Breaking News

ಪತಿಯನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ಬೇರೆ ಯುವಕನೊಂದಿಗೆ ಪರಾರಿಯಾಗಿದ್ದ ಮಹಿಳೆ ಪೊಲೀಸ್ ಠಾಣೆಗೆ ಹಾಜರು: ಪತಿಯೊಂದಿಗೆ ತೆರಳಲು ನಕಾರ

Advt_Headding_Middle

ಕಳೆದ ವಾರ ತನ್ನ ಪರಿಚಿತ ಯುವಕನೊಂದಿಗೆ ಪರಾರಿಯಾಗಿದ್ದ ಮಹಿಳೆಯೊಬ್ಬರು ನಿನ್ನೆ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪತಿಯೊಂದಿಗೆ ತೆರಳಲು ಅಸಮ್ಮತಿ ಸೂಚಿಸಿರುವುದಾಗಿ ತಿಳಿದುಬಂದಿದೆ.
ಜಯನಗರ ಕೊಯಿಂಗೋಡಿ ಸಮೀಪದ ನಿವಾಸಿ ಸಮಿತ್(ಸಂಧ್ಯಾ) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕರೆಂದು ಮನೆಗೆ ಬರುತ್ತಿದ್ದ ಪ್ರದೀಪ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾರೆಂದು ಸುಳ್ಯ ಪೊಲೀಸ್ ಠಾಣೆಗೆ ಆಕೆಯ ಪತಿ ಮನೋಜ್ ರವರು ದೂರು ನೀಡಿದ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್‌ರವರು ಪ್ರದೀಪ್ ಹಾಗೂ ಮಹಿಳೆಯನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.


ಆದರೆ ನಿನ್ನೆ ಸಂಜೆ 5.30 ಗಂಟೆಗೆ ಕೇವಲ ಮಹಿಳೆ ಮಾತ್ರ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ನಾನು ಮುಂದೆ ಪ್ರದೀಪನೊಂದಿಗೆ ಬಾಳುವ ನಿರ್ಧಾರ ಹೊಂದಿದ್ದು, ಅವರೊಂದಿಗೆ ಇರುತ್ತೇನೆಂದು ಹೇಳಿಕೆ ನೀಡಿದ್ದಾರೆ. ಇವರು ಬರುವ ವಿಷಯ ತಿಳಿದ ಪತಿ ಮನೋಜ್ ಹಾಗೂ ಮನೋಜ್‌ರವರ ತಂದೆ ಹಾಗೂ ಭಾವ, ಸಂಧ್ಯಾರ ತಂದೆ ಇವರು ಠಾಣೆಗೆ ಮಾತುಕತೆಗೆಂದು ಬಂದಿದ್ದರು. ಆದರೆ ಇವರ ಮಾತನ್ನು ಕೇಳದ ಮಹಿಳೆ ನನಗೆ ನನ್ನ ಗಂಡ ಹೊಡೆಯುತ್ತಿದ್ದು, ಅವರೊಂದಿಗೆ ನಾನು ಬಾಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಚ್ಛೇಧನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದಾಗಿ ತಿಳಿಸಿ, ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಸಂಧ್ಯಾ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದಿದ್ದು, ಸಾಲ ಪಡೆದಿರುವ ಗುಂಪಿನ ಸದಸ್ಯರುಗಳು ಠಾಣೆಗೆ ಬಂದು ಸಂಧ್ಯಾರವರನ್ನು ಕಾಯುತ್ತಿದ್ದರು. ಈ ವೇಳೆ ಪೊಲೀಸರು ನಿಮ್ಮ ಹಣದ ವ್ಯವಹಾರಗಳನ್ನು ಹೊರಗಡೆ ಮುಗಿಸಿಕೊಳ್ಳಿ ಇಲ್ಲಿ ಯಾವುದೇ ರೀತಿಯ ಮಾತುಕತೆ ಮಾಡಬಾರದೆಂದು ಹೇಳಿದ ಹಿನ್ನಲೆಯಲ್ಲಿ ಸಂಧ್ಯಾರವರ ವಿಚಾರಣೆ ಮುಗಿದು ಹೊರಬರುವ ತನಕ ಕಾದ ಮಹಿಳಾ ಸದಸ್ಯರು 2 ಗಂಟೆಯ ಬಳಿಕ ಠಾಣೆಯಿಂದ ಹೊರ ಬಂದ ಸಂಧ್ಯಾರೊಂದಿಗೆ ಸಂಘದಿಂದ ಸಾಲ ಪಡೆದ ಹಣ ನೀಡುವ ಕುರಿತು ಮಾತಿನಚಕಮಕಿ ನಡೆಸಿದರೆಂದು ಅದಕ್ಕೆ ಅವರು ಕಚೇರಿಗೆ ಹೋಗಿ ಇದನ್ನು ಸರಿ ಪಡಿಸುತ್ತೇನೆಂದು ಹೇಳಿದರೆನ್ನಲಾಗಿದೆ. ಈ ಎಲ್ಲಾ ಘಟನೆಯ ಬಳಿಕ ಠಾಣೆಗೆ ಬಂದಿದ್ದ ಮಹಿಳೆಯ ಗಂಡ ಮತ್ತು ಮನೆಯವರು ನ್ಯಾಯಾಲಯದ ಮೊರೆ ಹೋಗಿ ನ್ಯಾಯಕ್ಕಾಗಿ ಮನವಿಯನ್ನು ಸಲ್ಲಿಸುತ್ತೇವೆಂದು ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.