ಸಂಪಾಜೆ ಪ್ರಾಥಮಿಕ ಕೃಷಿ ‌ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Advt_Headding_Middle

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಶೇ. 12 ಡಿವಿಡೆಂಟ್ ಘೋಷಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವಾರ್ಷಿಕ ಮಹಾಸಭೆ ಸೆ.07 ರಂದು ಸಂಘದ ಸಮನ್ವಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ 2021-21 ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ‌ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಿತರಿಸಿದರು.

ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾದ ಬಾಲಕೃಷ್ಣ.ಬಿ ಹಾಗೂ ಸದಸ್ಯರಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಮಹಾಸಭೆಯ ನೋಟಿಸು,ವಾರ್ಷಿಕ ವರಧಿ,ಬಜೆಟಿಗಿಂತ ಜಾಸ್ತಿ ಖರ್ಚಾದ ಮೊಬಲಿಗೆ ಮಂಜೂರಾತಿ,2020-21 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ,ಲಾಭಾಂಶ ಹಂಚಿಕೆ,ಬಗ್ಗೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇಂದ್ರ ಕುಮಾರ್ ಅನುಮೋದಿಸಿದರು.
ಜನೌಷಧಿ ತೆರೆಯುವ ಬಗ್ಗೆ ಜನರಿಂದ ಪ್ರಶ್ನೆ ಬಂದಿತ್ತು, ಇದಕ್ಕೆ ಉತ್ತರವಾಗಿ ಅದಕ್ಕೆ ಅನುಮತಿ ಸಿಕ್ಕ ಕೂಡಲೇ ತೆರೆಯುತ್ತೇವೆ ಎಂದು ಸೋಮಶೇಖರ ‌ಕೊಯಿಂಗಾಜೆ ಭರವಸೆ ವ್ಯಕ್ತಪಡಿಸಿದರು. ಪ್ರಸಕ್ತ ವರ್ಷದಲ್ಲಿ 12 % ಡಿವಿಡೆಂಟ್ ಕೊಡುವುದೆಂದು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ,ನಿರ್ದೇಶಕರುಗಳಾದ ಗಣಪತಿ ಭಟ್.ಪಿ.ಎನ್,ಶ್ರೀಮತಿ ಉಷಾ.ಕೆ.ಎಂ,ಶ್ರೀಮತಿ ಸುಮತಿ ಶಕ್ತಿವೇಲು,ಆನಂದ ಪಿ.ಎಲ್,ಜಗದೀಶ ರೈ ಕೆ.ಆರ್,ಶ್ರೀಮತಿ ಯಮುನ.ಬಿ.ಎಸ್,ಶ್ರೀ ಹಮೀದ್ ಹೆಚ್,ಚಂದ್ರಶೇಖರ.ಕೆ.ಯು,ಶ್ರೀಮತಿ ರಾಜೀವಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜಯಾನಂದ ಸಂಪಾಜೆ,ಪ್ರಾರ್ಥನೆಯನ್ನು ಉಷಾ.ಕೆ.ಎಂ,ಸ್ವಾಗತವನ್ನು ಮಹಮ್ಮದ್ ಕುಂಞ ಗೂನಡ್ಕ,ವಂದನಾರ್ಪಣೆಯನ್ನು ಜಗದೀಶ್ ರೈ ವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.