿಂದ ಸೂಚನೆಗಳು ಸಿಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಸುಸೂತ್ರವಾಗಿ ಪಠ್ಯ ಹಾಗೂ ಪಠ್ಯೇತರ ಶಿಕ್ಷಣ ಸಿಗುವಂತೆ ಮಾಡುವ ಉದ್ದೇಶದಿಂದ ಮತ್ತು ಮುಂದಿನ ನಡೆಯ ಬಗ್ಗೆ ಚರ್ಚಿಸಲು ಊರವರ ಸಭೆಯು ಸೆ.5ರಂದು ಬೊಳ್ಳಾಜೆ ಶ್ರೀ ಶಾರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಬೊಳ್ಳಾಜೆ ಅನುದಾನಿತ ಶಾಲೆಯಲ್ಲಿ ಸರಕಾರದಿಂದ ನಿಯೋಜನೆಗೊಂಡಿದ್ದ ಶ್ಯಾಾಮಾಲ ಎ.ವಿ.ಯವರು ನಿವೃತ್ತರಾದ ಬಳಿಕ ಪಂಜದ ಸೀತಾರಾಮ ಎಂಬವರು ತಾತ್ಕಾಲಿಕ ನೆಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅಲ್ಲದೇ ಬೊಳ್ಳಾಜೆ ಶಾಲೆಯಲ್ಲಿ ತನ್ನನ್ನು ಖಾಯಂಗೊಳಿಸುವಂತೆ ಪ್ರಯತ್ನವನ್ನು ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಬೆಳ್ತಂಗಡಿಯ ಗಿರಿಧರ ಎಂಬವರನ್ನು ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಸರಕಾರ ನಿಯೋಜಿಸಿತ್ತು. ಆದರೆ ಅವರಿಗೆ ಆರೋಗ್ಯದ ಸಮಸ್ಯೆಯಿದ್ದ ಕಾರಣ ಶಾಲೆಗೆ ಸರಿಯಾಗಿ ಬರುತ್ತಿರಲಿಲ್ಲವೆನ್ನಲಾಗಿದೆ. ಸರಕಾರದಿಂದ ನಿಯೋಜನೆಗೊಂಡ ಗಿರಿಧರರವರು ಶಾಲೆಗೆ ಬಾರದೆ ಶಾಲಾ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿರದ ಹಿನ್ನಲೆಯಲ್ಲಿ ಉಳಿದ ಶಿಕ್ಷಕರು ತಾವು ಬರುವುದಿಲ್ಲವೆಂದು ಹೇಳಿ, ಶಾಲಾ ವಾಟ್ಸಾಪ್ ಗ್ರೂಪ್ ನಿಂದ ಲೆಪ್ಟ್ ಆದರೆನ್ನಲಾಗಿದೆ. ಇದು ಪೋಷಕರಲ್ಲಿ ಆತಂಕಕ್ಕೀಡು ಮಾಡಿತ್ತು. ಈ ಎಲ್ಲಾಾ ಹಿನ್ನೆಲೆಯಲ್ಲಿ ಊರವರ ಸಭೆ ಕರೆಯಲಾಯಿತು.
ಅದರಂತೆ ಸೆ.5ರಂದು ಬೊಳ್ಳಾಾಜೆ ಶಾಲೆಯಲ್ಲಿ ಊರವರ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ.ಸದಾಶಿವ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ಅಧ್ಯಕ್ಷರಾದ ಎಂ.ಬಿ.ಸದಾಶಿವ ಮತ್ತು ಉಪಾಧ್ಯಕ್ಷರಾದ ಶುಭಾಕರ ನಾಯಕ್ ಬೊಳ್ಳಾಜೆ ಸಭೆಗೆ ವಿವರಿಸಿದರು. ಬಳಿಕ ಪೋಷಕರು ಮಾತನಾಡಿ ಶಾಲೆಯ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಬಿ.ಸದಾಶಿವರವರು ಈಗಿರುವ ಶಿಕ್ಷಕರನ್ನು ಮುಂದುವರಿಸಿಕೊಂಡು ಶಾಲೆ ಸೂಸುತ್ರವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಶಾಲೆಯ ಬಗ್ಗೆ ಮೇಲುಸ್ತುವರಿ ನೋಡಿಕೊಳ್ಳಲು ಶೈಕ್ಷಣಿಕ ಸಮನ್ವಯ ಸಮಿತಿಯನ್ನು ರಚಿಸುವಂತೆಯೂ ಸೂಚಿಸಿದರು. ಪೋಷಕರು, ಊರುವರು, ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಸಮಿತಿಯಲ್ಲಿ ಆಡಳಿತ ಮಂಡಳಿಯಿಂದ ಗೋಪಾಲಕೃಷ್ಣ ಭಟ್, ಹಳೆ ವಿದ್ಯಾರ್ಥಿ ಸಂಘದಿಂದ ಅಶೋಕ ಕಿಲಾರ್ ಕಜೆ, ಎಸ್.ಡಿ.ಎಂ.ಸಿ.ಯಿಂದ ಸುಬ್ರಹ್ಮಣ್ಯ ಬೊಳ್ಳಾಜೆ, ಜಯಂತಿ, ಪೋಷಕರ ವತಿಯಿಂದ ಯತೀಶ ಬೊಳ್ಳಾಜೆ, ಚಂದ್ರಿಕಾ, ಜನಪ್ರತಿನಿಧಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಹಾಗೂ ಊರವರಾದ ಮೋನಪ್ಪ ಪೂಜಾರಿ ಹೈದಂಗೂರು, ದಯಾನಂದ ಕೊರತ್ತೋಡಿ, ಲಕ್ಷ್ಮಣ ಬೊಳ್ಳಾಜೆ, ಗಂಗಾಧರ ಬೊಳ್ಳಾಜೆರವರನ್ನು ಆಯ್ಕೆಗೊಳಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಸ್ಥಳದಾನಿಗಳಾದ ಅನಂತ ಭಟ್ ಕನಿಯಾಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ರತ್ನಾಕರ ಮಾಪಲಕಜೆ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕಿಲಾರ್ಕಜೆ ಉಪಸ್ಥಿತರಿದ್ದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಮ್ ಭಟ್ ಬೆಟ್ಟ, ರಾಜಾರಾಂ ಭಟ್ ಬೆಟ್ಟ, ರಾಜಶೇಖರ ಭಟ್ ಕೊಡಪಾಲ ಹಾಗೂ ರಾಘವೇಂದ್ರ ಬೊಳ್ಳಾಜೆ, ರಾಜೇಶ್ ಬೇರಿಕೆ, ದೇವಪ್ಪ ಹೈದಂಗೂರು, ಮಂಜುನಾಥ ಬೆನಕ ಹೈದಂಗೂರು, ಮನೋಹರ ರೈ ರೆಂಜಾಳ, ದೇವಕಿ ಬೊಮ್ಮಾರು, ಪ್ರಮೋದ್ ಬೊಳ್ಳಾಜೆ, ರಮೇಶ್ ನಾಯ್ಕ ಹೈದಂಗೂರು, ಮನಮೋಹನ ಕಂದೂರು, ದಯಾನಂದ ಮಾಪಲಕಜೆ, ಶ್ಯಾಾಮ ಸುಂದರ ಬೊಳ್ಳಾಜೆ, ನೆ.ಕೆ. ಗ್ರಾ.ಪಂ. ಉಪಾಧ್ಯಕ್ಷ ಧನಂಜಯಕುಮಾರ್ ಎರ್ಮೆಟ್ಟಿ,
ಮುಖ್ಯ ಶಿಕ್ಷಕ ಸೀತಾರಾಮ ಸಿ.ಎನ್., ಶಿಕ್ಷಕಿಯರಾದ ಸುಮಿತ್ರಾ ಬೊಳ್ಳಾಜೆ, ಸುಚಿತ್ರಾ ಬೊಳ್ಳಾಜೆ, ಬೈರಪ್ಪ ಹೈದಂಗೂರು ಸೇರಿದಂತೆ ಹಳೆ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.